newsfirstkannada.com

ದೇಶದಲ್ಲಿ ಹಿಂದೂಗಳ ಸಂಖ್ಯೆ ಕುಸಿತ; ಮುಸ್ಲಿಮರು ಭಾರೀ ಏರಿಕೆ: EAC-PM ಸ್ಫೋಟಕ ವರದಿ

Share :

Published May 9, 2024 at 5:53pm

    ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳ ಜನಸಂಖ್ಯೆ ಶೇ. 84 ರಷ್ಟಿತ್ತು

    ಇದು ಪ್ರಧಾನ ಮಂತ್ರಿ ಆರ್ಥಿಕ ಸಲಹಾ ಮಂಡಳಿಯ ಅಧ್ಯಯನ ವರದಿ

    ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಸಿಖ್ಖರ ಜನಸಂಖ್ಯೆ ಭಾರೀ ಏರಿಕೆ

ನವದೆಹಲಿ: ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳ ಜನಸಂಖ್ಯೆ ಇಳಿಕೆಯಾಗಿದೆ. ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಸಿಖ್ಖರ ಜನಸಂಖ್ಯೆ ಭಾರೀ ಏರಿಕೆ ಕಂಡಿದೆ. ಪ್ರಧಾನ ಮಂತ್ರಿ ಆರ್ಥಿಕ ಸಲಹಾ ಮಂಡಳಿ ಈ ಬಗ್ಗೆ ಮಹತ್ವದ ಅಧ್ಯಯನ ನಡೆಸಿದ್ದು, ಸ್ಫೋಟಕ ವರದಿ ಬಹಿರಂಗವಾಗಿದೆ.

ಪ್ರಧಾನ ಮಂತ್ರಿ ಆರ್ಥಿಕ ಸಲಹಾ ಮಂಡಳಿ (EAC-PM) 1950 ಮತ್ತು 2015ರ ನಡುವೆ ಅಧ್ಯಯನ ಮಾಡಿದ್ದು, ಜನಸಂಖ್ಯೆಯಲ್ಲಿ ಭಾರೀ ಏರಿಳಿತ ಆಗಿದೆ ಎನ್ನಲಾಗಿದೆ. ಪ್ರಮುಖವಾಗಿ ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳ ಜನಸಂಖ್ಯೆ ಶೇಕಡಾ 7.8ರಷ್ಟು ಇಳಿಕೆಯಾಗಿದೆ ಅನ್ನೋ ಮಾಹಿತಿ ಬಯಲಾಗಿದೆ.

ಇದನ್ನೂ ಓದಿ: ‘ಮುಸ್ಲಿಂರಿಗೆ ದೇಶದ ಸಂಪತ್ತು’- ಕಾಂಗ್ರೆಸ್, BJP ಮಧ್ಯೆ ಮಂಗಳಸೂತ್ರ ಫೈಟ್; ಪ್ರಧಾನಿ ಮೋದಿ ಹೇಳಿದ್ದೇನು? 

1950 ಮತ್ತು 2015ರ ನಡುವೆ ಹಿಂದೂಗಳ ಜನಸಂಖ್ಯೆ 7.8% ಕುಸಿತ ಕಂಡಿದೆ. 1950 ಮತ್ತು 2015ರ ನಡುವೆ ಮುಸ್ಲಿಮರ ಸಂಖ್ಯೆ ಶೇಕಡಾ 43.15ರಷ್ಟು ಹೆಚ್ಚಳವಾಗಿದೆ. ಕ್ರಿಶ್ಚಿಯನ್ನರ ಸಂಖ್ಯೆ ಶೇಕಡಾ 5.38ರಷ್ಟು ಏರಿಕೆಯಾಗಿದೆ. ಸಿಖ್ಖರ ಜನಸಂಖ್ಯೆ ಕೂಡ ಶೇಕಡಾ 6.58 ಹೆಚ್ಚಳವಾಗಿದೆ ಎನ್ನಲಾಗಿದೆ.

1950ರಲ್ಲಿ ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳ ಜನಸಂಖ್ಯೆ ಶೇಕಡಾ 84 ರಷ್ಟಿತ್ತು. ಆದ್ರೆ 2015ರಲ್ಲಿ ಹಿಂದೂಗಳ ಜನಸಂಖ್ಯೆ ಶೇಕಡಾ 78ಕ್ಕೆ ಕುಸಿತ ಕಂಡಿದೆ. 1950ರಲ್ಲಿ ಮುಸ್ಲಿಮರ ಜನಸಂಖ್ಯೆ 9.84% ಇದ್ದು 2015ರಲ್ಲಿ 14.09 ಏರಿಕೆ ಕಂಡಿದೆ. ಕೇವಲ ಭಾರತದಲ್ಲಷ್ಟೇ ಅಲ್ಲ ಪಾಕಿಸ್ತಾನ, ಬಾಂಗ್ಲಾದೇಶದಲ್ಲೂ ಮುಸ್ಲಿಂ ಜನಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೇಶದಲ್ಲಿ ಹಿಂದೂಗಳ ಸಂಖ್ಯೆ ಕುಸಿತ; ಮುಸ್ಲಿಮರು ಭಾರೀ ಏರಿಕೆ: EAC-PM ಸ್ಫೋಟಕ ವರದಿ

https://newsfirstlive.com/wp-content/uploads/2024/05/India-Population.jpg

Load More