newsfirstkannada.com

Prajwal Revanna: ‘ಬ್ಲೂ ಕಾರ್ನರ್’​ ನೋಟಿಸ್​ ಅಂದ್ರೆ ಏನು? ಇದೇ ರೀತಿ 7 ವಿಧದ ನೋಟಿಸ್​ ಇದೆ

Share :

Published May 6, 2024 at 10:54am

Update May 6, 2024 at 11:27am

    ರೆಡ್​ ಕಾರ್ನರ್​, ಬ್ಲಾಕ್​, ಗ್ರೀನ್​ ಕಾರ್ನರ್​ ನೋಟಿಸ್​ ಬಗ್ಗೆ ಗೊತ್ತಿದ್ಯಾ?

    ಬಿಡದಿ ನಿತ್ಯಾನಂದ ಸ್ವಾಮೀಜಿಗೂ ಬ್ಲೂ ನೋಟಿಸ್​ ನೀಡಲಾಗಿತ್ತು

    ಈ ಏಳು ನೋಟಿಸ್​ಗಳ ಬಗ್ಗೆ ತಿಳಿದುಕೊಳ್ಳಲೇಬೇಕು

ಹಾಸನ ಅಶ್ಲೀಲ ವಿಡಿಯೋ ಪ್ರಕರಣ ಬೆಳಕಿಗೆ ಬಂದಂತೆ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಿದ್ದಾರೆ. ಸದ್ಯ ಇವರ ಬರುವಿಕೆಗಾಗಿ ಎಸ್​ಐಟಿ ಕಾಯುತ್ತಿದೆ. ಮತ್ರವಲ್ಲದೆ ಕೇಂದ್ರಿಯಾ ತನಿಖಾ ದಳ ಪ್ರಜ್ವಲ್​ಗಾಗಿ ಬಲೆ ಬೀಸಿದೆ. ಮಾತ್ರವಲ್ಲದೆ, ‘ಬ್ಲೂ ಕಾರ್ನರ್​ ನೋಟಿಸ್’​ ಕೂಡ ನೀಡಿದೆ. ಆದರೆ ಬಹುತೇಕ ಜನರಿಗೆ ‘ಬ್ಲೂ ಕಾರ್ನರ್​ ನೋಟಿಸ್’​ ಎಂದರೆ ಏನು ಎಂದು ತಿಳಿಯದು. ಈ ಬಗ್ಗೆ ಮಾಹಿತಿ ಇಲ್ಲಿದೆ.

ಬ್ಲೂ ಕಾರ್ನರ್​ ನೋಟಿಸ್​ ಮಾತ್ರವಲ್ಲ, ಕೆಂಪು ಕಾರ್ನರ್​ ನೋಟಿಸ್, ಹಳದಿ ಕಾರ್ನರ್ ನೋಟಿಸ್, ಬ್ಲಾಕ್ ಕಾರ್ನರ್ ನೋಟಿಸ್, ಹಸಿರು ಕಾರ್ನರ್ ನೋಟಿಸ್, ಆರೆಂಜ್ ಕಾರ್ನರ್​ ನೋಟಿಸ್, ನೇರಳೆ ಕಾರ್ನರ್​​ ನೋಟಿಸ್​​ ಹೀಗೆ 7 ನೋಟಿಸ್​ಗಳಿವೆ. ಅವುಗಳು ಒಂದಕ್ಕಿಂತ ಒಂದು ಭಿನ್ನವಾಗಿವೆ. ಪ್ರಕರಣದ ಆಳವನ್ನು ಗಮನಿಸಿಕೊಂಡು ನೋಟಿಸ್​​ ನೀಡಲಾಗುತ್ತದೆ.

ನೀಲಿ ಕಾರ್ನರ್​ ನೋಟಿಸ್

ಅದರಂತೆಯೇ ಪಜ್ವಲ್ ರೇವಣ್ಣಗೆ ಬ್ಲೂ ನೋಟಿಸ್​ ನೀಡಲಾಗಿದೆ. ಇದು ಇಂಟರ್​​ಪೋಲ್​ನ ಕೋಡೆಡ್​ ನೋಟಿಸ್​ಗಳ ಒಂದು ಭಾಗ. ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶಕ್ಕೆ ಹೋಗಿರುವ ಕಾರಣಕ್ಕೆ ಪ್ರಜ್ವಲ್​ ರೇವಣ್ಣಗೆ ನೀಲಿ ಕಾರ್ನರ್​ ನೋಟಿಸ್ ನೀಡಲಾಗಿದೆ.

