/newsfirstlive-kannada/media/post_attachments/wp-content/uploads/2024/09/PORTBLAIR-RENAMED.jpg)
ನವದೆಹಲಿ: ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಗುಲಾಮಿತನ ಸಂಕೇತದ ಒಂದೊಂದೇ ಸಂಕೋಲೆಗಳನ್ನು ಕಳಚಿ ಎಸೆಯುತ್ತಿದೆ. ಬ್ರಿಟಿಷ್ ಆಡಳಿತದ ಕಾಲದಿಂದಲೂ ಈ ದೇಶದಲ್ಲಿ ಅನೇಕ ಗುಲಾಮಿತನದ ಸಂಕೇತಗಳಿದ್ದವು. ಅದರಲ್ಲಿ ರಾಜಪಥ್ ಕೂಡ ಒಂದಾಗಿತ್ತು ರಾಜಪಥ್ ಹೆಸರನ್ನು ಕರ್ತವ್ಯ ಪಥ ಎಂದು ಮರುನಾಮಕರಣ ಮಾಡಿದ್ದ ಮೋದಿ ಸರ್ಕಾರ ಈಗ ಅಂಡಮಾನ್ ನಿಕೋಬಾರ್ ರಾಜಧಾನಿಯಾಗಿರುವ ಪೋರ್ಟ್​ಬ್ಲೇರ್​ ಹೆಸರನ್ನು ಕೂಡ ಮರುನಾಮಕರಣ ಮಾಡುತ್ತಿದೆ.
ಇದನ್ನೂ ಓದಿ:6 ತಿಂಗಳ ಬಳಿಕ ಅರವಿಂದ್ ಕೇಜ್ರಿವಾಲ್‌ಗೆ ಬಿಡುಗಡೆ ಭಾಗ್ಯ; ಪಂಜರದ ಗಿಳಿಗೆ ಹಾಕಿರೋ ಷರತ್ತುಗಳೇನು ಗೊತ್ತಾ?
ಈ ಬಗ್ಗೆ ಖುದ್ದು ಅಮಿತ್ ಶಾ ಅವರೇ ತಮ್ಮ ಎಕ್ಸ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.ಪ್ರಧಾನಿ ಮೋದಿಯವರ ದೂರದೃಷ್ಟಿಯ ಪ್ರೇರಣೆಯಿಂದ ಹಾಗೂ ವಸಹಾತುಶಾಹಿ ಸಂಕೋಲೆಗಳಿಂದ ಮುಕ್ತವಾಗುವು ಉದ್ದೇಶದಿಂದ ಇಂದು ನಾವು ಅಂಡಮಾನ್ ನಿಕೋಬಾರ್ ರಾಜಧಾನಿ ಪೋರ್ಟ್​ಬ್ಲೇರ್​ನ್ನು ಶ್ರೀವಿಜಯಪುರಂ ಎಂದು ಮರುನಾಮಕರಣ ಮಾಡಲು ನಿರ್ಧರಿಸಿದ್ದೇವೆ.
ಈ ಹಿಂದೆ ಇದ್ದಿದ್ದ ಹೆಸರು ವಸಹಾತುಶಾಹಿಯ ಗುರುತಾಗಿತ್ತು. ಶ್ರೀವಿಜಯಪುರಂ ಸ್ವಾತಂತ್ರ್ಯ ಸಂಗ್ರಾಮದ ಹಲವು ಗೆಲುವುಗಳ ಗುರುತು ಹಾಗೂ ಅಂಡಮಾನ್ ನಿಕೋಬಾರ್ ಸ್ವಾತಂತ್ರ್ಯ ಹೋರಾಟದಲ್ಲಿ ಬಹುಪ್ರಮುಖ ಪಾತ್ರವಹಿಸಿದೆ. ಸ್ವಾತಂತ್ರ್ಯ ಸಂಗ್ರಾಮ ಹಾಗೂ ಭಾರತದ ಇತಿಹಾಸದಲ್ಲಿ ಅಂಡಮಾನ್ ನಿಕೋಬಾರ್​ ಸಾಟಿಯಿಲ್ಲದ ಸ್ಥಾನ ಪಡೆದಿದೆ. ಈ ಹಿಂದೆ ಚೋಳ ಸಾಮ್ರಾಜ್ಯದ ನೌಕಾನೆಲೆಯಾಗಿ ಸೇವೆ ಸಲ್ಲಿಸಿದ್ದ ಈ ನೆಲ ಈಗ ನಮಗೆ ಅಭಿವೃದ್ಧಿಯ ಆಶಾಭಾವದ ನೆಲೆಯಾಗಿ ನಿಂತಿದೆ.
Inspired by the vision of PM @narendramodi Ji, to free the nation from the colonial imprints, today we have decided to rename Port Blair as "Sri Vijaya Puram."
While the earlier name had a colonial legacy, Sri Vijaya Puram symbolises the victory achieved in our freedom struggle…
— Amit Shah (@AmitShah)
Inspired by the vision of PM @narendramodi Ji, to free the nation from the colonial imprints, today we have decided to rename Port Blair as "Sri Vijaya Puram."
While the earlier name had a colonial legacy, Sri Vijaya Puram symbolises the victory achieved in our freedom struggle…— Amit Shah (@AmitShah) September 13, 2024
">September 13, 2024
ಇದೇ ನೆಲದಲ್ಲಿ ನಮ್ಮ ದೇಶದ ತಿರಂಗಾ ಮೊಟ್ಟ ಮೊದಲ ಬಾರಿಗೆ ಗಗನದಲ್ಲಿ ಪಟಪಟಿಸಿದ್ದು ನೇತಾಜಿ ಸುಭಾಷ್ ಚಂದ್ರ ಭೋಸ್​ ಅವರಿಂದ. ಸ್ವಾತಂತ್ರ್ಯ ಹೋರಾಟದ ಹಾದಿಯಲ್ಲಿ ವೀರ ಸಾವರ್ಕರ್ ಕರಿನೀರಿನ ಶಿಕ್ಷೆ ಅನುಭವಿಸಿದ ಜೈಲು ಕೂಡ ಇಲ್ಲಿಯೇ ಇದೆ ಎಂದು ಪೋಸ್ಟ್ ಮಾಡಿದ್ದಾರೆ. ಅಂಡಮಾನ್ ನಿಕೋಬಾರ್​ನ ರಾಜಧಾನಿ ಇನ್ಮುಂದೆ ಶ್ರೀವಿಜಯಪುರಂ ಎಂದು ಕರೆಸಿಕೊಳ್ಳಲಿದೆ. ಈ ಮೂಲಕ ದೇಶದ ಮತ್ತೊಂದು ವಸಾಹತುಶಾಹಿಯ ಸಂಕೇತವೊಂದು ಕಳಚಿಬಿದ್ದಂತಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