newsfirstkannada.com

ಶುಭ ಶುಕ್ರವಾರದಂದೇ ಪ್ರಜ್ವಲ್ ರೇವಣ್ಣ ಎಂಟ್ರಿ; ಅದಕ್ಕೂ ಮೊದಲೇ ಅರೆಸ್ಟ್ ಮಾಡಲು SIT ಅಲರ್ಟ್​​!

Share :

Published May 27, 2024 at 9:28pm

Update May 27, 2024 at 9:30pm

  ಪ್ರಜ್ವಲ್ ರೇವಣ್ಣ​ ವಿಡಿಯೋ ಸಂದೇಶದ ಬಳಿಕ ಎಸ್​ಐಟಿ ತನಿಖೆ ಚುರುಕು

  ಈವರೆಗೆ ಕಾಣೆಯಾಗಿದ್ದ ಪ್ರಜ್ವಲ್ ರೇವಣ್ಣ ವಿಚಾರಣೆಗೆ SIT ತಯಾರಿ

  ಮೇ.31ರಂದು ವಿಚಾರಣೆಗೆ ಹಾಜರಾಗ್ತೀನಿ ಎಂದ ಪ್ರಜ್ವಲ್ ರೇವಣ್ಣ

ಹಾಸನ ಸಂಸದ ಪ್ರಜ್ವಲ್ ರೇವಣ್ಣ​ ವಿಡಿಯೋ ಸಂದೇಶದ ಬಳಿಕ ಎಸ್​ಐಟಿ ಸಹ ಅಲರ್ಟ್​ ಆಗಿದೆ. ಈವರೆಗೆ ನಾಪತ್ತೆ ಆಗಿದ್ದ ಆರೋಪಿ ವಿಚಾರಣೆಗೆ ತಯಾರಿ ಆರಂಭಿಸಿದೆ. ಅಲ್ಲದೆ, ದೇಶದ ಯಾವುದೇ ವಿಮಾನ ನಿಲ್ದಾಣಕ್ಕೆ ಬಂದ ತಕ್ಷಣವೇ ಅರೆಸ್ಟ್​ ಮಾಡಲು ಮುಂದಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಇತ್ತ, ಪ್ರಜ್ವಲ್​ ವಾಪಸ್​ ಆಗ್ತಿರೋ ಕುರಿತು ಮಾಜಿ ಸಿಎಂ ಹೆಚ್​ಡಿಕೆ, ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಹೀಗೆ ಪ್ರಜ್ವಲ್​ ಬರೋ ಹಾದಿಯಲ್ಲಿ ಕಾದು ಕಾದು ಸುಸ್ತಾಗಿದ್ದ ಎಸ್​​ಐಟಿ, ಈಗ ಕೆಲಸ ಚುರುಕುಗೊಳಿಸಿದೆ.

ಇದನ್ನೂ ಓದಿ: ‘ನಾನು ಡಿಪ್ರೆಶನ್‌ಗೆ ಹೋಗಿ ಐಸೋಲೇಷನ್‌ಗೆ ಒಳಗಾಗಿದ್ದೆ’- ಪ್ರಜ್ವಲ್​ ರೇವಣ್ಣ ವಿಡಿಯೋದಲ್ಲಿ ಹೇಳಿದ್ದೇನು?

ಪ್ರಜ್ವಲ್ ವಿಡಿಯೋ ಬಿಟ್ಟ ಬೆನ್ನಲ್ಲೇ ಎಸ್ಐಟಿ ಅಲರ್ಟ್ ಆಗಿದ್ದು, ಪ್ರಜ್ವಲ್ ಸಂಪರ್ಕಕ್ಕೆ ಮುಂದಾಗಿದೆ. ಎಲ್ಲಿಂದ, ಯಾವ ದೇಶದಿಂದ ವಿಡಿಯೋ ರಿಲೀಸ್​ ಆಯ್ತು ಅನ್ನೋ ಕನ್ಫ್ಯೂಷನ್​​ ಕ್ಲೀಯರ್​ ಮಾಡಿಕೊಳ್ಳುತ್ತಿದೆ. ವಿಡಿಯೋ ಎಲ್ಲಿಂದ ಹೊರ ಬಂದಿದೆ ಅನ್ನೋ ಮಾಹಿತಿ ಕಲೆ ಹಾಕುತ್ತಿದೆ. ವಿಡಿಯೋ ರಿಲೀಸ್ ಆಗಿರೋದು ಪ್ರಜ್ವಲ್ ಪತ್ತೆಗೆ ನೆರವು ಸಿಗುವ ನಿರೀಕ್ಷೆ ಎಸ್​ಐಟಿಗಿದೆ. ಮೇ.31ರಂದು ವಿಚಾರಣೆಗೆ ಹಾಜರಾಗ್ತೀನಿ ಅಂತ ಪ್ರಜ್ವಲ್​ ಹೇಳಿದ್ದಾರೆ. ಇತ್ತ, ಪ್ರಜ್ವಲ್​ ರೇವಣ್ಣ ಕಾಣಿಸಿಕೊಂಡ ಬೆನ್ನಿಗೆ ಅರೆಸ್ಟ್​​ ಆಗೋದು ಖಚಿತ ಅನ್ನೋ ಮಾತು ಕೇಳಿಸ್ತಿದೆ. ಸದ್ಯ 376 ಅಡಿಯಲ್ಲಿ ಪ್ರಜ್ವಲ್​ ವಿರುದ್ಧ ಕೇಸ್ ದಾಖಲಾಗಿದೆ. ನೋಟಿಸ್​ ನೀಡಿ ವಿಚಾರಣೆ ಅವಧಿ ಸಹ ಮುಗಿದು ಹೋಗಿದೆ. ತಾನು ಬಯಸಿದಾಗ ವಿಚಾರಣೆಗೆ ಬರಲು ಅವಕಾಶವಿಲ್ಲ. ಹಾಗಾಗಿ ವಿದೇಶದಿಂದ ಪ್ರಜ್ವಲ್​ ಹೊರಟ ಕೂಡಲೇ SIT ಅಲರ್ಟ್​ ಆಗಲಿದೆ. ದೇಶದ ವಿಮಾನ ನಿಲ್ದಾಣಕ್ಕೆ ಬಂದಿಳಿದ ತಕ್ಷಣವೇ ಅರೆಸ್ಟ್ ಮಾಡಲು ಮುಂದಾಗಿದೆ. ಇನ್ನು, ಪ್ರಜ್ವಲ್ ವಾಪಸ್ಸಾಗುವ ವಿಡಿಯೋ ಸಂದೇಶದ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ನನ್ನ ಮೇಲೆ ಗೌರವ ಇದ್ದರೆ ವಾಪಸ್ ಬರುವಂತೆ ಮನವಿ ಮಾಡಿದ್ದೆ. ನನ್ನ ಮನವಿಗೆ ಓಗೊಟ್ಟು ಆತ ವಾಪಸ್ ಬರುತ್ತಿರೋದು ನನಗೂ ಒಂದು ರೀತಿಯಲ್ಲಿ ಸಮಾಧಾನ ತಂದಿದೆ. ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂಬುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಎಸ್​ಐಟಿ ತನಿಖೆ ನಡೆಯುತ್ತಿದೆ ಅವರು ಎಲ್ಲಿಗೆ ತಂದು ನಿಲ್ಲಿಸುತ್ತಾರೋ ನೋಡೋಣ 

– ಹೆಚ್​.ಡಿ.ಕುಮಾರಸ್ವಾಮಿ, ಮಾಜಿ ಸಿಎಂ

ಇನ್ನು, ದಳದ ಜೊತೆ ಮುಜುಗರಕ್ಕಿಡಾದ ಬಿಜೆಪಿ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದೆ. ಈಗಲಾದರೂ ಹೇಳಿದ್ದಾರಲ್ಲ, ಬಂದು ತನಿಖೆಗೆ ಸಹಕರಿಸಲಿ ಎಂದಿರುವ ವಿಪಕ್ಷ ನಾಯಕ ಅಶೋಕ್​​, ಕಾಂಗ್ರೆಸ್ ಒಕ್ಕಲಿಗರನ್ನು ಮುಗಿಸುವ ಷಡ್ಯಂತ್ರ ಮಾಡಿದೆ ಅನ್ನೋ ಹೊಸ ಆರೋಪ ಬಾಂಬ್​​ ಎಸೆದಿದ್ದಾರೆ.

ಪ್ರಜ್ವಲ್ ರೇವಣ್ಣ ವಿಡಿಯೋ ಬಿಡುಗಡೆ ಮಾಡಿ ಬರ್ತೀನಿ ಅಂದಿದ್ದರು. ಆದ್ರೆ ಮೊದಲೇ ಈ ಕೆಲಸ ಮಾಡಬೇಕಿತ್ತು. ಮೊದಲೇ ಹೇಳಿದ್ರೆ ಅದಕ್ಕೆ ಒಂದು ಅರ್ಥ‌ ಈಗ ಟೂ ಲೇಟ್ ಅಂತ ಅನಿಸುತ್ತೆ. ಈಗಾಲಾದರೂ ಹೇಳಿದ್ದಾರಲ್ಲಾ? ಬೇಗ ಬಂದು ತನಿಖೆಗೆ ಸಹಕರಿಸಲಿ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಷಡ್ಯಂತ್ರ ಮಾಡಿರೋದು ಕಣ್ಣಿಗೆ ಕಾಣುತ್ತಿದೆ. ಷಡ್ಯಂತ್ರ ಮಾಡಿರೋದು ನಿಜ. ಆರೋಪಿಗಳನ್ನು ಇನ್ನೂ ಅರೆಸ್ಟ್ ಮಾಡಿಲ್ಲ. ಕಾಂಗ್ರೆಸ್ ಒಕ್ಕಲಿಗರ ಮುಗಿಸುವ ಷಡ್ಯಂತ್ರ ಮಾಡಿದ್ದಾರೆ. ಅದರ ಒಂದು ಭಾಗ ಇದು. ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ದಾರೆ. ಅವರಿಗೆ ಶಿಕ್ಷೆ ಆಗಬೇಕು ಇದು ಬಿಜೆಪಿ ನಿಲುವು. ಈ ಪ್ರಕರಣ ಸಂಬಂಧ ತನಿಖೆಯಾಗಬೇಕು . ಲೇಟಾಗಿ ಆದ್ರೂ ಪ್ರಜ್ವಲ್ ಬರೋದಕ್ಕೆ ಒಪ್ಪಿಕೊಂಡಿದ್ದಾರೆ. ಎಸ್​ಐಟಿ ರಚನೆ ಮಾಡಿರೋದು ಕಾಂಗ್ರೆಸ್‌ನವರನ್ನು ರಕ್ಷಣೆ ಮಾಡಿಕೊಳ್ಳೋದಕ್ಕೆ ಅಷ್ಟೇ.

ವಿಪಕ್ಷ ನಾಯಕ ಆರ್​​.ಅಶೋಕ್​​

ಇದನ್ನೂ ಓದಿ: ಭೀಕರ ಅಪಘಾತ: 24 ಗಂಟೆಯಲ್ಲಿ ರಾಜ್ಯದ 51 ಮಂದಿ ದಾರುಣ ಸಾವು; ಬೆಚ್ಚಿ ಬೀಳಿಸಿದ ವರದಿ

ನನ್ನ ವಿರುದ್ಧ ಪಿತೂರಿ ಎಂಬ ಪ್ರಜ್ವಲ್​​​ ಮಾತಿಗೆ ಡಿಕೆಶಿ ಕಾಲನ ಉತ್ತರ ನೀಡಿದ್ದಾರೆ. ಇತ್ತ, ಗೃಹ ಸಚಿವ ಪರಮೇಶ್ವರ್​​, ಸಹಕಾರ ಮಾಡ್ತಿನಿ ಎಂಬ ಸ್ವಾಗತ ಎಂದಿದ್ದಾರೆ.

