newsfirstkannada.com

ವೋಟ್​ ಮಾಡಿ ಬೆರಳು ತೋರಿಸಿದ ಮೋದಿ.. ಮತದಾನ ಬಳಿಕ ಏನಂದ್ರು ಗೊತ್ತಾ?  

Share :

Published May 7, 2024 at 8:27am

  ದೇಶದಲ್ಲಿಂದು 3ನೇ ಹಂತದ ಲೋಕಸಭಾ ಚುನಾವಣೆ

  ವೋಟ್​ ಮಾಡಿ ನಗುವೊಗದಿಂದ ಹೊರಬಂದ ಮೋದಿ

  ಮತದಾನದ ಬಳಿಕ ಪ್ರಧಾನಿ ನರೇಂದ್ರ ಮೋದಿ ಏನಂದ್ರು ಗೊತ್ತಾ?

ದೇಶದಲ್ಲಿಂದು 3ನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಮತದಾನ ಮಾಡಿದ್ದಾರೆ. ಅಹಮದಾಬಾದ್​ನಲ್ಲಿ ಮತ ಚಲಾಯಿಸಿದ್ದಾರೆ.

ಬಿಳಿ ಕುರ್ತಾ ಮತ್ತು ಕೇಸರಿ ಜಾಕೆಟ್​ ಧರಿಸಿದ ಪ್ರಧಾನಿ ಮೋದಿಯವರು ಅಹಮದಾಬಾದ್​ನ ನಿಶಾನ್​​ ಹೈಯರ್​ ಸೆಕೆಂಡರಿ ಶಾಲೆಯ ಮತಗಟ್ಟೆಗೆ ಆಗಮಿಸಿ ವೋಟ್​ ಹಾಕಿದ್ದಾರೆ. ಈ ಕ್ಷೇತ್ರದಲ್ಲಿ ಗೃಹ ಸಚಿವ ಅಮಿತ್​ ಶಾ ಸ್ಪರ್ಧಿಸಿದ್ದಾರೆ. ಸದ್ಯ ಅವರ ಮತದಾನ ಬಾಕಿಯಿದೆ. ಪ್ರಧಾನಿ ಮತ್ತು ಗೃಹ ಸಚಿವರಿಗಾಗಿ ಅಲ್ಲಿನ  ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

ಇದನ್ನೂ ಓದಿ: ದೇಶದಲ್ಲಿಂದು 3ನೇ ಹಂತದ ಮತದಾನ.. ಯಾವ್ಯಾವ ರಾಜ್ಯ? ಎಷ್ಟು ಕ್ಷೇತ್ರಗಳಲ್ಲಿಂದು ಚುನಾವಣೆ ನಡೆಯುತ್ತಿದೆ ಗೊತ್ತಾ?

ಮತದಾನ ಮಾಡಿ ಮತಗಟ್ಟೆಯಿಂದ ಹೊರಬಂದ ಮೋದಿ ಕ್ಯಾಮೆರಾಗೆ ತಾನು ಓಟ್​ ಹಾಕಿರೋದನ್ನು ತೋರಿಸಿದ್ದಾರೆ. ಮತಗಟ್ಟೆಯಿಂದ ನಗು ಮೊಗದಿಂದ ಬಂದ ಅವರು ಶುಭಾಶಯ ಕೋರಿದ್ದಾರೆ. ಬಳಿಕ ಜನರೊಂದಿಗೆ ಮಾತನಾಡಿದ್ದಾರೆ. ಮಾತ್ರವಲ್ಲದೆ ಅಭಿಮಾನಿಗಳಿಗೆ ಆಟೋಗ್ರಾಫ್​ ನೀಡಿದ್ದಾರೆ.

ಮತದಾನ ಬಳಿಕ ಮೋದಿ ಏನಂದ್ರು?

‘‘ಇಂದು ಮೂರನೇ ಹಂತದ ಲೋಕಸಭೆ ಚುನಾವಣೆ. ಈ ಪ್ರಜಾಪ್ರಭುತ್ವದಲ್ಲಿ ಮತದಾನ ಮಾಡುವಂತೆ ನಾನು ಪ್ರತಿಯೊಬ್ಬರಲ್ಲಿ ಮನವಿ ಮಾಡುತ್ತೇನೆ. ಚುನಾವಣಾ ಪ್ರಚಾರ ಇನ್ನೂ ಮೂರ್ನಾಲ್ಕು ವಾರಗಳ ಕಾಲ ನಡೆಯಲಿದೆ. ನಾನು ಯಾವಾಗಲೂ ಗುಜರಾತ್‌ನಲ್ಲಿ ನನ್ನ ಮತ ಚಲಾಯಿಸುತ್ತೇನೆ. ಅಮಿತ್ ಶಾ ಸ್ಪರ್ಧಿಸುತ್ತಿದ್ದಾರೆ. ನಾನು ನಿನ್ನೆ ಆಂಧ್ರಪ್ರದೇಶದಿಂದ ಇಲ್ಲಿಗೆ ಬಂದಿದ್ದೇನೆ ಮತ್ತು ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ತೆಲಂಗಾಣಕ್ಕೆ ಇಂದು)ಹೋಗಬೇಕಾಗಿದೆ’’ ಎಂದು ಮೋದಿ ಹೇಳಿದರು.

ಕೇಸ್ ಸ್ಟಡಿ ಮಾಡಬೇಕು ಮಾಡಬೇಕು ಎಂದ ಪ್ರಧಾನಿ

‘‘ಭಾರತದ ಚುನಾವಣಾ ಪ್ರಕ್ರಿಯೆ, ಚುನಾವಣಾ ನಿರ್ವಹಣೆಯು ಪ್ರಪಂಚದ ಪ್ರಜಾಪ್ರಭುತ್ವಗಳು ಕಲಿಯಲು ಒಂದು ಉದಾಹರಣೆಯಾಗಿದೆ. ವಿಶ್ವದ ದೊಡ್ಡ ವಿಶ್ವವಿದ್ಯಾಲಯಗಳು ಕೇಸ್ ಸ್ಟಡಿ ಮಾಡಬೇಕು. ಸುಮಾರು 64 ದೇಶಗಳಲ್ಲಿ ಚುನಾವಣೆಗಳು ನಡೆಯುತ್ತಿವೆ ಮತ್ತು ಅವೆಲ್ಲವನ್ನೂ ಹೋಲಿಕೆ ಮಾಡಬೇಕು. ಈ ವರ್ಷ ಪ್ರಜಾಪ್ರಭುತ್ವದ ಆಚರಣೆಯಂತೆ. ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿ ಮತ್ತು ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸಲು ನಾನು ದೇಶವಾಸಿಗಳಿಗೆ ಮತ್ತೊಮ್ಮೆ ಹೇಳುತ್ತೇನೆ’’ ಎಂದು ಮೋದಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವೋಟ್​ ಮಾಡಿ ಬೆರಳು ತೋರಿಸಿದ ಮೋದಿ.. ಮತದಾನ ಬಳಿಕ ಏನಂದ್ರು ಗೊತ್ತಾ?  

https://newsfirstlive.com/wp-content/uploads/2024/05/Modi-6.jpg

Load More