newsfirstkannada.com

ನಾಳೆ ಮತ್ತೆ ರಾಜ್ಯಕ್ಕೆ ಬರ್ತಿದ್ದಾರೆ ಮೋದಿ; ಶಿವಮೊಗ್ಗದಲ್ಲಿ ಬಿಜೆಪಿ ನಾಯಕರಿಗೆ ಸಖತ್‌ ಟೆನ್ಷನ್; ಯಾಕೆ?

Share :

Published March 17, 2024 at 7:18am

    ಕಲಬುರಗಿ ಸಮಾವೇಶದ ಬಳಿಕ ಪ್ರಧಾನಿ ಮೋದಿ ಶಿವಮೊಗ್ಗಕ್ಕೆ ಎಂಟ್ರಿ!

    ಮೋದಿ ಆಗಮನಕ್ಕೂ ಮೊದಲೇ ರಾಜ್ಯ ಬಿಜೆಪಿ ನಾಯಕರಿಗೆ ಟೆನ್ಷನ್

    ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಕೆ.ಎಸ್‌ ಈಶ್ವರಪ್ಪ ಆಗಮಿಸುತ್ತಾರಾ?

ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ ಆಗುತ್ತಿದ್ದಂತೆ ರಾಜ್ಯ ಬಿಜೆಪಿಯಲ್ಲಿ ರಾಜಕೀಯದ ಕಂಪನ ಶುರುವಾಗಿದೆ. ಕಲಬುರಗಿಯಿಂದಲೇ ಕರ್ನಾಟಕದ ಮತಬೇಟೆಗೆ ಪ್ರಧಾನಿ ಮೋದಿ ಪಾಂಚಜನ್ಯ ಮೊಳಗಿಸಿದ್ದಾರೆ. ನಾಳೆ ಮತ್ತೆ ಶಿವಮೊಗ್ಗಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಈ ನಡುವೆ ರಾಜ್ಯ ಬಿಜೆಪಿ ನಾಯಕರು ಟಾಸ್ಕ್​ವೊಂದಕ್ಕೆ ಪ್ಲಾನ್ ಮಾಡಿದ್ದಾರೆ. ಅದುವೇ ಈಶ್ವರಪ್ಪ ಬಂಡಾಯ ಶಮನ.

ಲೋಕಸಭೆ ಚುನಾವಣೆಗೆ ಪ್ರಧಾನಿ ಮೋದಿ ಖರ್ಗೆ ತವರಿನಿಂದಲೇ ಮತ್ತೊಮ್ಮೆ ಪ್ರಧಾನಿ ಗದ್ದುಗೆ ಏರಲು ಪಾಂಚಜನ್ಯ ಮೊಳಗಿಸಿದ್ದಾರೆ. ನಿನ್ನೆ ಕಲಬುರಗಿಯಲ್ಲಿ ಬೃಹತ್ ಸಮಾವೇಶ ಮಾಡಿದ್ದ ಮೋದಿ ನಾಳೆ ಮತ್ತೆ ಶಿವಮೊಗ್ಗಕ್ಕೆ ರೀ ಎಂಟ್ರಿ ಕೊಡಲಿದ್ದಾರೆ. ಮೋದಿ ಆಗಮನ ಹಿನ್ನೆಲೆ ಶಿವಮೊಗ್ಗದ ಅಲ್ಲಮಪ್ರಭು ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ವೇದಿಕೆ ಸಜ್ಜಾಗಿದೆ. ಮೋದಿ ಕಾರ್ಯಕ್ರಮದ ವೇದಿಕೆಯನ್ನು ಬಿಎಸ್‌ವೈ ಪುತ್ರ ರಾಘವೇಂದ್ರ ಜೊತೆ ತೆರಳಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಸಿದ್ಧತೆ ವೀಕ್ಷಿಸಿದ್ದಾರೆ.

