newsfirstkannada.com

ಮೋದಿ ಸಂಪುಟದಲ್ಲಿ ಕುಮಾರಸ್ವಾಮಿಗೆ ಸಚಿವ ಸ್ಥಾನ ಫಿಕ್ಸ್‌? ಪ್ರಧಾನಿ ಜೊತೆ ಪ್ರಮಾಣ ಸ್ವೀಕರಿಸೋರು ಯಾರು?

Share :

Published June 6, 2024 at 9:42pm

    ಶನಿವಾರದ ಬದಲು ಭಾನುವಾರ ಸಂಜೆ ಮೋದಿ ಪ್ರಮಾಣವಚನ

    ಜೆಡಿಎಸ್‌ನಿಂದ ಹೆಚ್.ಡಿ.ಕುಮಾರಸ್ವಾಮಿಗೆ ಮಂತ್ರಿ ಸ್ಥಾನ ಫಿಕ್ಸಾ?

    ಬಾಂಗ್ಲಾದೇಶ, ಶ್ರೀಲಂಕಾ, ಭೂತಾನ್, ನೇಪಾಳ, ಮಾರಿಷಸ್‌ಗೆ ಆಹ್ವಾನ

ನವದೆಹಲಿ: ತೀಸ್ರಿ ಬಾರ್ ಮೋದಿ ಸರ್ಕಾರ್‌.. ಮೋದಿ ಮತ್ತೊಮ್ಮೆ ಪ್ರಧಾನಿ ಎಂಬ ಮಾತು ನಿಜವಾಗಿದೆ. ತ್ರಿವಿಕ್ರಮನಂತೆ ನಮೋ ಮತ್ತೊಮ್ಮೆ ಪ್ರಧಾನಿ ಪಟ್ಟ ಅಲಂಕರಿಸಲಿದ್ದಾರೆ. ಜೂನ್ 9ರಂದು ಸಂಜೆ 6 ಗಂಟೆಗೆ ಪ್ರಮಾಣವಚನಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಜೂನ್‌ 8ರಂದೇ ಪದಗ್ರಹಣ ನಡೆಯಲಿದೆ ಅಂತ ಹೇಳಲಾಗಿತ್ತು. ಆದ್ರೀಗ ಮೋದಿ ಪ್ರಮಾಣವಚನ ಕಾರ್ಯಕ್ರಮವನ್ನ ಒಂದು ದಿನಕ್ಕೆ ಮುಂದೂಡಲಾಗಿದ್ದು, ಅಂದೇ ಸಚಿವ ಸಂಪುಟ ಸದಸ್ಯರಿಗೂ ಪದಗ್ರಹಣ ನಡೆಯುವ ಸಾಧ್ಯತೆ ಇದೆ.

ಇದನ್ನೂ ಓದಿ: ಕಂಗನಾ ಕಪಾಳಕ್ಕೆ ಬಾರಿಸಿದ ಸಿಬ್ಬಂದಿಗೆ ಸಸ್ಪೆಂಡ್‌ ಶಿಕ್ಷೆ.. ಯಾರು ಈ ಕುಲ್ವಿಂದರ್ ಕೌರ್? ಕೋಪಕ್ಕೆ ಕಾರಣವೇನು? 

ದೇಶದಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರದ ಗದ್ದುಗೆ ಹಿಡಿದಿದೆ. ಮಿತ್ರಪಕ್ಷಗಳ ಜೊತೆ ಸೇರಿ ಕೇಸರಿ ಸೇನೆ ಭವ್ಯ ಭಾರತದ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ದಿನಾಂಕ ನಿಗದಿಯಾಗಿದೆ. ಈ ಮೊದಲು ನಿಗದಿಪಡಿಸಿದ್ದ ಡೇಟ್‌ನಿಂದ ಪದಗ್ರಹಣ ಕಾರ್ಯಕ್ರಮವನ್ನ ಒಂದು ದಿನಕ್ಕೆ ಮುಂದೂಡಲಾಗಿದೆ.