ಬ್ಲೂ ಕಾರ್ನರ್​ ನೋಟಿಸ್​​ ಜಗತ್ತಿನಾದ್ಯಂತ ಮಾಹಿತಿ, ಎಚ್ಚರಿಕೆಯ ಸಂದೇಶ ಮತ್ತು ಮನವಿಗಳನ್ನು ವಿವಿಧ ದೇಶಗಳ ಅಧಿಕಾರಿಗಳಿಗೆ ರವಾನಿಸುತ್ತದೆ. ಹೀಗಾಗಿ ಪ್ರಜ್ವಲ್​ ರೇವಣ್ಣ ಜರ್ಮನಿಗೆ ಹೋಗಿದ್ದಾರೆ ಎಂಬ ಮಾಹಿತಿ ಮೇರೆಗೆ ಹಾಗೂ ಪ್ರಕರಣದ ವಿಚಾರಣೆ ಭಾರತಕ್ಕೆ ಬರಬೇಕು ಎಂಬ ಕಾರಣಕ್ಕೆ ಬ್ಲೂ ಕಾರ್ನರ್​ ನೋಟಿಸ್​ ಹೊರಡಿಸಲಾಗಿದೆ.

ಸದ್ಯ ಮಾಹಿತಿ ಪ್ರಕಾರ ಜರ್ಮನಿಯಿಂದ ಪ್ರಜ್ವಲ್​ ದುಬೈಗೆ ತೆರಳಿದ್ದಾರೆ ಎನ್ನಲಾಗುತ್ತಿದೆ. ಸದ್ಯ ‘ಬ್ಲೂ ನೋಟಿಸ್’​ ಸಹಾಯದಿಂದ ತನಿಖಾ ಏಜೆನ್ಸಿಗಳು ಪಾಸ್​ಪೋರ್ಟ್​ ಎಂಟ್ರಿ ಸಹಾಯದಿಂದ ವ್ಯಕ್ತಿ ಯಾವ ದೇಶದಲ್ಲಿ ಇದ್ದಾರೆ ಎಂದು ಅಧಿಕಾರಿಗಳು ಪತ್ತೆಹಚ್ಚುತ್ತಾರೆ.

ನಿತ್ಯಾನಂದ ಸ್ವಾಮೀಜಿಗೂ ಬ್ಲೂ ನೋಟಿಸ್​ ನೀಡಲಾಗಿತ್ತು. ಸ್ವಯಂ ಘೋಷಿತ ದೇವ ಮಾನವ ಅತ್ಯಾಚಾರ ಮತ್ತು  ಲೈಂಗಿಕ ಪ್ರಕರಣಕ್ಕೆ ಸಂಬಂಧಿಸಿ ವಿದೇಶಕ್ಕೆ ಪರಾರಿಯಾಗಿದ್ದರು. ಈ ವೇಳೆ ಬ್ಲೂ ಕಾರ್ನರ್​ ನೋಟಿಸ್​ ನೀಡಲಾಗಿತ್ತು.

ರೆಡ್​ ಕಾರ್ನರ್​ ನೋಟಿಸ್​

ರೆಡ್​ ನೋಟಿಸ್​ ಕಳುಹಿಸುವುದು ತೀರಾ ವಿರಳ. ಅದರಲ್ಲೂ ವ್ಯಕ್ತಿ ಅಪರಾಧ ಚಟುವಟಿಕೆಯ ಭಾಗವಾಗಿದ್ದು, ಆತ ಕಣ್ಮರೆಯಾಗಿದ್ದರೆ, ಆತನ ಸ್ಥಳ ಹುಡುಕಾಡಲು, ಬಂಧಿಸಲು, ನ್ಯಾಯಾಲಕ್ಕೆ ಒಪ್ಪಿಸಲು ಈ ನೋಟಿಸ್​ ಹೊರಡಿಸಲಾಗುತ್ತದೆ.

ಹಳದಿ ಕಾರ್ನರ್ ನೋಟಿಸ್​​

ಕಾಣೆಯಾದ ವ್ಯಕ್ತಿಗಳನ್ನು ಹುಡುಕಾಡಲು ಈ ನೋಟಿಸ್​ ಕಳುಹಿಸಲಾಗುತ್ತದೆ. ಅಪ್ರಾಪ್ತ ವಯಸ್ಕರು, ಗುರುತಿಸಿಕೊಳ್ಳಲು ಸಾಧ್ಯವಾದ ವ್ಯಕ್ತಿಗಳನ್ನು ಹುಡುಕಾಡಲು ಈ ನೋಟಿಸ್​​ ಸಹಕಾರಿಯಾಗಿದೆ. ಹೀಗಾಗಿ ಇದರ ಅನ್ವಯ ಕಾಣೆಯಾದವರನ್ನು ಹುಡುಕಲು ಸಹಾಯ ಮಾಡುತ್ತದೆ.

ಕಪ್ಪು ಕಾರ್ನರ್​ ನೋಟಿಸ್

ಕಪ್ಪು ಕಾರ್ನರ್​ ನೋಟಿಸ್ ಅಪರಿಚಿತ ವ್ಯಕ್ತಿಗಳ ದೇಹದ ಗುರುತನ್ನು ಪತ್ತೆಹಚ್ಚಲು ಈ ನೋಟಿಸ್​ ಕಳುಹಿಸಲಾಗುತ್ತದೆ. ಇದರ ಸಹಾಯದಿಂದ ಅಧಿಕಾರಿಗಳಿಗೆ ಹುಡುಕಾಡಲು ಸಹಾಯಕವಾಗುತ್ತದೆ.

ಹಸಿರು ಕಾರ್ನರ್​ ನೋಟಿಸ್

ಅಪರಾಧ ಚಟುವಟಿಕೆಯಲ್ಲಿದ್ದ ವ್ಯಕ್ತಿ ಬಗ್ಗೆ ಬೇರೆಯವರಿಗೆ ಎಚ್ಚರಿಕೆ ನೀಡಲು, ಸಾರ್ವಜನಿಕ ಸುರಕ್ಷತೆಗೆ ಒತ್ತು ನೀಡಲು ಈ ನೋಟಿಸ್​ ನೀಡಲಾಗುತ್ತದೆ.

ಆರೆಂಜ್​ ನೋಟಿಸ್

ಸಾರ್ವಜನಿಕ ಸುರಕ್ಷತೆ ಮತ್ತು ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು ಕಳುಹಿಸುವ ನೋಟಿಸ್​ ಇದಾಗಿದೆ. ವ್ಯಕ್ತಿ, ಘಟನೆ, ಎಚ್ಚರಿಕೆ ನೀಡಲು ಆರೆಂಜ್​ ನೋಟಿಸ್​​ ಜಾರಿಗೊಳಿಸಲಾಗುತ್ತದೆ.

ಇದನ್ನೂ ಓದಿ: ಪ್ರಜ್ವಲ್‌ ಮೇಲೆ ಹದ್ದಿನ ಕಣ್ಣು, ಲೊಕೇಶನ್ ಪತ್ತೆಹಚ್ಚಿದ SIT; ಇಂದು ವಶಕ್ಕೆ ಪಡೆಯಲು ಸಿದ್ಧತೆ

ನೇರಳೆ ನೋಟಿಸ್​

ಅಪರಾಧಿ ಬಳಸುವ ಶಸ್ತ್ರಾಸ್ತ್ರಗಳು, ವಸ್ತುಗಳನ್ನು ಮರೆಮಾಚುವ ವಿಧಾನಗಳ ಕುರಿತು ಮಾಹಿತಿ ನೀಡುವ ಸಲುವಾಗಿ ಈ ನೋಟಿಸ್​​ ಅನ್ನು ಹೊರಡಿಸಲಾಗುತ್ತದೆ. ಇದರ ಅನ್ವರ ಪ್ರಕರಣ ತನಿಖೆ ಮಾಡಲು ಸುಲಭವಾಗುತ್ತದೆ.

ಈ ಏಳು ನೋಟಿಸ್​ಗಳು ದೇಶಕ್ಕೆ ಬಹಳ ಸಹಾಯ ಮಾಡುತ್ತದೆ. ಅಂದರೆ ವಿದೇಶದಲ್ಲಿರುವ ಅಧಿಕಾರಿಗಳಿಗೆ ಈ ಮಾಹಿತಿ ತಲುಪಿದಂತೆ ಭಾರತಕ್ಕೆ ಬೇಕಾದ ವ್ಯಕ್ತಿ ಅಥವಾ ಅಪರಾಧಿಯನ್ನು ಜಾಗರೂಕತೆಯಿಂದ ಹಿಂತಿರುಗಿಸುವ ಕೆಲಸ ಮಾಡುತ್ತಾರೆ.

ವಿಶೇಷ ವರದಿ: ಹರ್ಷಿತ್​ ಅಚ್ರಪ್ಪಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Prajwal Revanna: ‘ಬ್ಲೂ ಕಾರ್ನರ್’​ ನೋಟಿಸ್​ ಅಂದ್ರೆ ಏನು? ಇದೇ ರೀತಿ 7 ವಿಧದ ನೋಟಿಸ್​ ಇದೆ

https://newsfirstlive.com/wp-content/uploads/2024/05/Prajwal-Revanna-5.jpg

Load More