newsfirstkannada.com

×

ಉದಯ​ ನಿಧಿ ಸ್ಟಾಲಿನ್​ ಹೇಳಿಕೆಗೆ ಪ್ರಧಾನಿ ಪ್ರತಿಕ್ರಿಯೆ; ಸನಾತನ ಧರ್ಮದ ಕುರಿತು ಪ್ರತ್ಯುತ್ತರ ನೀಡಲು ಸಚಿವರಿಗೆ ಮೋದಿ ಕರೆ

Share :

Published September 7, 2023 at 8:25am

    ಸನಾತನ ಧರ್ಮದ ಕುರಿತು ಉದಯನಿಧಿ ಸ್ಟಾಲಿನ್ ವಿವಾದಾತ್ಮಕ ಹೇಳಿಕೆ

    ಅಧಿಕೃತ ವ್ಯಕ್ತಿ ಮಾತ್ರ ಈ ವಿಷಯದ ಬಗ್ಗೆ ಮಾತನಾಡಿದರೆ ಸಾಕು ಎಂದ ಪ್ರಧಾನಿ

    ಇತಿಹಾಸಕ್ಕೆ ಹೋಗಬೇಡಿ, ಸಂವಿಧಾನದ ಪ್ರಕಾರ ಸತ್ಯಗಳಿಗೆ ಅಂಟಿಕೊಳ್ಳಿ ಎಂದ ಮೋದಿ

ಉದಯನಿಧಿ ಸ್ಟಾಲಿನ್ ವಿವಾದಾತ್ಮಕ ಹೇಳಿಕೆಗೆ ತಕ್ಕ ಉತ್ತರ ನೀಡಬೇಕು ಎಂದು ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ. ದೆಹಲಿಯಲ್ಲಿ ಜಿ 20 ಶೃಂಗಸಭೆಯ ಮೊದಲು ಮಂತ್ರಿ ಮಂಡಳಿಯ ಸಭೆಯಲ್ಲಿ ಪ್ರಧಾನಿ ಮೋದಿ ಈ ಬಗ್ಗೆ ಮಾತನಾಡಿದ್ದಾರೆ.

ಪ್ರಧಾನಿ ಮೋದಿ ಅವರು ಇತಿಹಾಸಕ್ಕೆ ಹೋಗಬೇಡಿ, ಆದರೆ ಸಂವಿಧಾನದ ಪ್ರಕಾರ ಸತ್ಯಗಳಿಗೆ ಅಂಟಿಕೊಳ್ಳಿ. ಸಮಸ್ಯೆಯ ಸಮಕಾಲೀನ ಪರಿಸ್ಥಿತಿಯ ಬಗ್ಗೆಯೂ ಮಾತನಾಡಿ ಅಂತ ಕಿವಿಮಾತು ಹೇಳಿದ್ದಾರೆ.
ಇನ್ನು, ಇಂಡಿಯಾ ಮತ್ತು ಭಾರತ ವಿವಾದದ ಬಗ್ಗೆ ಪ್ರತಿಕ್ರಿಯಿಸದಂತೆ ಸಚಿವರಿಗೆ ಸಲಹೆ ಕೂಡ ನೀಡಿದ್ದಾರೆ. ಅಧಿಕೃತ ವ್ಯಕ್ತಿ ಮಾತ್ರ ಈ ವಿಷಯದ ಬಗ್ಗೆ ಮಾತನಾಡಿದರೆ ಸಾಕು ಎಂದಿದ್ದಾರೆ.

ಏನಿದು ಘಟನೆ?

ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಪುತ್ರ ಹಾಗೂ ಡಿಎಂಕೆ ಸಚಿವ ಉದಯ ನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಪ್ರಗತಿಪರ ಲೇಖಕರು ಆಯೋಜಿಸಿದ್ದ ‘ಸನಾತನ ನಿರ್ಮೂಲನಾ ಸಮ್ಮೇಳನ’ದಲ್ಲಿ ಉದಯನಿಧಿ ಸ್ಟಾಲಿನ್‌ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ ಮಾತನಾಡಲು ನನಗೆ ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು. ನೀವು ಈ ಕಾರ್ಯಕ್ರಮವನ್ನು ಸನಾತನ ವಿರೋಧಿ ಸಮ್ಮೇಳನ ಎನ್ನುವ ಬದಲು ಸನಾತನ ನಿರ್ಮೂಲನಾ ಸಮ್ಮೇಳನ ಎಂದು ಆಯೋಜಿಸಿದ್ದೀರಿ. ಇದಕ್ಕೆ ನನಗೆ ಬಹಳ ಇಷ್ಟವಾಯಿತು. ಕೆಲವು ವಿಚಾರಗಳನ್ನು ನಾವು ವಿರೋಧಿಸುವ ಬದಲು ಅವುಗಳನ್ನು ನಿರ್ಮೂಲನೆ ಮಾಡುವುದೇ ಸರಿ. ಸನಾತನ ಧರ್ಮವನ್ನೂ ನಾವು ವಿರೋಧಿಸುವ ಬದಲು ನಿರ್ಮೂಲನೆ ಮಾಡಬೇಕು ಎಂದು ಉದಯನಿಧಿ ಸ್ಟಾಲಿನ್ ಹೇಳಿದ್ದರು.

ಮುಂದುವರಿದು ಮಾತನಾಡಿರುವ ಉದಯನಿಧಿ ಅವರು ಸನಾತನ ಧರ್ಮವು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ. ಕೆಲವು ವಿಷಯಗಳನ್ನು ನಾವು ವಿರೋಧಿಸಲು ಸಾಧ್ಯವಿಲ್ಲ, ಅದನ್ನು ರದ್ದುಗೊಳಿಸಬೇಕು. ನಾವು ಡೆಂಗ್ಯೂ, ಮಲೇರಿಯಾ ಅಥವಾ ಕೊವಿಡ್-19 ಅನ್ನು ವಿರೋಧಿಸಲು ಸಾಧ್ಯವಿಲ್ಲ. ಆದ್ರೆ ಇದನ್ನು ನಿರ್ಮೂಲನೆ ಮಾಡಬೇಕು ಎಂದು ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ. ಉದಯನಿಧಿ ಅವರು ಮಾತನಾಡಿರೋ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉದಯ​ ನಿಧಿ ಸ್ಟಾಲಿನ್​ ಹೇಳಿಕೆಗೆ ಪ್ರಧಾನಿ ಪ್ರತಿಕ್ರಿಯೆ; ಸನಾತನ ಧರ್ಮದ ಕುರಿತು ಪ್ರತ್ಯುತ್ತರ ನೀಡಲು ಸಚಿವರಿಗೆ ಮೋದಿ ಕರೆ

https://newsfirstlive.com/wp-content/uploads/2023/09/Modi.jpg

Load More