newsfirstkannada.com

VIDEO: ಮಹಿಳಾ SIT ಅಧಿಕಾರಿಗಳಿಂದ ಪ್ರಜ್ವಲ್ ರೇವಣ್ಣ​ ಅರೆಸ್ಟ್​.. ಇದರ ಹಿಂದೆ ಮತ್ತೊಂದು ಕಾರಣ

Share :

Published May 31, 2024 at 6:54am

    ಹಾಸನ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ಪ್ರಜ್ವಲ್​ ಅರೆಸ್ಟ್​

    34 ದಿನಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್​ ಬಂಧನ

    ಬೆಂಗಳೂರು ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಮಹಿಳಾ ಅಧಿಕಾರಿಗಳಿಂದ ಅರೆಸ್ಟ್​

ಹಾಸನ ಅಶ್ಲೀಲ ವಿಡಿಯೋಗೆ ಸಂಬಂಧಿಸಿದಂತೆ ಪ್ರಜ್ವಲ್​ ರೇವಣ್ಣ ಅರೆಸ್ಟ್​ ಆಗಿದ್ದಾರೆ. 34 ದಿನಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್​ ರೇವಣ್ಣ ಬೆಂಗಳೂರು ಏರ್​ಪೋರ್ಟ್​ಗೆ ಬಂದಿಳಿದಂತೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಅಚ್ಚರಿ ಸಂಗತಿ ಎಂದರೆ ಮಹಿಳಾ ಎಸ್​ಐಟಿ ಅಧಿಕಾರಿಗಳು ಪ್ರಜ್ವಲ್ ಅವರನ್ನ ಬಂಧಿಸಿದ್ದಾರೆ.

ಮಧ್ಯರಾತ್ರಿ 12;30ರ ಸುಮಾರಿಗೆ ಅವರನ್ನು ಎಸ್​ಐಟಿ ಅಧಿಕಾರಿಗಳು ಪ್ರಜ್ವಲ್​ ರೇವಣ್ಣನವರನ್ನು ಅರೆಸ್ಟ್​ ಮಾಡಿದ್ದಾರೆ. ಕೆಂಪೇಗೌಡ ಏರ್​ಪೋರ್ಟ್​ಗೆ ಬಂದು ಇಳಿದಂತೆ ಸುಮನ್​ ಕರ್ನೇಕರ್​ ಅವರ ಟೀಂ ಅವರನ್ನು ಬಂಧಿಸಿದ್ದಾರೆ. ನಾಲ್ಕೈದು ಮಹಿಳಾ ಅಧಿಕಾರಿಗಳು ಪ್ರಜ್ವಲ್​ ಅವರನ್ನು ಬಂಧಿಸಿ ಎಸ್​ಐಟಿ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಪ್ರಜ್ವಲ್​ ಅವರನ್ನು ಅರೆಸ್ಟ್​ ಮಾಡಲು ಮಹಿಳಾ ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತು.

ಇದನ್ನೂ ಓದಿ: 34 ದಿನಗಳ ಬಳಿಕ ಪ್ರಜ್ವಲ್​ ರಿಟರ್ನ್​.. ಏರ್​ಪೋರ್ಟ್​ನಲ್ಲಿ ವಶಕ್ಕೆ ಪಡೆದ SIT ಮೊದಲು ಮಾಡಿದ್ದೇ ಈ ಕೆಲಸ!

ಮಹಿಳಾ ಅಧಿಕಾರಿಗಳಿಂದ ಪ್ರಜ್ವಲ್​ ಅರೆಸ್ಟ್​?

ಅತ್ಯಾಚಾರ ಆರೋಪ ಪ್ರಕರಣವಾಗಿದ್ದರಿಂದ. ಈ ಪ್ರಕರಣದ ಕುರಿತು ಸಂತ್ರಸ್ತೆಯರು ಮುಜುಗರಕ್ಕೆ ಒಳಗಾಗಬಾರದು ಎಂಬ ಕಾರಣಕ್ಕೆ ಮಹಿಳಾ ತಂಡವನ್ನು ಅಧಿಕಾರಿಗಳು ನೇಮಿಸುತ್ತಾರೆ. ಅದರಂತೆ ಪ್ರಜ್ವಲ್​ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧಿಸಿದಂತೆ ಮಹಿಳಾ ತಂಡವನ್ನು ರಚಿಸಲಾಗಿತ್ತು. ಹಾಗಾಗಿ ಬೆಂಗಳೂರು ಏರ್​ಪೋರ್ಟ್​ಗೆ ಬಂದ ಪ್ರಜ್ವಲ್​ ರೇವಣ್ಣನವರನ್ನು ಸುಮನ್​ ಕರ್ನೇಕರ್​ ಅವರ ತಂಡ ಅರೆಸ್ಟ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಮಹಿಳಾ SIT ಅಧಿಕಾರಿಗಳಿಂದ ಪ್ರಜ್ವಲ್ ರೇವಣ್ಣ​ ಅರೆಸ್ಟ್​.. ಇದರ ಹಿಂದೆ ಮತ್ತೊಂದು ಕಾರಣ

https://newsfirstlive.com/wp-content/uploads/2024/05/prajwal-revanna-1-1.jpg

Load More