newsfirstkannada.com

ಪ್ರಜ್ವಲ್ ರೇವಣ್ಣಗೆ SIT ಪ್ರಶ್ನೆಗಳ ಮೇಲೆ ಪ್ರಶ್ನೆ.. ಕೆಲವು ಪ್ರಶ್ನೆಗಳಿಗೆ ಕೊಟ್ಟ ಉತ್ತರ ಏನು..? ಇಲ್ಲಿದೆ ಮಾಹಿತಿ

Share :

Published June 1, 2024 at 9:05am

Update June 1, 2024 at 9:07am

    ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರುಪಡಿಸಿದ SIT

    ಜೂನ್ 6ರವರೆಗೆ SIT ಕಸ್ಟಡಿಗೆ ನೀಡಿ ಕೋರ್ಟ್ ಆದೇಶ

    ಟೆಕ್ನಿಕಲ್ ‌ಎವಿಡೆನ್ಸ್ ಮುಂದೆ‌ ಇಟ್ಟು ವಿಚಾರಣೆಗೆ SIT ಸಿದ್ಧತೆ

ಹಾಸನ ಅಶ್ಲೀಲ​ ವಿಡಿಯೋ ಪ್ರಕರಣದಲ್ಲಿ ಪ್ರಜ್ವಲ್​ ರೇವಣ್ಣ ಬಂಧನಕ್ಕೆ ಒಳಗಾಗಿದ್ದಾರೆ. ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣದಲ್ಲಿ 42ನೇ ಎಸಿಎಂಎಂ ಜನಪ್ರತಿನಿಧಿಗಳ ಕೋರ್ಟ್​ 6 ದಿನಗಳ ಕಾಲ ಎಸ್​​ಐಟಿ ವಶಕ್ಕೆ ನೀಡಿದೆ. ಇದರ ಬೆನ್ನಲ್ಲೇ ಎಸ್​ಐಟಿ ಕಚೇರಿಯಲ್ಲಿ ಪ್ರಜ್ವಲ್​ನನ್ನು ತನಿಖಾಧಿಕಾರಿಗಳು ಲಾಕ್​ ಮಾಡಿಕೊಂಡು, ಮೊದಲ ರಾತ್ರಿಯೇ ತೀವ್ರ ವಿಚಾರಣೆ ಮಾಡಿದ್ದಾರೆ.

ಇದನ್ನೂ ಓದಿ: ಅಮೆರಿಕಾದ ಈ ಸ್ಪರ್ಧೆಯಲ್ಲಿ ಭಾರತೀಯನದ್ದೇ ಹವಾ.. ಬೃಹತ್​ ಸಾಧನೆ ಮಾಡಿದ 12 ವರ್ಷದ ಬಾಲಕ!

ಅತ್ಯಾಚಾರ ಕೇಸ್​ನಲ್ಲಿ ಅರೆಸ್ಟ್​ ಆಗಿರುವ ಪ್ರಜ್ವಲ್​ನನ್ನು ಕೋರ್ಟ್​ ಎಸ್​ಐಟಿ ಕಸ್ಟಡಿಗೆ ಕೊಡ್ತಿದ್ದಂತೆ, ತನಿಖಾಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ರಾತ್ರಿ 10 ಗಂಟೆವರೆಗೂ ಪ್ರಜ್ವಲ್​ಗೆ ಪ್ರಕರಣದ ಬಗ್ಗೆ ಪ್ರಶ್ನೆಗಳ ಸುರಿಮಳೆಯನ್ನೇ ಗೈದಿದ್ದಾರಂತೆ. ಪ್ರಕರಣ ಸಂಬಂಧ ಅಧಿಕಾರಿಗಳಿಗೆ ಯಾವುದೇ ಪ್ರಶ್ನೆಗಳಿಗೆ ಪ್ರಜ್ವಲ್​ ಸೂಕ್ತ ಉತ್ತರ ನೀಡಿಲ್ಲ ಎಂದು ತಿಳಿದು ಬಂದಿದೆ. ಇದು ರಾಜಕೀಯ ಪಿತೂರಿ. ಈ ಪ್ರಕರಣದಲ್ಲಿ ಸುಖಾಸುಮ್ಮನೆ ನನ್ನನ್ನು ಸಿಲುಕಿಸಲಾಗಿದೆ. ನಿಮ್ಮ ಕೆಲಸವನ್ನು ನೀವು ಮಾಡಿ, ನಾನೇನು ಹೇಳಲ್ಲ. ಸಂತ್ರಸ್ತೆಯರ ಬಗ್ಗೆ ನನಗೆ‌ ಯಾವುದೇ ಮಾಹಿತಿ ಇಲ್ಲ ಎಂದು ಎಸ್​ಐಟಿ ತನಿಖಾಧಿಕಾರಿಗಳ ಪ್ರಶ್ನೆಗೆ ಸೂಕ್ತ ಉತ್ತರ ನೀಡಿಲ್ಲ ಎಂದು ತಿಳಿದು ಬಂದಿದೆ.

ಎಸ್​ಐಟಿ ಮುಂದೆ ಹಾಜರಾಗುವುದಕ್ಕೂ ಮೊದಲೇ ಅಧಿಕಾರಿಗಳ ವಿಚಾರಣೆ ಯಾವ ರೀತಿ ಎದುರಿಸಬೇಕೆಂದು ಪ್ರಜ್ವಲ್​ ಕಾನೂನು ಸಲಹೆ ಪಡೆದಿದ್ದರು. ಹೀಗಾಗಿ ರಾತ್ರಿ ಎಸ್​ಐಟಿ ವಿಚಾರಣೆಗೆ ಪ್ರಜ್ವಲ್​ ಸೂಕ್ತ ರೀತಿ ಸಹಕಾರ ನೀಡಿಲ್ವಂತೆ. ಇದರಿಂದ ಎಚ್ಚೆತ್ತ ಎಸ್​ಐಟಿ ತನಿಖಾ ತಂಡ, ಇವತ್ತು ವಿಚಾರಣೆಯನ್ನು ಮತ್ತಷ್ಟು ಚುರುಕುಗೊಳಿಸಲು ನಿರ್ಧರಿಸಿದೆ.

ಟೆಕ್ನಿಕಲ್​ ಎವಿಡೆನ್ಸ್​ಗಳನ್ನು ಮುಂದಿಟ್ಟು, ಪ್ರಜ್ವಲ್​ ರೇವಣ್ಣನ ವಿಚಾರಣೆ ಮಾಡಲು ಸಿದ್ಧತೆ ಮಾಡಿಕೊಂಡಿದೆ. ನಾಳೆ ಅಥವಾ ನಾಡಿದ್ದು, ಪ್ರಜ್ವಲ್​ ರೇವಣ್ಣರನ್ನು ಹೊಳೆನರಸೀಪುರಕ್ಕೆ ಕರೆದೊಯ್ದು ಸ್ಥಳಮಹಜರು ಮಾಡುವ ಸಾಧ್ಯತೆ ಇದೆ. ಲೈಂಗಿಕ ದೌರ್ಜನ್ಯ ಕೇಸ್​ನಲ್ಲಿ ಎಸ್​ಐಟಿ ಪಂಜರ ಸೇರಿರುವ ಪ್ರಜ್ವಲ್​, ಮೊದಲರಾತ್ರಿ ಕಳೆದಿದ್ದಾರೆ. ಮೊದಲ ದಿನವಾದ ಕಾರಣ ರಾತ್ರಿ 10ರವರೆಗೆ ತನಿಖೆ ನಡೆಸಿದ ಎಸ್​ಐಟಿ ಬಳಿಕ ಪ್ರಜ್ವಲ್​ಗೆ ವಿಶಾಂತ್ರಿ ಪಡೆಯಲು ಅವಕಾಶ ನೀಡಿದೆ. ವಿಚಾರಣೆ ಬಳಿಕ ಸ್ವಲ್ಪಹೊತ್ತು ಹಾಗೇ ಕುಳಿತಿದ್ದ ಪ್ರಜ್ವಲ್​ ಬಳಿಕ ನಿದ್ರೆಗೆ ಜಾರಿದ್ರು ಎಂಬ ಮಾಹಿತಿ ಸಿಕ್ಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಜ್ವಲ್ ರೇವಣ್ಣಗೆ SIT ಪ್ರಶ್ನೆಗಳ ಮೇಲೆ ಪ್ರಶ್ನೆ.. ಕೆಲವು ಪ್ರಶ್ನೆಗಳಿಗೆ ಕೊಟ್ಟ ಉತ್ತರ ಏನು..? ಇಲ್ಲಿದೆ ಮಾಹಿತಿ

https://newsfirstlive.com/wp-content/uploads/2024/06/prajwal-revanna1.jpg

Load More