ಪ್ರಜ್ವಲ್ ರೇವಣ್ಣ ವಿಡಿಯೋ ಮೂಲಕ ಕಳುಹಿಸಿದ್ದಾರೆ. ಇದೇ ತಿಂಗಳ 31ರಂದು ಬೆಳಗ್ಗೆ 10 ಗಂಟೆಗೆ ಎಸ್ಐಟಿಗೆ ಬರ್ತಿನಿ.
ಅವರಿಗೆ ಸಹಕಾರ ಮಾಡ್ತಿನಿ ಅಂತ ಹೇಳ್ತಿರೋದನ್ನ ನಾನು ಸ್ವಾಗತ ಮಾಡ್ತಿನಿ. ಕರ್ನಾಟಕದ ಇತಿಹಾಸದಲ್ಲಿ ಇಂತಹ ಘಟನೆ ನಡೆದಿರಲಿಲ್ಲ. ಇಡೀ ಜಗತ್ತೆ ಮಾತನಾಡುವ ಸಂದರ್ಭದಲ್ಲಿ ಅವರನ್ನ ಕರೆತರುವ ಪ್ರಯತ್ನವನ್ನ ಎಲ್ಲ ರೀತಿ ನಡೆಯುತ್ತಿತ್ತು. ಪ್ರಧಾನ ಮಂತ್ರಿಗಳಿಗೆ, ಮುಖ್ಯ ಮಂತ್ರಿಗಳು ಎರಡು ಬಾರಿ ಪತ್ರ ಬರೆದ್ರು. ಸಿಬಿಐಗೆ ರಿಕ್ವೆಸ್ಟ್ ಮಾಡಿಕೊಂಡಿದ್ವಿ. ಬ್ಲೂ ಕಾರ್ನರ್ ನೋಟಿಸ್ ಕೂಡಾ ಇಶ್ಯೂ ಮಾಡಿದ್ರು. ಆ ಪ್ರಕ್ರಿಯೆ ಕೂಡಾ ನಡೆಯುತ್ತಿತ್ತು. ಅವರ ಡಿಪ್ಲೋಮೆಟಿಕ್ ಪಾಸ್ ಪೊರ್ಟ್ ರದ್ದು ಮಾಡಿ ಅವರನ್ನ‌ ಕರೆತರೋದಕ್ಕೆ ಕೇಂದ್ರ ಸರ್ಕಾರ ಸಹಾಯ ಮಾಡ್ಬೇಕು ಅಂತ ಮನವಿ ಮಾಡಿದ್ವಿ. ಪಾಸ್ ಪೊರ್ಟ್ ರದ್ದು ಪ್ರಕ್ರಿಯೆ ಪ್ರಾರಂಭ ಮಾಡಿದ್ದೀವಿ‌ ಅಂತ ಅವರು ಹೇಳಿಕೆ ಕೊಟ್ಟಿದ್ರು. ಈ ಮಧ್ಯೆದಲ್ಲಿ ಅವರು ಬರುತ್ತೇವೆ ಅಂತ ಹೇಳಿರೋದನ್ನ ನಾವು ಸ್ವಾಗತ ಮಾಡ್ತಿವಿ. ಎಸ್ಐಟಿ ಬಳಿ ಏನ್ ಎವಿಡೆನ್ಸ್, ಏನ್ ಮಾಹಿತಿಗಳಿವೆ ಅದರ ಆಧಾರದ ಮೇಲೆ ತನಿಖೆ ಮುಂದುವರಿಯುತ್ತೆ.

– ಡಾ.ಜಿ. ಪರಮೇಶ್ವರ್​​, ಗೃಹ ಸಚಿವ

ಇತ್ತ, ಕೆ.ಆರ್.ನಗರ ಮೂಲದ ಮಹಿಳೆಯ ಕಿಡ್ನಾಪ್ ಪ್ರಕರಣದಲ್ಲಿ ಭವಾನಿ ರೇವಣ್ಣಗೆ 2 ಬಾರಿ ನೋಟಿಸ್​ ಬೆನ್ನಲ್ಲೆ ಜಾಮೀನು ಕೋರಿದ್ದಾರೆ. ಬೆಂಗಳೂರಿನ ಸೆಷನ್ಸ್ ಕೋರ್ಟ್​ಗೆ ಭವಾನಿ ಅರ್ಜಿ ಸಲ್ಲಿಸಿದ್ದಾರೆ. ಒಟ್ಟಾರೆ, ಪ್ರಜ್ವಲ್​ ಆಗಮನದ ಬಳಿಕ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್​​ ಸಿಗಲಿದೆ. ನಿತ್ಯವೂ ಪಾಸ್​ಪೋರ್ಟ್​​ ಕಥೆ ಹೇಳ್ತಿದ್ದ ಸರ್ಕಾರ, ಆರೋಪಿಗೆ ಶಿಕ್ಷೆ ಕೊಡಿಸುವಲ್ಲಿ ಅದೆಷ್ಟು ಶ್ರಮ ಹಾಕಲಿದೆ? ಕೇಸ್​​ನ್ನ ಹೇಗೆ ಹ್ಯಾಂಡಲ್​ ಮಾಡುತ್ತೆ ಅನ್ನೋದು ಪ್ರತಿಯೊಬ್ಬರೂ ಕುತೂಹಲದಲ್ಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶುಭ ಶುಕ್ರವಾರದಂದೇ ಪ್ರಜ್ವಲ್ ರೇವಣ್ಣ ಎಂಟ್ರಿ; ಅದಕ್ಕೂ ಮೊದಲೇ ಅರೆಸ್ಟ್ ಮಾಡಲು SIT ಅಲರ್ಟ್​​!

https://newsfirstlive.com/wp-content/uploads/2024/04/Prajwal-Revanna-Hassan-JDS-1.jpg

Load More