ಲಕ್ಷ ಲಕ್ಷ ಹಣ ದೋಚಿ ಎಸ್ಕೇಪ್ ಆಗಿದ್ದ ಕಳ್ಳರಿಗಾಗಿ ತೀವ್ರ ಹುಡುಕಾಟ
ಈ ಖತರ್ನಾಕ್ ಕಳ್ಳರ ಗ್ಯಾಂಗ್ನಿಂದ ಹೆಚ್ಚಾಯ್ತು ಜನರಲ್ಲಿ ಆತಂಕ
ಸೌಂಡ್ ಬಾರದ ಗ್ಯಾಸ್ ಕಟರ್ ಮೂಲಕ ಮನೆಗೆ ಖದೀಮರ ಎಂಟ್ರಿ
ನೋಯ್ಡಾ: ಚಿನ್ನ, ಬೆಳ್ಳಿ, ಚಪ್ಪಲಿ, ಬಟ್ಟೆ, ಫೋನ್, ದುಡ್ಡು ಕಳ್ಳತನ ಮಾಡುವವರನ್ನು ನಾವೆಲ್ಲಾ ನೋಡಿದ್ದೇವೆ. ಆದರೆ ಇವರು ಅಂತಿಂಥಾ ಕಳ್ಳರಲ್ಲ. ಇವರು ಅಸಲಿ ಪಕೋಡ ಕಳ್ಳರು. ಹೌದು, ಉತ್ತರಪ್ರದೇಶದ ನೋಯ್ಡಾದಲ್ಲಿ ಒಂದೇ ದಿನ ಸುಮಾರು 6ಕ್ಕೂ ಹೆಚ್ಚು ಮನೆಗಳಲ್ಲಿ ಕಳ್ಳತನವಾಗಿತ್ತು. ಪ್ರತಿ ಮನೆಯಲ್ಲೂ ಕಳ್ಳರು ಒಂದೊಂದು ಕುರುಹುಗಳನ್ನ ಬಿಟ್ಟು ಹೋಗಿದ್ರು. ಪ್ರತಿ ಮನೆಯಲ್ಲೂ ಲಕ್ಷ ಬೆಲೆಬಾಳುವ ವಸ್ತುಗಳೆಲ್ಲಾ ಕಳ್ಳತನವಾಗಿತ್ತು. ಒಂದರ ಮೇಲೊಂದರಂತೆ ಮನೆ ಕಳ್ಳತನದ ಬಗ್ಗೆ ಪೊಲೀಸರಿಗೆ ದೂರು ಬರ್ತಾನೆ ಇತ್ತು. ಹೀಗಾಗಿ ಸ್ಪಾಟ್ಗೆ ಹೋಗಿ ನೋಡಿದ ಪೊಲೀಸರು ಕಳ್ಳರ ಗ್ಯಾಂಗ್ ಬಗ್ಗೆ ತಲೆ ಕೆಡಿಸಿಕೊಂಡಿದ್ರು.
ಇದನ್ನೂ ಓದಿ: ‘ದರ್ಶನ್ ತುಂಬಾ ಮುಗ್ಧ ಹುಡುಗ’.. ದಾಸನ ಸ್ಥಿತಿ ನೆನೆದು ಕಣ್ಣೀರು ಹಾಕಿದ ಹಿರಿಯ ನಟಿ ಗಿರಿಜಾ ಲೋಕೇಶ್
ಆದ್ರೆ, ಹೀಗೆ ಬೆಲೆ ಬಾಳೋ ವಸ್ತುಗಳನ್ನ ಕಳ್ಳತನ ಮಾಡ್ತಿದ್ದ ಖದೀಮರು ಮನೆಯಲ್ಲಿದ್ದ ಅಡುಗೆ ಮನೆಗೂ ಎಂಟ್ರಿ ಕೊಟ್ಟಿದ್ದಾರೆ. ಫ್ರಿಡ್ಜ್ನಲ್ಲಿರೋ ಐಟಂ ಎಲ್ಲಾ ಕದ್ದು ತಿಂದಿದ್ದಾರೆ. ಅಷ್ಟೇ ಅಲ್ಲಾ ಒಂದು ಮನೆಯಲ್ಲಿ ಬಿಸಿಬಿಸಿ ಪಕೋಡ ಮಾಡಿಕೊಂಡು ತಿಂದಿದ್ದಾರೆ. ಇನ್ನು, ಕೆಲವೆಡೆ ಬೀಡಾ ತಿಂದು ಅಲ್ಲೇ ಉಗಿದಿರೋದು ಪತ್ತೆಯಾಗಿದೆ. ಇನ್ನೂ, ಕೆಲವು ಮನೆಯಲ್ಲಿ ಗಂಟೆಗಟ್ಟಲೇ ಟೈಮ್ ಪಾಸ್ ಮಾಡಿದ್ದಾರೆ ಅಂತ ಹೇಳಲಾಗ್ತಿದೆ.
ನೋಯ್ಡಾ ಪೊಲೀಸರ ಪ್ರಕಾರ, ಜನತಾ ಫ್ಲಾಟ್ನಲ್ಲಿ 6 ರಿಂದ 7 ಕೇಸ್ಗಳಲ್ಲಿ ಇದೇ ರೀತಿ ಕಳ್ಳತನವಾಗಿದ್ದು, ಶ್ರೀರಾಮ್ ತ್ರಿಪತಿ ಎಂಬುವವರ ಮನೆಯಲ್ಲಿ ಚಿನ್ನ ಹಾಗೂ 40 ಲಕ್ಷ ಬೆಲೆ ಬಾಳೋ ವಸ್ತಗಳನ್ನ ಕದ್ದಿದ್ದಾರಂತೆ. ಸೌಂಡ್ ಬಾರದ ಗ್ಯಾಸ್ ಕಟರ್ ಮೂಲಕ ಮನೆಯ ಲಾಕ್ ಮುರಿದು ಎಂಟ್ರಿ ಕೊಡ್ತಿದ್ದ ಕಳ್ಳರು ಈಸಿಯಾಗಿ ಮನೆಯಲ್ಲಿ ಕಾಲಕಳೆದು ಇದ್ದಬದ್ದ ಚಿನ್ನ, ವಡವೆ ಕದ್ದು ಎಸ್ಕೇಪ್ ಆಗಿದ್ದಾರೆ.
ಇದೇ ಮನೆಯಲ್ಲಿ ಪಕೋಡ ಮಾಡ್ಕೊಂಡ್ ತಿಂದಿರೋ ಕಳ್ಳರು ಮನೆಯಲ್ಲಿದ್ದ ಟಿಶೂ ಪೇಪರ್ನಲ್ಲಿ ಪಕೋಡಾದ ಎಣ್ಣೆ ಹಿಂಡಿರೋದು ಪತ್ತೆಯಾಗಿದೆ. ಇದೇ ರೀತಿ ರಿಚಾ ಅವರ ಮನೆಯಲ್ಲೂ 3 ಲಕ್ಷ ಹಣ ದೋಚಿರೋ ಕಳ್ಳರು ಇದೇ ಮನೆಯ ಬಾತ್ರೂಂ ಕೂಡ ಯೂಸ್ ಮಾಡಿದ್ದು ಬೀಡಿ ಹಾಗೂ ಪಾನ್ ತಿಂದು ಉಗಿದಿರೋದು ಕಂಡು ಬಂದಿದೆ. ಸದ್ಯ ಕಳ್ಳರ ಗ್ಯಾಂಗ್ನಿಂದ ನೋಯ್ಡಾದಲ್ಲಿ ಆತಂಕ ಹೆಚ್ಚಾಗಿದ್ದು ಪೊಲೀಸರು ಖದೀಮರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