ದೀಪಿಕಾಗೆ ಹೆಲ್ಪ್ ಮಾಡಲು ಮುಂದಾದ ಪ್ರಭಾಸ್, ಬಿಗ್​ಬಿ​; ಫ್ಯಾನ್ಸ್​ಗಳಿಂದ ಭಾರೀ ಮೆಚ್ಚುಗೆ; ವಿಡಿಯೋ ವೈರಲ್!

author-image
Veena Gangani
Updated On
DeepikaPadukone: ಕೊನೆಗೂ ಆಸೆ ಈಡೇರಿಸಿಕೊಂಡ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ; ಏನದು?
Advertisment
  • 'ಕಲ್ಕಿ 2898 AD' ಸಿನಿಮಾ ದೀಪಿಕಾ ಪಡುಕೋಣೆ ಪಡೆದ ಸಂಭಾವನೆ ಎಷ್ಟು?
  • ಸಿನಿಮಾದಿಂದ ಬ್ರೇಕ್ ತೆಗೆದುಕೊಂಡ ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ
  • ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ನಟಿಯ ವಿಡಿಯೋ

ಬಾಲಿವುಡ್​ ಖ್ಯಾತ ನಟಿ ದೀಪಿಕಾ ಪಡುಕೋಣೆ ತಾಯಿಯಾಗ್ತಿರುವ ಖುಷಿಯಲ್ಲಿದ್ದಾರೆ. ನಟ ರಣವೀರ್ ಸಿಂಗ್ ಹಾಗೂ ದೀಪಿಕಾ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ. ನಟಿ ದೀಪಿಕಾ ಅವರು ಕೂಡ ತನ್ನ ಪ್ರೆಗ್ನೆನ್ಸಿಯ ಪ್ರತಿ ಕ್ಷಣವನ್ನು ಎಂಜಾಯ್ ಮಾಡುತ್ತಿದ್ದಾರೆ. ಗರ್ಭಿಣಿಯಾಗಿರುವ ದೀಪಿಕಾ ಪಡುಕೋಣೆ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ದರ್ಶನ್‌ ಗ್ಯಾಂಗ್ ವಿರುದ್ಧ 8 ಹೊಸ ಸೆಕ್ಷನ್‌ ಸೇರಿಸಿದ ಪೊಲೀಸರು.. ಯಾವ್ಯಾವ ಸೆಕ್ಷನ್‌ಗೆ ಎಷ್ಟು ವರ್ಷ ಶಿಕ್ಷೆ?


ಇದರ ಮಧ್ಯೆ ನಿನ್ನೆ ಮುಂಬೈನಲ್ಲಿ ನಡೆದ 'ಕಲ್ಕಿ 2898 AD' ಸಿನಿಮಾ ಅದ್ಧೂರಿ ಪ್ರೀ ರಿಲೀಸ್ ಇವೆಂಟ್​ನಲ್ಲಿ ಬೇಬಿ ಬಂಪ್ ಜೊತೆ ನಟಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ನಟಿ ದೀಪಿಕಾ ಪಡುಕೋಣೆ ಸಖತ್​ ಕ್ಯೂಟ್​ ಆಗಿ ಕಾಣಿಸಿಕೊಂಡಿದ್ದಾರೆ. ಪ್ರೀ ರಿಲೀಸ್ ಇವೆಂಟ್​ನಲ್ಲಿ ನಟಿ ದೀಪಿಕಾ ಪಡುಕೋಣೆ ಮುಖ್ಯ ಆಕರ್ಷಣೆಯಾಗಿ ಕಾಣಿಸಿಕೊಂಡಿದ್ದಾರೆ. ಬೇಬಿ ಬಂಪ್​ನಲ್ಲಿ ವೇದಿಕೆ ಮೇಲೆ ಕಾಣಿಸಿಕೊಂಡ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ.

ಇದನ್ನೂ ಓದಿ: 1000 ಗಡಿ ತಲುಪಿದ ಸಾವು.. ಹಜ್ ಯಾತ್ರೆ ಇತಿಹಾಸದಲ್ಲೇ 3ನೇ ಅತಿ ದೊಡ್ಡ ದುರಂತ; ಆಘಾತಕಾರಿ ವರದಿ!

ಅದರಲ್ಲೂ ನಟಿ ದೀಪಿಕಾ ಪಡುಕೋಣೆ ವೇದಿಕೆ ಮೇಲೆ ಹತ್ತುವಾಗ ಹಾಗೂ ಕೆಳಗಡೆ ಇಳಿಯುವಾಗ ನಟ ಪ್ರಭಾಸ್​ ಹಾಗೂ ಅಮಿತಾಭ್ ಬಚ್ಚನ್ ಅವರು ಸಹಾಯ ಮಾಡಿಯೋ ವಿಡಿಯೋ ಕ್ಲಿಪ್ ಒಂದು ವೈರಲ್ ಆಗಿದ್ದು, ಇದನ್ನು ನೋಡಿದ ನೆಟ್ಟಿಗರು ಹೆಣ್ಣಿನ ಜೊತೆ ವರ್ತಿಸುವ ರೀತಿ ಇದು ಎಂದು ಹೊಗಳುತ್ತಿದ್ದಾರೆ. ಜೊತೆಗೆ ಅದೇಷ್ಟೂ ಕಾಳಜಿಯಿಂದ ನಮ್ಮ ನಟಿಯನ್ನು ನೋಡಿಕೊಂಡಿದ್ದಾರೆ ಅಂತ ಕಾಮೆಂಟ್​ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು, ‘ಕಲ್ಕಿ 2898 ಎಡಿ’ ಸಿನಿಮಾ ಜೂನ್ 27 ರಂದು ವಿಶ್ವದಾದ್ಯಂತ ಏಕಕಾಲಕ್ಕೆ ತೆರೆಗೆ ಬರಲಿದ್ದು, ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ. ಹೀಗಾಗಿ ಸಿನಿಮಾದ ಪ್ರಚಾರವನ್ನು ಚಿತ್ರತಂಡ ಜೋರಾಗಿ ಮಾಡುತ್ತಿದೆ. 'ಕಲ್ಕಿ 2898 AD'ಸಿನಿಮಾಗಾಗಿ ಬಾಲಿವುಡ್‌ ಬೆಡಗಿ ದೀಪಿಕಾ ಪಡುಕೋಣೆ 30 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment