newsfirstkannada.com

ಮನೆಯಲ್ಲೇ ಹೆರಿಗೆ ಮಾಡಿ ಎಂದು ಗಂಡನ ಒತ್ತಾಯ; ತಾಯಿ, ಮಗು ದುರಂತ ಸಾವು!

Share :

Published February 22, 2024 at 5:57am

Update February 22, 2024 at 5:58am

    ಸುಮಾರು 3 ಗಂಟೆಗಳ ಕಾಲ ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಗರ್ಭಿಣಿ ಮೃತ್ಯು

    ಪತಿ ತನ್ನನ್ನು ಎಲ್ಲಿ ಬಿಟ್ಟು ಹೋಗುತ್ತಾನೆ ಎಂಬ ಆತಂಕದಲ್ಲಿದ್ದ ಪತ್ನಿ ದಾರುಣ ಸಾವು

    ಆಶಾ ಕಾರ್ಯಕರ್ತೆಯರು ವಾರ್ಡ್ ಕೌನ್ಸಿಲರ್‌ಗಳು ಎಷ್ಟೇ ಹೇಳಿದ್ರು ಕೇಳದ ಪತಿ

ತಿರುವನಂತಪುರಂ: ಪತಿಯ ಒತ್ತಾಯಕ್ಕೆ ಮಣಿದು ಗರ್ಭಿಣಿ ಪತ್ನಿಯೊಬ್ಬಳು ಮನೆಯಲ್ಲೇ ಹೆರಿಗೆ ಮಾಡಿಸಿಕೊಂಡ ಪರಿಣಾಮ ಆಕೆ ಮತ್ತು ಶಿಶು ಮೃತಪಟ್ಟ ಹೃದಯ ವಿದ್ರಾವಕ ಘಟನೆಯೊಂದು ಕೇರಳದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಶೆಮೀರಾ (18) ಎಂದು ಗುರುತಿಸಲಾಗಿದೆ.

ಇದನ್ನು ಓದಿ: ಹೆಂಡತಿಯಿಂದ ಕೋಟಿ ಕೋಟಿ ವಂಚನೆ ಕೇಸ್​ಗೆ ಬಿಗ್​ ಟ್ವಿಸ್ಟ್​​; ಏನಿದು ಅಸಲಿ ಕಹಾನಿ..?

ಮೃತ ಹೆಂಡತಿ ಶೆಮೀರಾಗೆ ಈಗಾಗಲೇ ಮೂರು ಬಾರಿ ಸಿಸೇರಿಯನ್ ಕೂಡ ಆಗಿದೆ. ಕೊನೆಯ ಹೆರಿಗೆಯಾಗಿ ಕೇವಲ ಒಂದು ವರ್ಷವಾಗಿದೆ. ಆದರೆ ಪತಿಯ ಹಠಕ್ಕೆ ಶೆಮೀರಾ ಬಲಿಯಾಗಿದ್ದಾಳೆ. ತುಂಬು ಗರ್ಭಿಣಿಯಾಗಿದ್ದ ಶೆಮೀರಾಗೆ ಚಿಕಿತ್ಸೆ ಕೊಡಿಸಲು ಸ್ಥಳೀಯ ನಿವಾಸಿಗಳು ಆಶಾ ಕಾರ್ಯಕರ್ತೆಯರು ವಾರ್ಡ್ ಕೌನ್ಸಿಲರ್‌ಗಳು ಹರಸಾಹಸ ಪಟ್ಟರೂ ಪತಿ ಒಪ್ಪಲಿಲ್ಲ ಎಂಬುದು ತಿಳಿದುಬಂದಿದೆ. ಶೆಮೀರಾಗೆ ಮನೆಯಲ್ಲಿ ಹೆರಿಗೆ ಮಾಡಿಸಿಕೊಳ್ಳಲು ಇಷ್ಟವಿರಲಿಲ್ಲ. ಆದರೆ ಪತಿಯ ಮಾತನ್ನು ಧಿಕ್ಕರಿಸಿ ಹೋಗಲು ಆಕೆ ಹಿಂಜರಿಯುತ್ತಿದ್ದಳು. ಈಕೆಗೆ ಪತಿ ತನ್ನನ್ನು ಪತಿ ಎಲ್ಲಿ ಬಿಟ್ಟು ಹೋಗುವನೆಂಬ ಭಯವಿತ್ತಂತೆ. ಹೀಗಾಗಿ ಮನೆಯಲ್ಲೇ ಹೆರಿಗೆ ಮಾಡಿಕೊಳ್ಳಲು ಒಪ್ಪಿಕೊಂಡಿದ್ದಳು ಎಂದು ಶೆಮೀರಾಳನ್ನು ನೋಡಿಕೊಳ್ಳುತ್ತಿದ್ದ ದೀಪಿಕಾ ಎನ್ನುವವರು ತಿಳಿಸಿದ್ದಾರೆ.

ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವಂತೆ ನೆರೆಹೊರೆಯವರು ಹಾಗೂ ಆರೋಗ್ಯ ಕಾರ್ಯಕರ್ತೆಯವರು ಎಷ್ಟೇ ಹೇಳಿದರೂ ಹೆಂಡತಿಯನ್ನು ಹೇಗೆ ನೋಡಿಕೊಳ್ಳಬೇಕು ಎಂಬುದು ನನಗೆ ಗೊತ್ತಿದೆ ಎಂದು ನಯಾಸ್ ಗರಂ ಆಗಿದ್ದನಂತೆ. ಇತ್ತ ಮನೆಯಲ್ಲಿಯೇ ಶೆಮೀರಾ ಸುಮಾರು 3 ಗಂಟೆಗಳ ಕಾಲ ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದಳು. ಈ ನಡುವೆ ಆಕೆಗೆ ತೀವ್ರ ರಕ್ತಸ್ರಾವವಾಗಿದೆ ಕೊನೆಗೆ ನೆರೆಹೊರೆಯವರು ಬಂದು ಬಲವಂತವಾಗಿ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸಿದರು. ಆದರೆ ಅಲ್ಲಿ ತಾಯಿ- ಮಗು ಇಬ್ಬರೂ ಮೃತಪಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮನೆಯಲ್ಲೇ ಹೆರಿಗೆ ಮಾಡಿ ಎಂದು ಗಂಡನ ಒತ್ತಾಯ; ತಾಯಿ, ಮಗು ದುರಂತ ಸಾವು!

https://newsfirstlive.com/wp-content/uploads/2024/02/death-2024-02-21T200035.668.jpg

Load More