ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್‌.. ಬಸವನಗುಡಿ ಮನೆಯಲ್ಲಿ SIT ತನಿಖಾ ತಂಡಕ್ಕೆ ಸ್ಫೋಟಕ ಸಾಕ್ಷ್ಯ ಪತ್ತೆ?

author-image
admin
Updated On
ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್‌.. ಬಸವನಗುಡಿ ಮನೆಯಲ್ಲಿ SIT ತನಿಖಾ ತಂಡಕ್ಕೆ ಸ್ಫೋಟಕ ಸಾಕ್ಷ್ಯ ಪತ್ತೆ?
Advertisment
  • ವೈರಲ್ ಆಗಿರೋ ವಿಡಿಯೋದಲ್ಲಿ ಎಲ್ಲೂ ಪ್ರಜ್ವಲ್ ಮುಖ ಕಾಣಿಸ್ತಿಲ್ಲ
  • ಮನೆಯ ಕೆಲ ಜಾಗಗಳನ್ನ ಎವಿಡೆನ್ಸ್ ಆಗಿ ಪರಿಗಣಿಸಲು SIT ನಿರ್ಧಾರ
  • ವಿಡಿಯೋದಲ್ಲಿರುವ ಜಾಗಕ್ಕೂ ಬಸವನಗುಡಿ ಮನೆಯಲ್ಲಿರೋ ಜಾಗಕ್ಕೂ ತಾಳೆ

ಬೆಂಗಳೂರು: ಹಾಸನದಲ್ಲಿ ವೈರಲ್ ಆದ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ SIT ತನಿಖಾ ತಂಡ ಬಿಗ್ ಶಾಕ್ ಕೊಟ್ಟಿದೆ. ಇಂದು ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಬಸವನಗುಡಿ ಮನೆಯಲ್ಲಿ ಮಹತ್ವದ ಸ್ಥಳ ಮಹಜರು ಮಾಡಲಾಗಿದೆ.

ಪ್ರಜ್ವಲ್ ರೇವಣ್ಣ ವಿರುದ್ಧ ಆರೋಪ ಮಾಡಿರುವ ಸಂತ್ರಸ್ಥೆ ಹೇಳಿಕೆ ಮೇರೆಗೆ ಎಸ್‌ಐಟಿ ಅಧಿಕಾರಿಗಳು ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ. ಬಸವನಗುಡಿ ಮನೆಯಲ್ಲಿ ಮಹಜರು ನಡೆಸುವಾಗ ಎಸ್ಐಟಿ ತಂಡ ಕೆಲ ವಸ್ತುಗಳನ್ನು ಎವಿಡೆನ್ಸ್ ಆಗಿ ಪರಿಗಣಿಸಿದೆ. ಮಹಜರು ಪ್ರಕ್ರಿಯೆ ಮೂಲಕ ಪ್ರಕರಣಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಕಲೆ ಹಾಕಲಾಗಿದೆ.

publive-image

ಹೆಚ್‌.ಡಿ ರೇವಣ್ಣ ಅವರ ಬಸವನಗುಡಿ ಮನೆಗೆ ಕಂಪ್ಯೂಟರ್ ಸಮೇತ ಅಧಿಕಾರಿಗಳು ಆಗಮಿಸಿದ್ದರು. ಸ್ಥಳ ಮಹಜರು ಮಾಡಿದ ಬಳಿಕ ಆರೋಪಿಯ ಹೇಳಿಕೆಯನ್ನು ಇದೇ ಸಿಸ್ಟಮ್‌ನಲ್ಲಿ ಟೈಪಿಂಗ್ ಮೂಲಕ ಎಸ್‌ಐಟಿ ತಂಡ ದಾಖಲಿಸಿಕೊಂಡಿದೆ.

ವೈರಲ್ ಆಗಿರೋ ವಿಡಿಯೋದಲ್ಲಿ ಎಲ್ಲೂ ಪ್ರಜ್ವಲ್ ಮುಖ ಕಾಣಿಸ್ತಿಲ್ಲ. ಹೀಗಾಗಿ ಮನೆಯ ಕೆಲ ಜಾಗಗಳನ್ನ ಎವಿಡೆನ್ಸ್ ಆಗಿ ಅಧಿಕಾರಿಗಳು ಪರಿಗಣಿಸಿದ್ದಾರೆ. ಸಂತ್ರಸ್ಥೆ ದೂರಿನಲ್ಲಿ ಉಲ್ಲೇಖ ಮಾಡಿರುವ ಜಾಗ, ಅಶ್ಲೀಲ ವಿಡಿಯೋದಲ್ಲಿರೋ ಜಾಗಗಳ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಸಂತ್ರಸ್ಥೆ ನೀಡಿರುವ ದೂರಿನ ಮೇರೆೆಗೆ ಈ ಸ್ಥಳ ಮಹಜರು ಪ್ರಕ್ರಿಯೆ ನಡೆದಿದೆ. ಅಶ್ಲೀಲ ವಿಡಿಯೋದಲ್ಲಿರುವ ಜಾಗಕ್ಕೂ ಬಸವನಗುಡಿ ಮನೆಯಲ್ಲಿರೋ ಜಾಗಕ್ಕೂ ತಾಳೆ ಆಗ್ತಿದೆಯಾ ಎಂದು ಪರಿಶೀಲನೆ ನಡೆಸಲಾಗಿದೆ.

ಇದನ್ನೂ ಓದಿ: ದೊಡ್ಮನೆಯಲ್ಲಿ ಮೊದಲ ಡಿವೋರ್ಸ್.. ನಟ ಯುವ ರಾಜ್‌ಕುಮಾರ್, ಶ್ರೀದೇವಿ ವಿಚ್ಛೇದನಕ್ಕೆ ಕಾರಣವೇನು? 

ತಾಯಿಯ ಮುಂದೆ ಮಗನ ವಿಚಾರಣೆ!
ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ಅವರನ್ನು ಬಸವನಗುಡಿ ಮನೆಗೆ ಕರೆದುಕೊಂಡು ಹೋದಾಗ ತಾಯಿ ಭವಾನಿ ರೇವಣ್ಣ ಅವರು ಮನೆಯಲ್ಲಿ ಇದ್ದರು. ತನಗೆ ಹುಷಾರಿಲ್ಲ ಎಂದು ಭವಾನಿ ರೇವಣ್ಣ ಅವರು ಮನೆಯಲ್ಲೇ ಇದ್ದು, ಸ್ಥಳ ಮಹಜರು ಮಾಡುವ ವೇಳೆ ಅಡ್ಡಿಪಡಿಸದಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ತಾಯಿ ಮುಂದೆನೇ ಮಗನಿಗೆ ಮಹಜರು ಪ್ರಕ್ರಿಯೆ ನಡೆದಿದೆ.

ಇಂದು ಜೈಲಾ? ಬೇಲಾ?
ಈಗಾಗಲೇ ಹಾಸನಕ್ಕೆ ಪ್ರಜ್ವಲ್ ರೇವಣ್ಣ ಅವರನ್ನು ಕರೆದುಕೊಂಡು ಹೋಗಿದ್ದ ಎಸ್‌ಐಟಿ ಅಧಿಕಾರಿಗಳು ಸ್ಥಳ ಮಹಜರು ಮಾಡಿದ್ದರು. ಇಂದು ಪ್ರಜ್ವಲ್ ರೇವಣ್ಣ ಅವರ ಕಸ್ಟಡಿ ಅವಧಿ ಅಂತ್ಯವಾಗುತ್ತಿದೆ. ಇಂದು ಮಧ್ಯಾಹ್ನ 2 ಗಂಟೆಯ ನಂತರ ನ್ಯಾಯಾಧೀಶರ ಮುಂದೆ ಪ್ರಜ್ವಲ್ ಅನ್ನು ಎಸ್‌ಐಟಿ ಅಧಿಕಾರಿಗಳು ಹಾಜರುಪಡಿಸುತ್ತಿದ್ದಾರೆ.

ಇದನ್ನೂ ಓದಿ:ನಿವೇದಿತಾಗೆ ಡಿವೋರ್ಸ್ ಕೊಟ್ಟಿದ್ದು ಯಾಕಂದ್ರೆ.. ಕೊನೆಗೂ ಕಾರಣ ಹೇಳಲು ಮುಂದೆ ಬಂದ ಚಂದನ್! 

ಇಂದು ಪ್ರಜ್ವಲ್ ರೇವಣ್ಣ ಅವರನ್ನು ಎಸ್‌ಐಟಿ ಕಸ್ಟಡಿ ವೇಳೆ ಕಲೆ ಹಾಕಿರುವ ಸಾಕ್ಷಿಗಳ ಸಮೇತ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗುತ್ತಿದೆ. ಇನ್ನೊಂದೆಡೆ ಮದರ್ ಡಿವೈಸ್‌ಗಾಗಿ ಎಸ್‌ಐಟಿ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ. ಆದರೆ ಇದುವರೆಗೂ ಮದರ್ ಡಿವೈಸ್ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment