Advertisment

ಫಸ್ಟ್‌ ನೈಟ್‌ಗೆ ಹೋಗೋ ಮುನ್ನ ಇದನ್ನು ತಿನ್ನಲೇಬೇಕು; ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

author-image
Gopal Kulkarni
Updated On
ಇದೆಂಥಾ ಅನಿಷ್ಟ ಪದ್ಧತಿ! ಇಲ್ಲಿ ಬಾಡಿಗೆಗೆ ಸಿಗುತ್ತಾರಂತೆ ಹೆಣ್ಣುಮಕ್ಕಳು! ಏನಿದು ಸ್ಟೋರಿ?
Advertisment
  • ಮುಂಬೈನಲ್ಲಿ ಸಿದ್ಧಗೊಳ್ಳುತ್ತೆ ವಧ-ವರರಿಗಾಗಿಯೇ ಒಂದು ವಿಶೇಷ ಪಾನ್​!
  • ಮಧುಮಂಚಕ್ಕೆ ಹೋಗುವ ಜೋಡಿಗಳಿಗೆ ಸಿದ್ಧಗೊಳ್ಳುವ ಪಾನ್ ಬೆಲೆ ಅಬ್ಬಬ್ಬಾ
  • ನೈಸರ್ಗಿಕ ಗಿಡಮೂಲಿಕೆಗಳ ಪುಡಿಯೊಂದಿಗೆ ರೆಡಿಯಾಗುವ ವಿಶೇಷ ಪಾನ್ ಇದು

ಮುಂಬೈ: ಹೊಸದಾಗಿ ಮದುವೆಯಾಗಿ ಮಧುಮಂಚಕ್ಕೆ ಹೋಗುವ ಸಮಯದಲ್ಲಿ ವಧು-ವರನ ಮೊದಲ ರಾತ್ರಿ ದೀರ್ಘವಾಗಲಿ ಅಂತ ಅನೇಕ ರೀತಿಯ ಸಲಹೆಗಳು, ಅನೇಕ ರೀತಿಯ ಪದಾರ್ಥಗಳನ್ನು ತಿನಿಸುವುದು ರೂಢಿಯಲ್ಲಿ ಇದೆ. ಇತ್ತೀಚೆಗೆ ಒಂದು ಟ್ರೆಂಡ್ ಕೂಡ ಶುರುವಾಗಿದೆ. ಪ್ರಸ್ತದ ಕೋಣೆಗೂ ಹೋಗುವ ಮೊದಲು ಊಟ ಮಾಡಿದ ನವಜೋಡಿಗಳಿಗೆ ಪಾನ್ (ಬೀಡಾ) ನೀಡಲಾಗುತ್ತದೆ.

Advertisment

publive-image

ಇದರಿಂದ ಮಿಲನೋತ್ಸವದ ಘಳಿಗೆ ದೀರ್ಘವಾಗುತ್ತದೆ ಅನ್ನೋ ನಂಬಿಕೆಗಳು ಇವೆ. ಪಲ್ಲಂಗ್​ ಥೋಡ್ ಪಾನ್​ ರೀತಿಯ ಹಲವು ಬಗೆಯ ಪಾನ್​ಗಳು ಸದ್ಯ ಎಲ್ಲೆಡೆ ಸಿಗುತ್ತವೆ. ಅವುಗಳ ಬೆಲೆ ಅಬ್ಬಬ್ಬಾ ಅಂದ್ರೆ ನೂರರಿಂದ ನೂರೈವತ್ತು ರೂಪಾಯಿ ಇರಬಹುದು. ಆದ್ರೆ ಮುಂಬೈನಲ್ಲಿ MBA ಪದವೀಧರ ಮಾಡಿ ಕೊಡುವ ಪಾನ್ ಇದೆಯಲ್ಲಾ ಅದರ ಗತ್ತೇ ಬೇರೆ ಬಿಡಿ.

ಇದನ್ನೂ ಓದಿ: ಸ್ಪರ್ಮ್​​ ಮತ್ತು ಎಗ್​ ದಾನ ಮಾಡೋರಿಗೆ ಹೈಕೋರ್ಟ್​ ಬಿಗ್​ ಶಾಕ್​​.. ಪೋಷಕರು ಓದಲೇಬೇಕಾದ ಸ್ಟೋರಿ

publive-image

ಮುಂಬೈನ ನೌಶಾದ್ ಶೇಕ್ ಎಂಬ MBA ಪದವೀಧರ ನೈಸರ್ಗಿಕ ಗಿಡಮೂಲಿಕೆಗಳು ಹಾಗೂ ಪದಾರ್ಥಗಳನ್ನು ಬಳಸಿ ಒಂದು ಪಾನ್ ರೆಡಿ ಮಾಡುತ್ತಾರೆ. ಈ ಪಾನ್ ವಿಶೇಷವಾಗಿ ತಯಾರು ಆಗುವುದೇ ನವ ವಧು-ವರರಿಗಾಗಿ. ಅವರ ಮೊದಲ ರಾತ್ರಿಗಾಗಿಯೇ ಅಂತ ತಯಾರಾಗುವ ಈ ಪಾನ್ ಬೆಲೆ ಬರೋಬ್ಬರಿ 1 ಲಕ್ಷ ರೂಪಾಯಿ. ಅಶ್ವಗಂಧ ಹಾಗೂ ಇನ್ನಿತರ ಗಿಡಮೂಲಿಕೆಗಳ ಪುಡಿಯನ್ನು ಈ ಪಾನ್​ಗೆ ಬಳಸಲಾಗುತ್ತದೆ. ಈ ಪಾನ್​ಗೆ ಗಡ್ಡಿ ಪಾನ್ ಎಂದು ಕರೆಯುತ್ತಾರೆ. ಇದನ್ನು ನೀಡುವ ಐಷಾರಾಮಿ ರೀತಿಯಿಂದಾಗಿ ಅದನ್ನು ಪ್ರೀತಿಯ ಪರಿಮಳದ ಪಾನ್ ಎಂದೇ ಕರೆಯುತ್ತಾರೆ.

Advertisment

ಇದನ್ನೂ ಓದಿ:ಬೆಟ್ಟದ ಮೇಲೆ ಹೆಂಡತಿಯ ಬರ್ಬರ ಹತ್ಯೆ.. ಡ್ರಾಮಾ ಮಾಡಿ ಕೊಲೆ ಮಾಡಿದ ಗಂಡ ಎಸ್ಕೇಪ್‌; ಕಾರಣವೇನು?

publive-image

ನೌಶಾದ್​ ಶೇಕ್, ತಮ್ಮ ಎಂಬಿಎ ಪದವಿ ಮುಗಿಸಿ ಕಾರ್ಪೋರೇಟ್​ ಕಂಪನಿಯಲ್ಲಿ ಸಿಕ್ಕ ಕೆಲಸವನ್ನು ತೊರೆದು ಈಗ ತಮ್ಮದೇ ಕುಟುಂಬದ ವ್ಯಾಪಾರವಾದ ಪಾನ್​ ಬೀಡಾ ಅಂಗಡಿಯನ್ನು ನಡೆಸುತ್ತಾರೆ. ಹಲವಾರು ರೀತಿಯ ಸಂಶೋಧನೆಯೊಂದಿಗೆ ಈ ಹೊಸ ಪಾನ್​ ಒಂದನ್ನು ರೆಡಿ ಮಾಡುತ್ತಾರೆ. ನವ ವಧುವರರಿಗಾಗಿ ಸಿದ್ಧಗೊಳ್ಳುವ ಈ ಪಾನ್​ಗೆ ಗೋಲ್ಡನ್​ ಕವರ್ ಹಾಕಲಾಗಿರುತ್ತೆ.