ಜೂನ್‌ 9ರಂದು ನರೇಂದ್ರ ಮೋದಿ ಪದಗ್ರಹಣ
ಶನಿವಾರದ ಬದಲು ಭಾನುವಾರ ಪ್ರಮಾಣವಚನ
ನರೇಂದ್ರ ದಾಮೋದರ ದಾಸ್ ಮೋದಿಯಾದ ನಾನು.. ಈ ಶಬ್ಧ ಮತ್ತೊಮ್ಮೆ ದೇಶದೆಲ್ಲೆಡೆ ಮಾರ್ಧನಿಸಲಿದೆ.. ಸತತ ಮೂರನೇ ಬಾರಿಗೆ ಈ ಉದ್ಘೋಷ ಭಾರತದಲ್ಲಿ ಕೇಳಿಬರಲಿದೆ.. ಜೂನ್‌ 8 ಶನಿವಾರದ ಬದಲಾಗಿ ಜೂನ್ 9ರಂದು ನರೇಂದ್ರ ಮೋದಿ ಪ್ರಮಾಣವಚನ ಕಾರ್ಯಕ್ರಮ ನಿಗದಿಯಾಗಿದೆ.. ಇದೇ ಭಾನುವಾರದಂದು ಮೋದಿ ತ್ರಿವಿಕ್ರಮನಂತೆ ಎನ್​ಡಿಎ ಮೈತ್ರಿಕೂಟಗಳ ಜೊತೆ ಸೇರಿ ಮೂರನೇ ಬಾರಿಗೆ ಸರ್ಕಾರವನ್ನ ರಚನೆ ಮಾಡಲಿದ್ದಾರೆ. ಈಗಾಗಲೇ 17ನೇ ಲೋಕಸಭೆಯನ್ನ ವಿಸರ್ಜನೆ ಮಾಡಲಾಗಿದ್ದು, ಹೊಸ ಸರ್ಕಾರ ರಚನೆಗೆ ಮೋದಿ ಸಿದ್ಧತೆ ನಡೆಸಿದ್ದಾರೆ. ಈ ಕಾರ್ಯಕ್ರಮಕ್ಕೆ ಬಾಂಗ್ಲಾದೇಶ, ಶ್ರೀಲಂಕಾ, ಭೂತಾನ್, ನೇಪಾಳ ಮತ್ತು ಮಾರಿಷಸ್‌ ದೇಶದ ಪ್ರಮುಖ ನಾಯಕರಿಗೆ ಆಹ್ವಾನ ನೀಡಲಾಗಿದೆ.

ಇದನ್ನೂ ಓದಿ: ಚಿರಂಜೀವಿ ನೋಡಿ ಪವನ್ ಕಲ್ಯಾಣ್ ಕಣ್ಣೀರು; ತಮ್ಮನಿಗೆ ಅಣ್ಣನ ಹೃದಯಸ್ಪರ್ಶಿ ಸ್ವಾಗತ; ವಿಡಿಯೋ ವೈರಲ್‌! 

ಜೂನ್ 7ರಂದು ಅಂದ್ರೆ ನಾಳೆಯೇ ನರೇಂದ್ರ ಮೋದಿ ಅವರು ರಾಷ್ಟ್ರಪತಿಯನ್ನು ಭೇಟಿ ಮಾಡಲಿದ್ದಾರೆ. ಅಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಸರ್ಕಾರ ರಚನೆಗೆ ನರೇಂದ್ರ ಮೋದಿ ಹಕ್ಕು ಮಂಡಿಸಲಿದ್ದಾರೆ. ಕ್ಯಾಬಿನೆಟ್ ಸದಸ್ಯರ ಲಿಸ್ಟ್‌ನ ಅಂತಿಮಗೊಳಿಸಿದ ಬಳಿಕ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಅಂದು ಹೇಳಲಾಗಿದೆ. ಜೂನ್ 9ರ ಸಂಜೆ 6 ಗಂಟೆಗೆ ಮೂರನೇ ಬಾರಿ ಪ್ರಧಾನಿಯಾಗಿ ನಮೋ ಅಧಿಕಾರ ಸ್ವೀಕರಿಸಲಿದ್ದಾರೆ. ಮಿತ್ರಪಕ್ಷಗಳ ಸಚಿವರ ಜೊತೆಯಲ್ಲೇ ನಮೋ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ.

ಎಲ್ಲಾ ಮಿತ್ರಪಕ್ಷಗಳಿಗೂ ಮೋದಿ ಸಂಪುಟದಲ್ಲಿ ಸ್ಥಾನ
ಮೋದಿ ಸಂಪುಟದಲ್ಲಿ ಎಲ್ಲಾ ಮಿತ್ರಪಕ್ಷಗಳಿಗೂ ಸ್ಥಾನಮಾನ ಸಿಗುವ ನಿರೀಕ್ಷೆ ಇದೆ. ಅದರಲ್ಲೂ ಕಿಂಗ್ ಮೇಕರ್‌ಗಳಾದ ಟಿಡಿಪಿ ಮತ್ತು ಜೆಡಿಯುಗೆ ಹೆಚ್ಚಿನ ಆದ್ಯತೆ ಸಿಗೋ ಲಕ್ಷಣವಿದೆ. ಕೇಂದ್ರ ಕ್ಯಾಬಿನೆಟ್‌ನಲ್ಲಿ ಹೆಚ್‌.ಡಿ. ಕುಮಾರಸ್ವಾಮಿ ಕೂಡ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಅಲ್ಲದೇ ಆಯಾ ಪಕ್ಷಗಳ ಸ್ಥಾನದ ಆಧಾರದ ಮೇಲೆ ಸಚಿವ ಸ್ಥಾನಗಳ ಹಂಚಿಕೆ ನಡೆಯೋದು ಬಹುತೇಕ ಪಕ್ಕಾ ಆಗಿದೆ. ಈ ಮೂಲಕ ಹಂಗಿನ ಅರಮನೆಯಲ್ಲಿ ಎಲ್ಲರನ್ನೂ ಸಮಾಧಾನಪಡಿಸುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯೋನ್ಮುಖವಾಗಿದೆ.

ಸಚಿವರೂ ಪದಗ್ರಹಣ 

  • ಟಿಡಿಪಿಯಿಂದ ಮೂವರು ಕೇಂದ್ರ ಸಂಪುಟ ಸೇರ್ಪಡೆ
  • ಜೆಡಿಯುನಿಂದಲೂ ಎರಡರಿಂದ ಮೂವರು ಪದಗ್ರಹಣ
  • ಕರ್ನಾಟಕದ ಜೆಡಿಎಸ್‌ನಿಂದ ಹೆಚ್.ಡಿ.ಕುಮಾರಸ್ವಾಮಿ
  • ಎಲ್‌ಜೆಪಿಯಿಂದ ಚಿರಾಗ್ ಪಾಸ್ವಾನ್ ಪದಗ್ರಹಣ ನಿರೀಕ್ಷೆ
  • ಶಿವಸೇನೆ(ಶಿಂಧೆ) ಪಕ್ಷದಿಂದ ಒಬ್ಬರು ಪದಗ್ರಹಣ ಸಾಧ್ಯತೆ
  • ರಾಜ್ಯ ಖಾತೆ ಸಚಿವರು ಪ್ರಮಾಣವಚನ ಪಡೆಯೋ ಸಾಧ್ಯತೆ

ನರೇಂದ್ರ ಮೋದಿ ಅವರು 1962ರ ಬಳಿಕ ಇದೇ ಮೊದಲ ಬಾರಿಗೆ ಸತತ ಮೂರನೇ ಸಲ ಪ್ರಧಾನಿ ಹುದ್ದೆ ಅಲಂಕರಿಸಲಿದ್ದಾರೆ. ಈ ಮೂಲಕ ಮತ್ತೆ ದೇಶದಲ್ಲಿ ಎನ್‌ಡಿಎ ಪರ್ವ ಆರಂಭವಾಗಲಿದೆ. ಮತ್ತೊಮ್ಮೆ ಭವ್ಯ ಭಾರತದ ಅಧ್ಯಾಯದಲ್ಲಿ ನಮೋ ಪರ್ವ ಶುರುವಾಗೋದು ಪಕ್ಕಾ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಮೋದಿ ಸಂಪುಟದಲ್ಲಿ ಕುಮಾರಸ್ವಾಮಿಗೆ ಸಚಿವ ಸ್ಥಾನ ಫಿಕ್ಸ್‌? ಪ್ರಧಾನಿ ಜೊತೆ ಪ್ರಮಾಣ ಸ್ವೀಕರಿಸೋರು ಯಾರು?

https://newsfirstlive.com/wp-content/uploads/2023/07/HDK-Modi.jpg

Load More