newsfirstkannada.com

ಕಂಗನಾ ಕಪಾಳಕ್ಕೆ ಬಾರಿಸಿದ ಸಿಬ್ಬಂದಿಗೆ ಸಸ್ಪೆಂಡ್‌ ಶಿಕ್ಷೆ.. ಯಾರು ಈ ಕುಲ್ವಿಂದರ್ ಕೌರ್? ಕೋಪಕ್ಕೆ ಕಾರಣವೇನು?

Share :

Published June 6, 2024 at 9:00pm

    ಬಿಜೆಪಿ ಸಂಸದೆ, ಬಾಲಿವುಡ್​​ ನಟಿ ಕಂಗನಾ ರನೌತ್​​ಗೆ​ ಕಪಾಳಮೋಕ್ಷ!

    ಕುಲ್ವಿಂದರ್ ಕೌರ್ ತಕ್ಷಣವೇ ಸೇವೆಯಿಂದ ಅಮಾನತು ಮಾಡಿ ಆದೇಶ

    ಚಂಡೀಗಢ ಏರ್​ಪೋರ್ಟ್​ಗೆ ಕಂಗನಾ ರನೌತ್‌ ಆಗಮಿಸಿದಾಗ ನಡೆದ ಘಟನೆ

ಬಿಜೆಪಿ ಸಂಸದರಾಗಿ ಆಯ್ಕೆಯಾಗಿರುವ ಬಾಲಿವುಡ್ ನಟಿ ಕಂಗನಾ ರಣಾವತ್​​​​ ಮೇಲೆ ಸಿಐಎಸ್​ಎಫ್​ ಸಿಬ್ಬಂದಿ ಕಪಾಳ ಮೋಕ್ಷ ಮಾಡಿದ್ದಾರೆ. ಕುಲ್ವಿಂದರ್ ಕೌರ್ ಎಂಬ ಮಹಿಳಾ ಸಿಬ್ಬಂದಿ ಕಂಗನಾ ಅವರ ಕಪಾಳಕ್ಕೆ ಬಾರಿಸಿದ್ದಾರೆ ಅನ್ನೋ ಘಟನೆ ತೀವ್ರ ಸಂಚಲನ ಸೃಷ್ಟಿ ಮಾಡಿದೆ. ಕೋಪದಲ್ಲಿ ಕಪಾಳಕ್ಕೆ ಬಾರಿಸಿದ ತಪ್ಪಿಗೆ ಕುಲ್ವಿಂದರ್ ಕೌರ್ ಅವರನ್ನು ತಕ್ಷಣವೇ ಸೇವೆಯಿಂದ ಅಮಾನತು ಮಾಡಲಾಗಿದೆ.

ಬಿಜೆಪಿಯ ನೂತನ ಸಂಸದೆ, ಬಾಲಿವುಡ್​​ ನಟಿ ಕಂಗನಾ ರಣಾವತ್​​ಗೆ​ ಕಪಾಳಮೋಕ್ಷ ಮಾಡಲಾಗಿದೆ. ಹಿಮಾಚಲದ ಪ್ರದೇಶದ ಮಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದಿರುವ ಕಂಗನಾ ರಣಾವತ್​​​​ ಚಂಡೀಗಡದಿಂದ ದೆಹಲಿಗೆ ತೆರಳಲು ಹೊರಟಿದ್ದ ವೇಳೆ ಚಂಡೀಗಢದ ಏರ್​​​ಪೋರ್ಟ್​ನಲ್ಲಿದ್ದ ​ಸಿಐಎಸ್‌ಎಫ್​​ನ ಮಹಿಳಾ ಸಿಬ್ಬಂದಿ ಸೇವೆ ಸಲ್ಲಿಸುತ್ತಿರುವಾಗಲೇ ಕಪಾಳಮೋಕ್ಷ ಮಾಡಿದ್ದಾರೆ.

ಕಂಗನಾ ಹೇಳಿಕೆ ವಿರುದ್ಧ ಸಿಟ್ಟಿಗೆದ್ದ CISF ಅಧಿಕಾರಿ ಕೌರ್​​​!
2020ರಲ್ಲಿ ಕೇಂದ್ರ ಸರ್ಕಾರ ಅಂಗೀಕರಿಸಿದ್ದ ಮೂರು ಕೃಷಿ ಕಾಯಿದೆಗಳ ವಿರುದ್ಧ ಪಂಜಾಬ್​​​ ಮತ್ತು ಹರಿಯಾಣ ಭಾಗದ ರೈತರು ದೆಹಲಿಯಲ್ಲಿ ಉಗ್ರ ಹೋರಾಟ ನಡೆಸಿದ್ದರು. ರೈತರಿಗೆ ಮಂಡಿ ಕ್ಷೇತ್ರದಿಂದ ನೂತನ ಸಂಸದರಾಗಿ ಆಯ್ಕೆಯಾಗಿರುವ ಕಂಗನಾ ರಣಾವತ್​​, ಪ್ರತಿಭಟನೆ ಮಾಡುತ್ತಿದ್ದ ರೈತರನ್ನು ಖಲಿಸ್ತಾನಿ ಉಗ್ರರು ಎಂದು ಕರೆದಿದ್ದರು. ಈ ಹೇಳಿಕೆಯಿಂದ ಸಿಟ್ಟಿಗೆದ್ದ CISF ಅಧಿಕಾರಿ ಕುಲ್ವಿಂದರ್​ ಕೌರ್, ಕಂಗನಾ ಅವರು ಚಂಡೀಗಢ ಏರ್​ಪೋರ್ಟ್​ಗೆ ಆಗಮಿಸುತ್ತಿದಂತೆ ರೈತರಿಗೆ ಅವಮಾನ ಮಾಡಿದ್ದರೆಂದು ಕಪಾಳ ಮೋಕ್ಷ ಮಾಡಿದ್ದಾರೆ.

ಇದನ್ನೂ ಓದಿ: ದಿಢೀರ್​ ಆಸ್ಪತ್ರೆಗೆ ದಾಖಲಾದ ಬಿಗ್​ಬಾಸ್​ ಬೆಡಗಿ.. ನಮ್ರತಾ ಗೌಡ ಆರೋಗ್ಯಕ್ಕೆ ಏನಾಯ್ತು? 

ಕಂಗನಾ ರನೌತ್‌ಗೆ ಮಹಿಳಾ ಅಧಿಕಾರಿ ಕಪಾಳಮೋಕ್ಷ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ನೂತನ ಸಂಸದೆಗೆ ಕಪಾಳಮೋಕ್ಷ ಮಾಡಿದ ಸಿಐಎಸ್​​ಎಫ್​ ಸಿಬ್ಬಂದಿ ಕುಲ್ವಿಂದರ್​​ ಕೌರ್ ಅವರನ್ನು ಸ್ಥಳೀಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪಂಜಾಬ್‌ನಲ್ಲಿ ಭಯೋತ್ಪಾದನೆ ಹೆಚ್ಚಾಗುತ್ತಿದೆ ಎಂದ ಕಂಗನಾ!
ಈ ಘಟನೆ ಬಳಿಕ ಏರ್​ಪೋರ್ಟ್​ನಲ್ಲಿ ಅಸಲಿಗೆ ಏನಾಯ್ತು ಎಂದು ಕಂಗನಾ ರನೌತ್‌ ತಮ್ಮ ಎಕ್ಸ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಾನು ಸುರಕ್ಷಿತವಾಗಿದ್ದೇನೆ, ಹಲ್ಲೆ ಮಾಡಿದ ಸಿಬ್ಬಂದಿ ರೈತ ಹೋರಾಟವನ್ನ ಬೆಂಬಲಿಸೋದಾಗಿ ಹೇಳ್ಕೊಂಡಿದ್ದಾರೆ. ಆದ್ರೆ ಪಂಜಾಬ್​​ನಲ್ಲಿ ಭಯೋತ್ಪಾದನೆ ಹೆಚ್ಚಾಗುತ್ತಿದೆ. ಇದನ್ನ ಹೇಗೆ ಸಮರ್ಥಿಸಲು ಸಾಧ್ಯ ಎಂದಿದ್ದಾರೆ.

ನಾನು ಸುರಕ್ಷಿತವಾಗಿದ್ದೇನೆ. ಸೆಕ್ಯೂರಿಟಿ ಚೆಕ್ ಮುಗಿಸಿ ನಾನು ಹೊರಗೆ ಬಂದ ತಕ್ಷಣ, ಎರಡನೇ ಕ್ಯಾಬಿನ್‌ನಲ್ಲಿದ್ದ ಸಿಐಎಸ್‌ಎಫ್ ಭದ್ರತಾ ಸಿಬ್ಬಂದಿ ನನ್ನ ಮುಖಕ್ಕೆ ಹೊಡೆದು ನಿಂದಿಸಲು ಪ್ರಾರಂಭಿಸಿದರು. ಯಾಕೆ ಹೀಗೆ ಮಾಡಿದಿರಿ ಎಂದು ಕೇಳಿದಾಗ, ರೈತ ಪ್ರತಿಭಟನೆಗೆ ಬೆಂಬಲ ನೀಡುತ್ತಿರುವುದಾಗಿ ಹೇಳಿದ್ದರು, ನಾನು ಸುರಕ್ಷಿತವಾಗಿದ್ದೇನೆ ಆದರೆ ಪಂಜಾಬ್‌ನಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ ಮತ್ತು ಉಗ್ರವಾದದ ಬಗ್ಗೆ ನನಗೆ ಕಾಳಜಿ ಇದೆ ಎಂದು ಕಂಗನಾ ಹೇಳಿದ್ದಾರೆ. ಬಿಜೆಪಿ ಸಂಸದೆಗೆ ಸಾರ್ವಜನಿಕ ಸ್ಥಳದಲ್ಲಿ ಸಿಬ್ಬಂದಿಯೊಬ್ಬರು ಕಪಾಳಮೋಕ್ಷ ಮಾಡಿರುವ ಈ ಘಟನೆ ಸಂಚಲನ ಮೂಡಿಸಿದೆ. ತಕ್ಷಣದಿಂದಲೇ ಕುಲ್ವಿಂದರ್ ಕೌರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿರುವ ತೀವ್ರ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: VIDEO: ಏರ್ಪೋರ್ಟ್​​ನಲ್ಲಿ ಮಹಿಳಾ ಅಧಿಕಾರಿಯಿಂದ ನಟಿ ಕಂಗನಾಗೆ ಕಪಾಳ ಮೋಕ್ಷ? 

ಯಾರು ಈ ಕುಲ್ವಿಂದರ್ ಕೌರ್?
35 ವರ್ಷದ ಕುಲ್ವಿಂದರ್ ಕೌರ್ ಅವರು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (CISF)ಕಾನ್‌ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಕುಲ್ವಿಂದರ್ ಕೌರ್ ಅವರು ಪಂಜಾಬ್‌ನ ಸುಲ್ತಾನ್‌ಪುರ್‌ ಲೊಧಿ ಮೂಲದವರು. ಕಳೆದ ಎರಡು ವರ್ಷದ ಹಿಂದಷ್ಟೇ ಚಂಡಿಗಢ ಏರ್‌ಪೋರ್ಟ್‌ ಭದ್ರತಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದರು.

ಕುಲ್ವಿಂದರ್ ಕೌರ್ ಅವರಿಗೆ ಇಬ್ಬರು ಮಕ್ಕಳಿದ್ದು, ಅವರ ಪತಿ ಕೂಡ CISF ಸಿಬ್ಬಂದಿಯಾಗಿದ್ದಾರೆ. ಕುಲ್ವಿಂದರ್ ಕೌರ್ ಅವರ ಸಹೋದರ ಶೇರ್ ಸಿಂಗ್ ರೈತ ಪರ ಹೋರಾಟಗಾರರು. ಕಿಸಾನ್ ಮಂಜ್ದೂರ್ ಸಂಘರ್ಷ ಕಮಿಟಿಯ ಕಾರ್ಯದರ್ಶಿಯಾಗಿದ್ದರು.

ಕಂಗಾನ ವಿವಾದಾತ್ಮಕ ಹೇಳಿಕೆ ಏನು?
2020ರಲ್ಲಿ ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರುದ್ಧ ಪಂಜಾಬ್ ರೈತರು ಪ್ರತಿಭಟನೆ ನಡೆಸುತ್ತಿದ್ದಾಗ ಕಂಗನಾ ರನೌತ್ ಒಂದು ಹೇಳಿಕೆ ನೀಡಿದ್ದಾರು. ದೆಹಲಿಯ ಗಡಿಯಲ್ಲಿ ಕುಳಿತು ಪ್ರತಿಭಟನೆ ಮಾಡುತ್ತಿರುವ ರೈತ ಮಹಿಳೆಯರಿಗೆ 100 ರೂಪಾಯಿ ಹಣ ನೀಡಲಾಗಿದೆ. 100 ಹಣಕ್ಕಾಗಿ ಮಹಿಳೆಯರು ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ರೈತ ಹೋರಾಟದ ವೇಳೆ ಕಂಗನಾ ಹೇಳಿದ್ದ ರೈತ ವಿರೋಧಿ ಹೇಳಿಕೆಯಿಂದ ಸಿಟ್ಟಿಗೆದ್ದು ಕುಲ್ವಿಂದರ್ ಕೌರ್ ಕಪಾಳ ಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಂಗನಾ ಕಪಾಳಕ್ಕೆ ಬಾರಿಸಿದ ಸಿಬ್ಬಂದಿಗೆ ಸಸ್ಪೆಂಡ್‌ ಶಿಕ್ಷೆ.. ಯಾರು ಈ ಕುಲ್ವಿಂದರ್ ಕೌರ್? ಕೋಪಕ್ಕೆ ಕಾರಣವೇನು?

https://newsfirstlive.com/wp-content/uploads/2024/06/kangana.jpg

Load More