publive-image
ಅಸಲಿಗೆ ಈ ಪಾನ್ ಸಿದ್ಧಗೊಳ್ಳುವುದೇ ಅತ್ಯಂತ ನೈಸರ್ಗಿಕವಾದ ಪದಾರ್ಥಗಳನ್ನು ಬಳಸಿ. ಮೊದಲು ಕಲ್ಕತ್ತಾ ಎಲೆಗೆ ಸುಣ್ಣ ಮತ್ತು ಕತ್ತಾವನ್ನು ಲೇಪಿಸಲಾಗುತ್ತದೆ. ನಂತರ ಅದರಲ್ಲಿ ಅಶ್ವಗಂಧದ ಪುಡಿ, ಖುದ್ದು ಅಂಗಡಿಯವರೇ ಹೆಸರು ಹೇಳದ ಒಂದು ಸೀಕ್ರೆಟ್ ಪೌಡರ್, ಬನಾರಸ್​ನಿಂದ ಬರುವ ಒಂದು ವಿಶೇಷವಾದ ಪುಡಿ ಹಾಗೂ ಹಿಮಾಲಯದಲ್ಲಿ ಸಿಗುವ ಅತ್ಯಂತ ನೈಸರ್ಗಿಕವಾದ ಸಿಲಾಚಿ ಎಂಬ ಪುಡಿ ಇವೆಲ್ಲವನ್ನು ಹಾಕಿ ಸುಣ್ಣ ಮತ್ತು ಕತ್ತಾ ಜೊತೆಗೆ ಚೆನ್ನಾಗಿ ತಿಕ್ಕಿ ಮಿಕ್ಸ್ ಮಾಡಲಾಗುತ್ತದೆ. ಅದಾದ ಬಳಿಕ ವಾಲ್​ನಟ್ ಸೇರಿದಂತೆ ಹಲವು ರೀತಿಯ ಡ್ರೈಫ್ರುಟ್ಸ್ ಇವರು ಒಂದು ಮಿಶ್ರಣ, ಸಿಹಿಗಾಗಿ ಅಂತ ಕೊಂಚ ಗುಲ್ಕಂದ್ ಹಾಕಿದರೇ ಪಾನ್ ಸಿದ್ಧ, ಆದ್ರೆ ಇದು ಇಷ್ಟಕ್ಕೆ ನಿಲ್ಲುವುದಿಲ್ಲ.

Advertisment

publive-image
ಈ ಪಾನ್ ಪ್ಯಾಕ್​ ಮಾಡಲೆಂದೇ ಒಂದು ವಿಶೇಷವಾದ ಬಾಕ್ಸ್ ರೆಡಿ ಮಾಡಿದ್ದಾರೆ ನೌಶಾದ್​ ಶೇಕ್. ಒಂದು ದೊಡ್ಡ ಬಾಕ್ಸ್​ನಲ್ಲಿ ಎರಡು ಪುಟ್ಟ ಬಾಕ್ಸ್​ಗಳು ಇರುತ್ತವೆ. ಒಂದರ ಹೆಸರು ಪ್ರಿನ್ಸ್ ಮತ್ತೊಂದರ ಹೆಸರು ಪ್ರಿನ್ಸಿಸ್​. ಆಯಾ ಬಾಕ್ಸ್​ಗಳಲ್ಲಿ ಅಂದ್ರೆ ವರ ತಿನ್ನುವ ಪಾನ್ ಅನ್ನು ಪ್ರಿನ್ಸ್ ಬಾಕ್ಸ್​ನಲ್ಲಿ ವಧು ತಿನ್ನುವ ಪಾನ್​ನ್ನು ಪ್ರಿನ್ಸಿಸ್ ಬಾಕ್ಸ್​ನಲ್ಲಿ ಹಾಕಲಾಗುತ್ತದೆ. ದೊಡ್ಡ ಬಾಕ್ಸ್​ನಲ್ಲಿ ಎರಡು ಬಗೆಯ ಅತ್ತರ್​ ಎಣ್ಣೆ ಇರುತ್ತವೆ. ಅದನ್ನು ವಧು ವರರು ಪೂಷಿಸಿಕೊಳ್ಳಲು ಅಂತ ಇಡಲಾಗಿರುತ್ತದೆ. ಹಾಲಿನಲ್ಲಿ ಹಾಕಿ ಕುಡಿಯಲು ಅಂತ ಕೇಸರ್ ರೀತಿಯ ಒಂದು ಜಫ್ರಾನ್ ಅನ್ನೋ ಪದಾರ್ಥವನ್ನು ಕೂಡ ಆ ಬಾಕ್ಸ್​ನಲ್ಲಿ ಇರುತ್ತದೆ. ಜೊತೆಗೆ ಮಂಚದ ಮೇಲೆ ಹಾಕಲು ಅಂತ ಗುಲಾಬಿ ಹೂವಿನ ಪಕಳೆಗಳನ್ನು ದೊಡ್ಡ ಬಾಕ್ಸ್​ನಲ್ಲಿ ಹಾಕಲಾಗಿರುತ್ತದೆ. ಅದರ ಮೇಲೆ ಈ ಪ್ರಿನ್ಸ್ ಹಾಗೂ ಪ್ರಿನ್ಸಸ್​ ಬಾಕ್ಸ್​ಗಳನ್ನಿಟ್ಟು, ಅತ್ತರ್, ಕ್ಯಾಂಡಲ್ ಹಾಗೂ ಜಾಫರ್​ಗಳನ್ನಿಟ್ಟು ಪ್ಯಾಕ್ ಮಾಡಲಾಗುತ್ತದೆ.

publive-image
ಈ ಪಾನ್ ಕೊಂಡವರಿಗೆ ಅಂತ ನೌಶಾದ್​ ಶೇಕ್ ಒಂದು ವಿಶೇಷವಾದ ತಾಜ್​ಮಹಲ್ ಪ್ರತಿಮೆಯನ್ನು ನೀಡುತ್ತಾರೆ. ತಾಜ್​ ಮಹಲ್ ಪ್ರತಿಮೆಯಲ್ಲಿರುವ ನಾಲ್ಕು ಮಿನಾರ್​ಗಳಲ್ಲೂ ನಾಲ್ಕು ಬಗೆಯ ಪರಿಮಳ ಸೂಸುವ ಅತ್ತರ್ ಇರುತ್ತದೆ. ಗುಮ್ಮಟದಲ್ಲಿ ಮತ್ತೊಂದು ರೀತಿಯ ಪರಿಮಳ ಬೀರುವ ಅತ್ತರ್ ಇರುತ್ತದೆ. ಈ ಅತ್ತರ್​ಗಳ ಪರಿಮಳವು ಗಂಡು ಹೆಣ್ಣು ಇರುವ ಕೋಣೆಯಲ್ಲಿ ಒಂದು ಬಗೆಯ ಮಾದಕತೆಯನ್ನು ಸೃಷ್ಟಿಸುತ್ತದೆ ಎಂದು ನೌಶಾದ್ ಶೇಕ್ ಹೇಳುತ್ತಾರೆ.

ಇದನ್ನೂ ಓದಿ: ನೀರಜ್ ಬಗ್ಗೆ ಕೇಳ್ತಿದ್ದಂತೆ ನಾಚಿಕೊಂಡ ಮನು ಭಾಕರ್.. ಪ್ರೀತಿ, ಮದುವೆ ಬಗ್ಗೆ ಮೌನ ಮುರಿದ ಅಥ್ಲೀಟ್..!

Advertisment

ಈ ಒಂದು ಲಕ್ಷ ರೂಪಾಯಿ ಬೆಲೆಯ ಪಾನ್​ ಬೇಕೆಂದೆರೆ ನೀವು ನಾಲ್ಕು ದಿನಗಳ ಮುಂಚೆಯೇ ಹೇಳಬೇಕು ಹಾಗೂ ಅಡ್ವಾನ್ಸ್ ಕೊಟ್ಟು ಬುಕ್ ಮಾಡಿಸಬೇಕು. ಭಾರತದ ಯಾವುದೇ ಮೂಲೆಯಲ್ಲಿದ್ದವರೂ ಕೂಡ ಆರ್ಡರ್ ನೀಡಿ ತರಿಸಿಕೊಳ್ಳಬಹುದು. ಕೇವಲ ಇದೊಂದೇ ಪಾನ್ ಅಲ್ಲ. ಮಕ್ಕಳಿಗಾಗಿ ಅಂತಲೇ ಒಂದು ವಿಶೇಷ ಪಾನ್ ಇದೆ. ಸಕ್ಕರೆ ಕಾಯಿಲೆ ಇದ್ದವರಿಗೆ ಶುಗರ್​ ಫ್ರೀ ಪಾನ್ ಇದೆ. ಇನ್ನೊಂದು ವಿಶೇಷ ಪಾನ್ ಅಂದ್ರೆ ಅದು ಐಸ್ ಪಾನ್​. ಆ ಐಸ್ ಪಾನ್ ತಿಂದು ನೌಶಾದ್​ ಪಾನ್ ಅಂಗಡಿಯಲ್ಲಿ ಬರೆದಿರುವ ಒಂದು ಶಾಯರಿಯನ್ನು ತೊದಲದೇ ಓದಿದರೆ ಅವರಿಗೆ ಆ ಪಾನ್ ಫ್ರೀ ಕೊಡಲಾಗುತ್ತದೆ ಎಂದು ದಿ ಪಾನ್ ಸ್ಟೋರಿ ಅಂಗಡಿಯ ಮಾಲೀಕ ನೌಶಾದ್​ ಶೇಕ್ ಸವಾಲನ್ನು ಕೂಡ ಹಾಕುತ್ತಾರೆ.

ಗಡ್ಡಿ ಪಾನ್ ಜೊತೆ ಸಿಗುತ್ತವೆ ಇನ್ನೂ ಹಲವು ಪಾನ್​ಗಳು

ಸದ್ಯ ಮುಂಬೈನಲ್ಲಿ ಈ ಗಡ್ಡಿ ಪಾನ್ ಅಥವಾ ಪ್ರೇಮ ಪರಿಮಳದ ಪಾನ್ ಒಂದು ಹವಾ ಸೃಷ್ಟಿಸಿದೆ. ದುಬಾರಿಯಾದರೂ ಅದು ನೀಡುವ ಮೊದ, ಅಮಲು, ಘಮಲು ಎಲ್ಲಕ್ಕೂ ಕೂಡ ಜನರು ಫಿದಾ ಆಗಿದ್ದಾರೆ. ಮದುವೆ ಸೀಜನ್​ನಲ್ಲಿ ಈ ಐಶಾರಾಮಿ ಪಾನ್​ಗೆ ಬಲು ಬೇಡಿಕೆ ಇರುತ್ತದೆ ಎಂದು ನೌಶಾದ್ ಹೇಳುತ್ತಾರೆ. ಆದ್ರೆ ಮದ್ಯಮ ವರ್ಗ ಸಾಮಾನ್ಯ ವರ್ಗದವರು ಇಂತಹದೊಂದು ಪಾನ್ ಇದೆ ಎಂದು ಕೇಳಿ ಅಚ್ಚರಿಯ ಜೊತೆಗೆ ಖುಷಿಯನ್ನುಪಡಬಹುದಷ್ಟೇ ಏಕೆಂದರೆ ಈ ಪಾನ್​ ನಮ್ಮ ನಿಮ್ಮಂತವರ ಕೈಗೆ ಎಟುಕುವಂತದ್ದಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment