/newsfirstlive-kannada/media/post_attachments/wp-content/uploads/2024/05/prajwal-revanna-2-1.jpg)
ಹಾಸನ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ಪ್ರಜ್ವಲ್ ರೇವಣ್ಣ ಅವರನ್ನು ಅರೆಸ್ಟ್ ಮಾಡಲಾಗಿದೆ. 34 ದಿನಗಳ ಬಳಿಕ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಬೆಂಗಳೂರು ಏರ್ಪೋರ್ಟ್ಗೆ ಬಂದಿಳಿದಂತೆ ಅವರನ್ನು SIT ಮಹಿಳಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಹೀಗಾಗಿ ಇನ್ನು ಮುಂದೆ ಅವರ ಭವಿಷ್ಯ ತನಿಖೆಯ ವೇಳೆ ಬಹಿರಂಗ ಮತ್ತು ನಿರ್ಧಾರವಾಗಲಿದೆ.
ಸದ್ಯ ಬಂಧನಕ್ಕೊಳಗಾದ ಪ್ರಜ್ವಲ್ ರೇವಣ್ಣನ ಅವರ ಇಂದಿನ ಭವಿಷ್ಯವನ್ನು ನೋಡುವುದಾದರೆ, 5 ಆಗಸ್ಟ್ 1990ರಲ್ಲಿ ಪ್ರಜ್ವಲ್ ರೇವಣ್ಣ ಜನಿಸಿದ್ದಾರೆ. ನಕ್ಷತ್ರ ಉತ್ತರಾಷಾಢ. ಪ್ರಜ್ವಲ್ ಧನಸ್ಸು ಅಥವಾ ಮಕರ ರಾಶಿಯವರು ಎಂದು ಎನ್ನಲಾಗುತ್ತಿದೆ.
ಜನನ: 5 ಆಗಸ್ಟ್ 1990
ನಕ್ಷತ್ರ: ಉತ್ತರಾಷಾಢ
ರಾಶಿ: ಧನಸ್ಸು ಅಥವಾ ಮಕರ
ಮಕರ ರಾಶೀಯ ಇಂದಿನ ಭವಿಷ್ಯ ನೋಡುವುದಾದರೆ
- ಕುಟುಂಬದ ವಾತಾವರಣ ವ್ಯವಹಾರ ಚೆನ್ನಾಗಿ ನಡೆಯಲಿದೆ ಆದರೆ ಮನಸ್ಸಿಗೆ ಸಮಾಧಾನವಿರುವುದಿಲ್ಲ.
- ವಿರೋಧಿಗಳು ನಿಮ್ಮ ಸಂತೋಷವನ್ನು ಹಾಳು ಮಾಡುತ್ತಾರೆ
- ಧಾರ್ಮಿಕ ಮುಖಂಡರಿಗೆ ಅವಮಾನ ಆಗಬಹುದು
- ಹಿತಶತ್ರುಗಳ ಕಾಟದಿಂದ ನಿಮ್ಮ ಗೌರವಕ್ಕೆ ಧಕ್ಕೆಯಾಗಲಿದೆ
- ವ್ಯಾಪಾರವನ್ನು ವಿಸ್ತಾರ ಮಾಡಬೇಕಂದ್ರೆ ನಷ್ಟವಾಗಬಹುದು
- ಪ್ರೇಮಿಗಳಿಗೆ ಅಶುಭವಾದ ಸಮಯ
- ಸುದರ್ಶನ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ಇದನ್ನೂ ಓದಿ: VIDEO: ಮಹಿಳಾ SIT ಅಧಿಕಾರಿಗಳಿಂದ ಪ್ರಜ್ವಲ್ ರೇವಣ್ಣ ಅರೆಸ್ಟ್.. ಇದರ ಹಿಂದೆ ಮತ್ತೊಂದು ಕಾರಣ
ಧನಸ್ಸು ರಾಶಿ:
- ಬೇರೆಯವರಿಗೆ ಹಣ, ಪದಾರ್ಥ ಯಾವುದೇ ರೂಪದಲ್ಲಿಯೂ ಸಹಾಯ ಮಾಡುವಂತದ್ದು ಅಲ್ಲ
- ಪುಸ್ತಕ ವ್ಯಾಪಾರಿಗಳಿಗೆ ಲಾಭವಿದೆ
- ಸಹೋದರರ ವೈಮನಸ್ಯ ಇರುತ್ತದೆ
- ಆದಾಯದ ಮೂಲವನ್ನು ಗಮನಿಸಿ ಖರ್ಚಿಗೆ ಮುಂದಾಗಿ
- ದುಂದುವೆಚ್ಚ ಮಾಡಬೇಡಿ
- ಈ ದಿನ ದುಬಾರಿ ವಸ್ತುವನ್ನು ಖರೀದಿ ಮಾಡಬೇಡಿ
- ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