/newsfirstlive-kannada/media/media_files/2025/10/28/priyank_kharge-1-2025-10-28-07-18-19.jpg)
ಆರ್​ಎಸ್​ಎಸ್ (ರಾಷ್ಟ್ರೀಯ ಸ್ವಯಂ ಸೇವಕ ಸಂಘ) ಇದು ಸ್ಥಾಪನೆಯಾಗಿ ನೂರು ವರ್ಷಗಳು ಪೂರೈಸಿವೆ. ಹೀಗಾಗಿ ದೇಶಾದ್ಯಂತ ಆರ್​ಎಸ್​​ಎಸ್​ ಶತಮಾನೋತ್ಸವ ಪ್ರಯುಕ್ತ ಶತಾಬ್ದಿ ಪಥಸಂಚಲನ ಹಮ್ಮಿಕೊಂಡಿದೆ. ಈಗಾಗಲೇ ಕರ್ನಾಟಕದ ನಾನಾ ಭಾಗದಲ್ಲಿ ಯಾವುದೇ ಆರ್​​​ಎಸ್​​ಎಸ್​​ ಪಥಸಂಚಲನ ಶಾಂತಿಯುತವಾಗಿ ಅದ್ಧೂರಿಯಾಗಿ ನಡೆಯುತ್ತಿದೆ. ಆದ್ರೆ ಚಿತ್ತಾಪುರ ಕ್ಷೇತ್ರದಲ್ಲಿ ಮಾತ್ರ ಆರ್​​ಎಸ್​ಎಸ್​​​ ಪಥಸಂಚಲನ ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಸಚಿವ ಪ್ರಿಯಾಂಕ್​ ಖರ್ಗೆ ಕ್ಷೇತ್ರದಲ್ಲಿ ಪಥಸಂಚಲನಕ್ಕೆ ಫರ್ಮಿಷನ್​ ಸಿಗುತ್ತಾ ಅನ್ನೋದು ಇವತ್ತು ಗೊತ್ತಾಗಲಿದೆ.
/filters:format(webp)/newsfirstlive-kannada/media/post_attachments/wp-content/uploads/2025/07/PRIYANK-KHARGE.jpg)
ಈಗಾಗಲೇ ಚಿತ್ತಾಪುರದಲ್ಲಿ ಆರ್​​​ಎಸ್​​ಎಸ್ ಪಥಸಂಚಲನ ಫೈಟ್ ಹೈಕೋರ್ಟ್ ಕಟಕಟೆಯಲ್ಲಿದೆ. ನವೆಂಬರ್​ 2ರಂದು ಪಥಸಂಚಲನಕ್ಕೆ ಅನುಮತಿ ಕೋರಿ ಕೋರ್ಟ್​​ ಮೊರೆ ಹೋಗಲಾಗಿದೆ. ಇನ್ನು ನವೆಂಬರ್​ 2ರಂದೇ ನಾವು ಕೂಡ ಪಥಸಂಚಲನ, ಪ್ರತಿಭಟನೆ ಮಾಡ್ತೀವಿ ಎಂದು ಭೀಮ್​ ಆರ್ಮಿ ಸೇರಿದಂತೆ 10 ಸಂಘಟನೆಗೆ ಅರ್ಜಿ ಸಲ್ಲಿಸಿವೆ. ಹೀಗಾಗಿ ಇದು ಕಗ್ಗಂಟಾಗಿದ್ದು, ಅಕ್ಟೋಬರ್​ 28ರಂದು ಶಾಂತಿ ಸಭೆ ನಡೆಸಿ, ವರದಿ ನೀಡುವಂತೆ ಕೋರ್ಟ್​​ ಜಿಲ್ಲಾಡಳಿತಕ್ಕೆ ಸೂಚನೆ ನೀಡಿತ್ತು. ಕೋರ್ಟ್​ ಸೂಚನೆಯಂತೆ ಜಿಲ್ಲಾಡಳಿತ ಇವತ್ತು ಶಾಂತಿ ಸಭೆ ನಡೆಸಲು ಟೈಮ್​​ ಫಿಕ್ಸ್​ ಮಾಡಿದೆ.
ಇವತ್ತು ಬೆಳಗ್ಗೆ 11.30ಕ್ಕೆ ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಂತಿ ಸಭೆ ನಡೆಯಲಿದೆ. ಆರ್​ಎಸ್​​ಎಸ್​ ಸೇರಿದಂತೆ 10 ಸಂಘಟನೆಗಳಿಗೆ ಸಭೆಗೆ ಬರುವಂತೆ ಜಿಲ್ಲಾಡಳಿತ ನೋಟಿಸ್​ ಜಾರಿ ಮಾಡಿದೆ. ಪ್ರತಿ ಸಂಘಟನೆಯಿಂದ ಮೂವರು ಸದಸ್ಯರು ಸಭೆಗೆ ಹಾಜರಾಗಿ ಲಿಖಿತ ಹೇಳಿಕೆ ಸಲ್ಲಿಸುವಂತೆ ಡಿಸಿ ಸೂಚಿಸಿದ್ದಾರೆ.
/filters:format(webp)/newsfirstlive-kannada/media/media_files/2025/10/14/rss-2025-10-14-07-11-51.jpg)
ಶಾಂತಿ ಸಭೆಯಲ್ಲಿ ಪಥ ಸಂಚಲನಕ್ಕೆ ಅನುಮತಿ ಕೊಡುವಂತೆ ಮನವಿ
ಇವತ್ತಿನ ಶಾಂತಿ ಸಭೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಇದರ ನಡುವೆ ಬಿಜೆಪಿಯ ಮಾಜಿ ಸಂಸದ ಉಮೇಶ್​ ಜಾಧವ್​​, ಶಾಂತಿ ಸಭೆಯಲ್ಲಿ ನವೆಂಬರ್ 2 ರಂದು ಚಿತ್ತಾಪುರದಲ್ಲಿ ಪಥ ಸಂಚಲನ ನಡೆಸಲು ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.
ಅದೇನೆ ಇರಲಿ, ರಾಜ್ಯದಲ್ಲಿ ಆರ್​​ಎಸ್​​ಎಸ್​ ಸಂಘರ್ಷ ತಾರಕಕ್ಕೇರಿದೆ. ಅದರಲ್ಲೂ ಸಚಿವ ಪ್ರಿಯಾಂಕ್​​ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಇದು ಪ್ರತಿಷ್ಟೆಯ ಪ್ರಶ್ನೆಯಾಗಿದೆ. ಹೀಗಾಗಿ ಇವತ್ತು ಜಿಲ್ಲಾಡಳಿತ ಶಾಂತಿ ಸಭೆ ನಡೆಸಿ, ವರದಿಯನ್ನು ಕೋರ್ಟ್​ಗೆ ನೀಡಲಿದ್ದು, ಪಥಸಂಚಲನ ವಿಷ್ಯದಲ್ಲಿ ಅಂತಿಮವಾಗಿ ಕೋರ್ಟ್​​ ತೀರ್ಪು ಏನ್​ ಬರುತ್ತೆ ಅನ್ನೋ ಕುತೂಹಲ ಮೂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us