ಈಶ್ವರಪ್ಪ ಬಂಡಾಯ ಶಮನಕ್ಕೆ ಕೇಸರಿ ಪಾಳಯ ಪ್ಲಾನ್
‘ಈಶ್ವರಪ್ಪ ಪುತ್ರನಿಗೆ ಟಿಕೆಟ್ ತಪ್ಪಲು ನಾವ್ಯಾರು ಕಾರಣರಲ್ಲ’

ಮೋದಿ ಶಿವಮೊಗ್ಗಕ್ಕೆ ಆಗಮನಕ್ಕೂ ಮೊದಲೇ ಈಶ್ವರಪ್ಪ ಬಂಡಾಯ ಬಿಸಿ ತಣ್ಣಗಾಗಿಸಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಬಿಎಸ್​ವೈ ಈಶ್ವರಪ್ಪನವರ ಪುತ್ರನಿಗೆ ಟಿಕೆಟ್ ತಪ್ಪಲು ನಾವ್ಯಾರು ಕಾರಣರಲ್ಲ. ಕೇಂದ್ರದ ಚುನಾವಣಾ ಸಮಿತಿಯ ನಿರ್ಧಾರದಂತೆ ಟಿಕೆಟ್ ಹಂಚಿಕೆಯಾಗಿದೆ. ಹೀಗಾಗಿ ಈಶ್ವರಪ್ಪನವರ ಮನವೊಲಿಸಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡಲು ಪ್ರಯತ್ನ ನಡೆದಿದೆ ಅಂತ ಹೇಳಿದ್ದಾರೆ.

ಇದನ್ನೂ ಓದಿ: ಅಮಿತ್ ಶಾ ಜೊತೆ HDK ಫೈನಲ್ ಮೀಟಿಂಗ್‌.. ಜೆಡಿಎಸ್‌ಗೆ ಮತ್ತೊಂದು ಬಿಗ್ ಆಫರ್; ಏನದು?

ಈಶ್ವರಪ್ಪನವರಿಗೆ ನೋವಾಗಿದೆ ನಿಜ. ಕಳೆದ ಬಾರಿ ಟಿಕೆಟ್ ಕೊಟ್ಟಿರಲಿಲ್ಲ. ನೋವಿನಿಂದ ಪಕ್ಷೇತರ ಸ್ಪರ್ಧೆ ಮಾತನಾಡಿದ್ದಾರೆ ಅಂತ ಕಲಬುರಗಿ​ನಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ. ಅವರನ್ನು ಸಮಾಧಾನ ಮಾಡುವ ಕೆಲ್ಸ ಮಾಡುತ್ತೇವೆ. ಮೋದಿ ಪ್ರಧಾನಿ ಆಗಬೇಕು ಅಂದ್ರೆ ನಮ್ಮಲ್ಲಿ ಒಡಕಾಗಬಾರದು. ಎರಡ್ಮೂರು ದಿನದಲ್ಲಿ ಈಶ್ವರಪ್ಪ ಪ್ರಕರಣ ಸುಖಾಂತ್ಯ ಮಾಡ್ತೇವೆ ಎಂದಿದ್ದಾರೆ. ನಮ್ಮ ಪಕ್ಷದ ಹಿರಿಯ ಮುಖಂಡರು ಈಶ್ವರಪ್ಪ ಜೊತೆ ಸಂಪರ್ಕದಲ್ಲಿದ್ದಾರೆ, ಸಮಾಲೋಚನೆ ನಡೆಸುತ್ತಿದ್ದಾರೆ. ನನಗೆ ಸಂಪೂರ್ಣ ವಿಶ್ವಾಸ ಇದೆ ನಮ್ಮ ವರಿಷ್ಠರು ಈಶ್ವರಪ್ಪರ ಮನವೊಲಿಸುತ್ತಾರೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಲೋಕಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ದಕ್ಷಿಣ ದಂಡಯಾತ್ರೆ ಕೈಗೊಂಡಿದ್ದಾರೆ. ಇದೇ ಸಮಯದಲ್ಲಿ ಈಶ್ವರಪ್ಪ ಬಂಡಾಯ ಶಮನಕ್ಕೆ ರಾಜ್ಯ ಕಮಲಾಧಿಪತಿಗಳು ಸರ್ಕಸ್ ಮಾಡ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾಳೆ ಮತ್ತೆ ರಾಜ್ಯಕ್ಕೆ ಬರ್ತಿದ್ದಾರೆ ಮೋದಿ; ಶಿವಮೊಗ್ಗದಲ್ಲಿ ಬಿಜೆಪಿ ನಾಯಕರಿಗೆ ಸಖತ್‌ ಟೆನ್ಷನ್; ಯಾಕೆ?

https://newsfirstlive.com/wp-content/uploads/2024/03/Modi-Karnataka.jpg

Load More