ನತದೃಷ್ಟ ಹೆಣ್ಣಿನ ಗರ್ಭದಲ್ಲಿರೋ ಮಗುವಿಗೆ ಈ ಭಾಗ್ಯನೂ ಇಲ್ವಲ್ಲ -ದರ್ಶನ್ ಕಣ್ಣೀರು ಇಟ್ಟಿದ್ಕೆ ಸಂಬರಗಿ ಹೇಳಿದ್ದೇನು..?

author-image
Ganesh
Updated On
ನತದೃಷ್ಟ ಹೆಣ್ಣಿನ ಗರ್ಭದಲ್ಲಿರೋ ಮಗುವಿಗೆ ಈ ಭಾಗ್ಯನೂ ಇಲ್ವಲ್ಲ -ದರ್ಶನ್ ಕಣ್ಣೀರು ಇಟ್ಟಿದ್ಕೆ ಸಂಬರಗಿ ಹೇಳಿದ್ದೇನು..?
Advertisment
  • ಮತ್ತೆ ದರ್ಶನ್ ಪ್ರಕರಣದಲ್ಲಿ ಸಂಬರಗಿ ಪೋಸ್ಟ್​
  • ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್
  • ಮಗನ ನೋಡಿ ಕಣ್ಣೀರು ಇಟ್ಟಿದ್ಕೆ ಸಂಬರಗಿ ಟೀಕೆ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಜೈಲು ಸೇರಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್, ಪವಿತ್ರ ಗೌಡ ಹಾಗೂ ಇತರೆ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಜೈಲಿನಲ್ಲಿರುವ ದರ್ಶನ್ ಅವರನ್ನು ಅವರ ಪತ್ನಿ ವಿಜಯಲಕ್ಷ್ಮೀ, ಪುತ್ರ ವಿನೀಶ್ ಜೈಲಿಗೆ ಆಗಮಿಸಿ ಮಾತಾಡಿಸಿಕೊಂಡು ಹೋಗಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಮಾಜಿ ಬಿಗ್​ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರಗಿ, 15 ದಿನಗಳ ನಂತರ ಮಗ ಅಪ್ಪನ ನೋಡಿ ಅಪ್ಪ ಮಗನ ನೋಡಿ ಕಣ್ಣೀರು ಸುರಿಸಿದನಂತೆ. ಈ ಸುದ್ದಿ ಕೇಳಿದ್ರೇನೇ ಕರಳು ಚುರುಕ್ ಅನ್ನುತ್ತೆ ಅಲ್ವಾ? ಅದೇ ಚಿತ್ರದುರ್ಗದಲ್ಲಿ ನತದೃಷ್ಟ ಹೆಣ್ಣಿನ ಗರ್ಭದಲ್ಲಿ ಬೆಳಿತೀರೋ ಮಗುವಿಗೆ ಈ ಭಾಗ್ಯನೂ ಇಲ್ವಲ್ಲ ಎಂದು ಫೇಸ್​​ಬುಕ್​ನಲ್ಲಿ ಶೇರ್ ಮಾಡಿದ್ದಾರೆ.

ಇದನ್ನೂ ಓದಿ:ಇಂಗ್ಲೆಂಡ್, ಅಫ್ಘಾನಿಸ್ತಾನ್ ಯಾವುದೂ ಅಲ್ಲ.. ಈ ತಂಡ ವಿಶ್ವಕಪ್ ಗೆಲ್ಲುತ್ತೆ ಎಂದ ಮಾಜಿ ಕ್ರಿಕೆಟಿಗ

ನಟಿ ಪವಿತ್ರ ಗೌಡ ಅವರಿಗೆ ಕೊಲೆಯಾದ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಮಾಡುತ್ತಿದ್ದ ಎಂಬ ಆರೋಪ ಇತ್ತು. ಇದೇ ಕಾರಣಕ್ಕೆ ದರ್ಶನ್ ಅಂಡ್ ಗ್ಯಾಂಗ್​ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಬೆಂಗಳೂರಿಗೆ ಕರೆತಂದಿತ್ತು. ಜೂನ್ 8 ರಂದು ಬೆಂಗಳೂರಿನ ಪಟ್ಟಣಗೆರೆ ಶೆಡ್​​ನಲ್ಲಿ ಅಮಾನವೀಯವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ ಆರೋಪ ಇದೆ. ಇನ್ನು ಹತ್ಯೆಯಾದ ರೇಣುಕಾಸ್ವಾಮಿ ಪತ್ನಿಯ ಗರ್ಭದಲ್ಲಿ ಮಗು ಬೆಳೆಯುತ್ತಿದೆ. ಇದೇ ವಿಚಾರವನ್ನು ಇಟ್ಟುಕೊಂಡು ಪ್ರಶಾಂತ್ ಸಂಬರಗಿ ದರ್ಶನ್​​ಗೆ ಟಾಂಗ್ ನೀಡಿದ್ದಾರೆ.

ಇದನ್ನೂ ಓದಿ:ಟಿ20 ವಿಶ್ವಕಪ್​​ ಸೆಮಿಫೈನಲ್​​ಗೆ ಹೊಸ ನಿಯಮ.. ಇದು ಟೀಂ ಇಂಡಿಯಾಗೆ ಹೆಚ್ಚು ಮಾರಕ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment