ಪ್ರಭುದೇವ ಅವರ ಅಜ್ಜಿ ನಿಧನ.. ಸಹೋದರನೊಂದಿಗೆ ಮೈಸೂರಿಗೆ ಆಗಮಿಸಿದ ಬಹುಭಾಷಾ ನಟ

author-image
AS Harshith
Updated On
ಪ್ರಭುದೇವ ಅವರ ಅಜ್ಜಿ ನಿಧನ.. ಸಹೋದರನೊಂದಿಗೆ ಮೈಸೂರಿಗೆ ಆಗಮಿಸಿದ ಬಹುಭಾಷಾ ನಟ 
Advertisment
  • ಅಜ್ಜಿಯ ಅಂತ್ಯಕ್ರಿಯೆಯಲ್ಲಿ ನಟ ಪ್ರಭುದೇವ ಭಾಗಿ
  • ಸಹೋದರ ನಾಗೇಂದ್ರ ಜೊತೆಗೆ ಪ್ರಭುದೇವ ಮೈಸೂರಿಗೆ ಆಗಮನ
  • ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದ ಬಹುಭಾಷಾ ನಟ

ಮೈಸೂರು: ಬಹುಭಾಷಾ ನಟ ಪ್ರಭುದೇವ ಅವರ ಅಜ್ಜಿ ಪುಟ್ಟಮ್ಮಣ್ಣಿ (96) ನಿಧನರಾಗಿದ್ದಾರೆ. ವಯೋ ಸಹಜ ಕಾರಣಗಳಿಂದ ಬಳಲುತ್ತಿದ್ದ ಅವರು ಕಳೆದ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಪ್ರಭುದೇವ ತಾಯಿ ಅವರ ತಾಯಿ ಪುಟ್ಟಮ್ಮಣ್ಣಿ ನಂಜನಗೂಡು ತಾಲ್ಲೂಕಿನ ದೂರ ಗ್ರಾಮದಲ್ಲಿ ಕಳೆದ ರಾತ್ರಿ ನಿಧನರಾಗಿದ್ದಾರೆ. ಅಜ್ಜಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಇಂದು ಮೈಸೂರಿಗೆ ಪ್ರಭುದೇವ ಹಾಗೂ ಸಹೋದರ ನಾಗೇಂದ್ರ ಆಗಮಿಸಿದ್ದಾರೆ.

ಇದನ್ನೂ ಓದಿ: ಕಂಪೌಂಡ್‌ಗೆ ಡಿಕ್ಕಿ ಹೊಡೆದ ಬೈಕ್​.. ಇಬ್ಬರು ಸ್ಥಳದಲ್ಲೇ ಸಾವು

ಅಜ್ಜಿಯ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಪ್ರಭುದೇವ ಅವರು ಚೆನ್ನೈ ನಿಂದ ಮೈಸೂರಿಗೆ ಆಗಮಿಸಿದ್ದಾರೆ. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.

ಇದನ್ನೂ ಓದಿ: ಟ್ರ್ಯಾಕ್ಟರ್ ಸಾಲ, ಬೆಳೆ ಸಾಲ, ಕೈ ಸಾಲ.. ಸಾಲಬಾಧೆಗೆ ಬೇಸತ್ತು ನೇಣು ಹಾಕಿಕೊಂಡ ರೈತ

ಬಳಿಕ ಪ್ರಭುದೇವ ಸಹೋದರ ಕಾರಿನ ಮೂಲಕ ದೂರ ಗ್ರಾಮಕ್ಕೆ ತೆರಳಿದ್ದಾರೆ. ಇಂದು ಸಂಜೆ ಪುಟ್ಟಮ್ಮಣ್ಣಿಯವರ ಅಂತ್ಯಕ್ರಿಯೆ ನೆರವೇರಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment