newsfirstkannada.com

34 ದಿನಗಳ ಬಳಿಕ ಪ್ರಜ್ವಲ್​ ರಿಟರ್ನ್​.. ಏರ್​ಪೋರ್ಟ್​ನಲ್ಲಿ ವಶಕ್ಕೆ ಪಡೆದ SIT ಮೊದಲು ಮಾಡಿದ್ದೇ ಈ ಕೆಲಸ!

Share :

Published May 31, 2024 at 6:23am

    34 ದಿನಗಳ ಹಾಸನ ಸಂಸದರ​ ಕಣ್ಣಾಮುಚ್ಚಾಲೆಗೆ ಬಿತ್ತು ಬ್ರೇಕ್​

    ವಿದೇಶಕ್ಕೆ ಎಸ್ಕೇಪ್​ ಆಗಿದ್ದ ಪ್ರಜ್ವಲ್​ ಬೆಂಗಳೂರಿಗೆ ರಿಟರ್ನ್​

    ಲುಫ್ತಾನ್ಸಾ ಏರ್​ಲೈನ್ಸ್​ನ LH764 ವಿಮಾನದಲ್ಲಿ ತಡರಾತ್ರಿ ಬಂದ ಪ್ರಜ್ವಲ್​

ದೇಶದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಅಶ್ಲೀಲ ವಿಡಿಯೋ ಪ್ರಕರಣದ ಆರೋಪಿ, ಹಾಸನದ ಸಂಸದ ಪ್ರಜ್ವಲ್‌ ರೇವಣ್ಣರ ಕೊನೆಗೂ ಎಸ್​ಐಟಿ ಕೈಯಲ್ಲಿ ಲಾಕ್​ ಆಗಿದ್ದಾರೆ. ಬರೋಬ್ಬರಿ 34 ದಿನಗಳಿಂದ ವಿದೇಶದಲ್ಲಿ ಭೂಗತರಾಗಿ ಕಣ್ಣಾಮುಚ್ಚಾಲೆ ಆಡುತ್ತಿದ್ದ ಪ್ರಜ್ವಲ್‌, ತಡರಾತ್ರಿ ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಎಸ್‌ಐಟಿ ಅಧಿಕಾರಿಗಳು ಅರೆಸ್ಟ್​ ಮಾಡಿದ್ದಾರೆ.

ವಿಮಾನದ ಬಳಿ ತೆರಳಿ ವಶಕ್ಕೆ ಪಡೆದ CISF​ ಸಿಬ್ಬಂದಿ

ಗುರುತರ ಆರೋಪ ಹೊತ್ತು ಜರ್ಮನಿಯಲ್ಲಿ ಝಾಂಡಾ ಊರಿದ್ದ ಸಂಸದ ಪ್ರಜ್ವಲ್​ ಲುಫ್ತಾನ್ಸಾ ಏರ್​ಲೈನ್ಸ್​ನ LH764 ವಿಮಾನದಲ್ಲಿ ತಡರಾತ್ರಿ 12.46ಕ್ಕೆ ಮ್ಯೂನಿಕ್‌ನಿಂದ ಬೆಂಗಳೂರಿನ ಕೆಂಪೇಗೌಡ ಏರ್​ಪೋರ್ಟ್​ಗೆ ಬಂದಿಳಿದ್ರು. ಇನ್ನು ಪ್ರಜ್ವಲ್​ ಇದ್ದ ವಿಮಾನ ಲ್ಯಾಂಡ್​ ಆಗುತ್ತಿದ್ದಂತೆ ನೇರವಾಗಿ ವಿಮಾನದ ಬಳಿ ತೆರಳಿದ ಸಿಐಎಸ್​ಎಫ್​ ಅಧಿಕಾರಿಗಳು ಪ್ರಜ್ವಲ್​ ರೇವಣ್ಣರನ್ನು ವಶಕ್ಕೆ ಪಡೆದು ಎಮಿಗ್ರೇಷನ್​ ಬಳಿಗೆ ಕರೆತಂದರು. ಬ್ರೌನ್​ ಕಲರ್​ ನೈಟ್​ ಪ್ಯಾಂಟ್​, ಗ್ರೇ ಕಲರ್​ ಫುಲ್​ಓವರ್​ ಧರಿಸಿದ್ದ ಪ್ರಜ್ವಲ್, ಯಾವುದೇ ಪಶ್ಚಾತಾಪವಿಲ್ಲದೇ ಆರಾಮಾಗಿ ನಡೆದುಕೊಂಡು ಬಂದ ದೃಶ್ಯ ನಿಜಕ್ಕೂ ಅಚ್ಚರಿ ಮೂಡಿಸಿತು.

ಎಮಿಗ್ರೇಷನ್​ ಬಳಿಕ ಪ್ರಜ್ವಲ್​ನನ್ನು ವಶಕ್ಕೆ ಪಡೆದ ಎಸ್​ಐಟಿ

ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಎಮಿಗ್ರೇಷನ್​ ಪ್ರಕ್ರಿಯೆ ಮುಗಿಯುತ್ತಿದ್ದಂತೆ, ಸಿಐಎಸ್​ಎಫ್​ ಪೊಲೀಸರಿಂದ ಎಸ್​ಐಟಿ ಅಧಿಕಾರಿಗಳು ಪ್ರಜ್ವಲ್​ ರೇವಣ್ಣನನ್ನು ತಮ್ಮ ವಶಕ್ಕೆ ಪಡೆದುಕೊಂಡರು.. ಎಸ್​ಐಟಿ ಎಸ್​ಪಿ ಸಮನ ಡಿ ಪನ್ನೇಕರ್​ ನೇತೃತ್ವದಲ್ಲಿ ಪ್ರಜ್ವಲ್​ನನ್ನು ವಶಕ್ಕೆ ಪಡೆಯಲಾಯ್ತು.

ಏರ್​ಪೋರ್ಟ್​ನಿಂದ ಎಸ್​ಐಟಿ ಕಚೇರಿಗೆ ಪ್ರಜ್ವಲ್​ ಶಿಫ್ಟ್​

ಏರ್​ಪೋರ್ಟ್​ನಲ್ಲಿ ಪ್ರಜ್ವಲ್​ನನ್ನು ವಶಕ್ಕೆ ಪಡೆದ ಎಸ್​ಐಟಿ ಅಧಿಕಾರಿಗಳು, ನೇರವಾಗಿ ಎಸ್​ಐಟಿ ಕಚೇರಿಗೆ ಕರೆದುಕೊಂಡು ಬಂದ್ರು. ಬಳಿಕ ಎಸ್​ಐಟಿ ಕಚೇರಿಯಲ್ಲಿ ಪ್ರಾಥಮಿಕ ತನಿಖೆಯನ್ನು ನಡೆಸಿ, ಎಸ್​ಐಟಿ ಅಧಿಕಾರಿಗಳು ಪ್ರಜ್ವಲ್​ ರೇವಣ್ಣರನ್ನು ಅಧಿಕೃತವಾಗಿ ಬಂಧನ ಮಾಡಿದ್ರು.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಆಗಮಿಸುತ್ತಿದ್ದಂತೆ ಬೆಂಗಳೂರು ಬಿಟ್ಟ HD ಕುಮಾರಸ್ವಾಮಿ.. ಕಾರಣವೇನು?

ಒಟ್ಟಾರೆ. ಕಳೆದೊಂದು ತಿಂಗಳಿಂದ ವಿದೇಶದಲ್ಲಿ ಕುಳಿತು ಎಸ್​ಐಟಿ ಜೊತೆ ಕಣ್ಣಾಮುಚ್ಚಾಲೆ ಆಡುತ್ತಿದ್ದ ಪ್ರಜ್ವಲ್​, ಕೊನೆಗೂ ಎಸ್​ಐಟಿ ಕೈಯಲ್ಲಿ ಲಾಕ್​ ಆಗಿದ್ದಾರೆ. ಇನ್ನು ಸೂಕ್ತ ರೀತಿ ತನಿಖೆ ನಡೆಸಿ, ಸಂತ್ರಸ್ತೆಯರಿಗೆ ನ್ಯಾಯಕೊಡಿಸುವ ಜವಾಬ್ದಾರಿ ಎಸ್​ಐಟಿ ಹೆಗಲ ಮೇಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

34 ದಿನಗಳ ಬಳಿಕ ಪ್ರಜ್ವಲ್​ ರಿಟರ್ನ್​.. ಏರ್​ಪೋರ್ಟ್​ನಲ್ಲಿ ವಶಕ್ಕೆ ಪಡೆದ SIT ಮೊದಲು ಮಾಡಿದ್ದೇ ಈ ಕೆಲಸ!

https://newsfirstlive.com/wp-content/uploads/2024/05/prajwal-revanna-1.jpg

Load More