newsfirstkannada.com

ಲೋಕಸಭಾ ಚುನಾವಣೆ ಪ್ರಚಾರ ಮುಗಿಯುತ್ತಿದ್ದಂತೆ ಮೋದಿ ಧ್ಯಾನ; ಎಲ್ಲಿ? ಏನಿದರ ವಿಶೇಷ?

Share :

Published May 28, 2024 at 8:18pm

    ಮತ್ತೊಮ್ಮೆ ಸುದೀರ್ಘ ಧ್ಯಾನಕ್ಕೆ ತೆರಳಲು ಸಜ್ಜಾದ ಪ್ರಧಾನಿ ನರೇಂದ್ರ ಮೋದಿ

    2014ರಲ್ಲಿ ಶಿವಾಜಿಯ ಪ್ರತಾಪಗಢ ಕೋಟೆಗೆ ಭೇಟಿ ಕೊಟ್ಟಿದ್ದ ಮೋದಿ

    2019ರ ಚುನಾವಣೆ ಬಳಿಕ ಕೇದಾರನಾಥದಲ್ಲಿ ಪ್ರಧಾನಮಂತ್ರಿ ಧ್ಯಾನ

ನವದೆಹಲಿ: 2024ರ ಲೋಕಸಭಾ ಚುನಾವಣಾ ಪ್ರಚಾರ ಮುಗಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಸುದೀರ್ಘ ಧ್ಯಾನಕ್ಕೆ ತೆರಳುತ್ತಿದ್ದಾರೆ.

ಪ್ರತಿ ಬಾರಿ ಲೋಕಸಭಾ ಚುನಾವಣೆಯ ಪ್ರಚಾರ ಮುಗಿದ ಬಳಿಕವೂ ಮೋದಿ ಅವರು ಆಧ್ಯಾತ್ಮಿಕತೆಯ ಕಡೆಗೆ ತೆರಳುತ್ತಾರೆ. 2014ರಲ್ಲಿ ಶಿವಾಜಿಯ ಪ್ರತಾಪಗಢ ಕೋಟೆಗೆ ಭೇಟಿ ಕೊಟ್ಟಿದ್ದರು. 2019ರ ಲೋಕಸಭಾ ಚುನಾವಣೆ ಬಳಿಕ ಪ್ರಧಾನಿ ಮೋದಿ ಅವರು ಕೇದಾರನಾಥದಲ್ಲಿ ಧ್ಯಾನ ಮಾಡಿದ್ದರು.

2014, 2019 ರಂತೆಯೇ 2024ರ ಲೋಕಸಭಾ ಚುನಾವಣೆ ಫಲಿತಾಂಶಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಕನ್ಯಾಕುಮಾರಿಯ ವಿವೇಕಾನಂದ ರಾಕ್‌ನಲ್ಲಿ ಮೋದಿ ಧ್ಯಾನ ಮಾಡಲಿದ್ದಾರೆ ಎನ್ನಲಾಗಿದೆ. ಸದ್ಯ 73ರ ವಯಸ್ಸಾಗಿರುವ ಪ್ರಧಾನಿ ಮೋದಿ ಅವರು ಸುಮಾರು 48 ಗಂಟೆಗಳ ಕಾಲ ಧ್ಯಾನದಲ್ಲಿ ಕೂರುವ ಸಾಧ್ಯತೆ ಇದೆ.

ಇದೇ ಮೇ 31ರಂದು ಪ್ರಧಾನಿ ಮೋದಿ ಅವರು ಕನ್ಯಾಕುಮಾರಿಯ ವಿವೇಕಾನಂದ ರಾಕ್‌ನಲ್ಲಿ ಧ್ಯಾನಕ್ಕೆ ಪ್ಲ್ಯಾನ್ ಮಾಡಿದ್ದಾರೆ. ಜೂನ್ 1ರಂದು ದೇಶದಲ್ಲಿ 7ನೇ ಹಾಗೂ ಕೊನೆಯ ಹಂತದ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ. ಪ್ರಧಾನಿ ಮೋದಿ ಅವರು ಸ್ಪರ್ಧಿಸಿರುವ ವಾರಾಣಸಿ ಕ್ಷೇತ್ರದಲ್ಲೂ ಜೂನ್ 1ರಂದೇ ಮತದಾನ ನಡೆಯುತ್ತಿದೆ. ಜೂನ್ 1ರಂದು ಕೂಡ ನರೇಂದ್ರ ಮೋದಿ ಅವರು ಕನ್ಯಾಕುಮಾರಿಯ ವಿವೇಕಾನಂದ ರಾಕ್‌ನಲ್ಲಿ ಧ್ಯಾನ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: VIDEO: ತಲೆ ಮೇಲೆ ದಬದಬನೇ ನೀರು ಸುರಿದುಕೊಂಡ ರಾಹುಲ್ ಗಾಂಧಿ; ಮೋದಿಗೆ ಖಡಕ್ ಸವಾಲು! 

ಇಷ್ಟು ದಿನ ಉತ್ತರ ಭಾರತದಲ್ಲಿ ಧ್ಯಾನ ಮಾಡುತ್ತಿದ್ದ ಪ್ರಧಾನಿ ಮೋದಿ ಅವರು ಇದೀಗ ದಕ್ಷಿಣ ಭಾರತದ ತುದಿಯಲ್ಲಿ ಧ್ಯಾನ ಮಾಡುತ್ತಿದ್ದಾರೆ. ಮೇ 30ರಂದು ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿರುವ ವಿವೇಕಾನಂದ ರಾಕ್‌ ಮೆಮೋರಿಯಲ್ ಸ್ಥಳಕ್ಕೆ ಪ್ರಧಾನಿ ಮೋದಿ ಅವರು ಭೇಟಿ ನೀಡುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೋಕಸಭಾ ಚುನಾವಣೆ ಪ್ರಚಾರ ಮುಗಿಯುತ್ತಿದ್ದಂತೆ ಮೋದಿ ಧ್ಯಾನ; ಎಲ್ಲಿ? ಏನಿದರ ವಿಶೇಷ?

https://newsfirstlive.com/wp-content/uploads/2024/05/Modi-Meditaion.jpg

Load More