/newsfirstlive-kannada/media/post_attachments/wp-content/uploads/2024/10/Annu-Kapoor-On-priyanka-Chopra.jpg)
ನಟ ಅನ್ನು ಕಪೂರ್ ಅವರ ಒಂದು ಹೇಳಿಕೆ ಈಗ ದೊಡ್ಡ ವಿವಾದವನ್ನು ಸೃಷ್ಟಿಸಿದೆ. ವಿಶಾಲ್ ಭಾರದ್ವಾಜ್ ಸಿನಿಮಾ ಸಾತ್ ಕೂನ್ ಮಾಫ್ನಲ್ಲಿ ಪ್ರಿಯಾಂಕ ಚೊಪ್ರಾ ಜೊತೆ ನಟಿಸಿದ್ದ ನಟ, ತೆರೆಯ ಹಿಂದಿನ ಸತ್ಯವೊಂದನ್ನು ಬಿಚ್ಚಿಟ್ಟಿದ್ದಾರೆ. ನನ್ನ ಜೊತೆ ನಟನೆ ಮಾಡುವಾಗ ಪ್ರಿಯಾಂಕಾ ಚೊಪ್ರಾ ತುಂಬಾ ಇರಿಸುಮುರಿಸಿಗೊಳಗಾದವರಂತೆ ಇರುತ್ತಿದ್ದರು. ನನಗೆ ಕಿಸ್ ಮಾಡಲು ಹಿಂದೇಟು ಹಾಕುತ್ತಿದ್ದರು. ಕಾರಣ ನಾನು ಹೀರೋ ರೀತಿಯಲ್ಲಿ ಕಾಣುತ್ತಿರಲಿಲ್ಲ ಎಂಬ ವಾದವನ್ನು ಅವರು ಮುಂದಿಡುತ್ತಿದ್ದರು. ನನ್ನ ಜೊತೆ ಶೃಂಗಾರದ ಸೀನ್ಗಳಲ್ಲಿ ನಟಿಸುವಾಗ ಅವರಿಗೆ ತುಂಬಾ ಇರಿಸುಮುರಿಸಾಗುತ್ತಿತ್ತು. ಒಂದು ವೇಳೆ ನಾನು ಹೀರೋ ಫೇಸ್ ಆಗಿದ್ರೆ ನನಗೆ ಯಾವುದೇ ಹಿಂಜರಿಕೆ ಇರಲಿಲ್ಲ ಎಂದು ಅವರು ನಿರ್ದೇಶಕರಿಗೆ ಹೇಳಿದ್ದೂ ಇದೆ ಎಂದು ಅನ್ನು ಕಪೂರ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಇದನ್ನೂ ಓದಿ:ಸಲ್ಮಾನ್ ಖಾನ್‌ಗೆ ₹5 ಕೋಟಿ ಡಿಮ್ಯಾಂಡ್ ಮಾಡಿದ್ದು ತರಕಾರಿ ವ್ಯಾಪಾರಿ; ಜೀವ ಬೆದರಿಕೆ ಕೇಸ್‌ಗೆ ಹೊಸ ಟ್ವಿಸ್ಟ್!
ಪ್ರಿಯಾಂಕಾ ಈಗೀನ ಕಾಲದ ಹುಡುಗಿ. ನನಗೆ ಆಕೆಯೊಂದಿಗೆ ಶೃಂಗಾರದ ಸೀನ್ಗಳಲ್ಲಿ ನಟನೆ ಮಾಡಲು ಯಾವುದೇ ಅಭ್ಯಂತರವಿರಲಿಲ್ಲ. ಆದ್ರೆ ವಿಶಾಲ್ ಭಾರದ್ವಾಜ, ಪ್ರಿಯಾಂಕಾ ನನ್ನೊಂದಿಗೆ ಸರಸದ ಸೀನ್ಗಳನ್ನು ಮಾಡಲು ನಾಚಿಕೊಳ್ಳುತ್ತಿದ್ದಾಳೆ ಎಂದು ನನಗೆ ಹೇಳಿದ್ರು. ಅದಕ್ಕೆ ನಾನು ಅವರಿಗೆ ಹಿಂಜರಿಕೆ ಇದ್ದಲ್ಲಿ ಆ ಸೀನ್ನ್ನು ಕಟ್ ಮಾಡಿ ಬಿಡು ಎಂದು ಸಲಹೆ ನೀಡಿದ್ದೆ.
ಇದನ್ನೂ ಓದಿ:ಅಪ್ಪು ಬರ್ತ್‌ಡೇಗೆ ನಿರೂಪಕಿ ಅನುಶ್ರೀ ಮದುವೆ ಆಗೋದು ನಿಜಾನಾ? ಶುಭಾಶಯಗಳ ಸುರಿಮಳೆ!
ಆದ್ರೆ ಭಾರದ್ವಾಜ್ ಅದಕ್ಕೆ ಒಪ್ಪಲಿಲ್ಲ, ನಾನ್ಯಾಕೆ ಆ ಸೀನ್ ಬಿಟ್ಟು ಬಿಡಲಿ. ಅದು ಕಥೆಗೆ ತುಂಬಾ ಮುಖ್ಯವಾದ ಸನ್ನಿವೇಶ, ನಾನು ನನ್ನ ಕೆಲಸವನ್ನು ತುಂಬಾ ಗಂಭೀರವಾಗಿ ಪರಿಗಣಿಸಿದವನು. ಜೋಕ್ಗಳನ್ನೆಲ್ಲಾ ನಾನು ಒಪ್ಪುವುದಿಲ್ಲ ಎಂದು ಭಾರದ್ವಾಜ್ ನನಗೆ ಹೇಳಿದ್ರು ಎಂದು ಪನ್ನು ಕಪೂರ್ ಹೇಳಿದ್ದಾರೆ.
ಇನ್ನು ಇದೇ ವಿಚಾರವಾಗಿ ಪ್ರಿಯಾಂಕಾ ಚೋಪ್ರಾ 2011ರಲ್ಲಿ ರಾಷ್ಟ್ರೀಯ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದರು. ಈ ಒಂದು ವಿಷಯದಲ್ಲಿ ಅನ್ನು ಕಪೂರ್ ಹೇಳಿಕೆ ನನಗೆ ತುಂಬಾ ಇರಿಸುಮುರಿಸು ತಂದಿದೆ. ಒಂದು ವೇಳೆ ಅವರಿಗೆ ಶೃಂಗಾರದ ಸನ್ನಿವೇಶಗಳಲ್ಲಿ ಅಭಿನಯಿಸಲೇಬೇಕಾಗಿದ್ದಲ್ಲಿ ಮತ್ತು ಅದರ ಬಗ್ಗೆ ಮಾತನಾಡಬೇಕಾದಲ್ಲಿ ಅವರು ಆ ರೀತಿಯ ಸಿನಿಮಾಗಳನ್ನು ಮಾಡಲಿ. ಅವರು ಮಾಧ್ಯಮಗಳ ಮುಂದೆ ಹೇಳುತ್ತಿರುವಂತ ದೃಶ್ಯಗಳು ನಮ್ಮ ಸಿನಿಮಾದ ಭಾಗವೇ ಆಗಿರಲಿಲ್ಲ. ಹೀಗಾಗಿ ಅವರ ಈ ರೀತಿಯ ಹೇಳಿಕೆಗಳು ನನಗೆ ನೋವು ತರುತ್ತವೆ ಎಂಬುದನ್ನು ಅವರು ಅರಿಯಲೇ ಇಲ್ಲ. ನಿಜವಾಗಿಯೂ ಅನ್ನು ಕಪೂರ್ ಹೇಳಿಕೆ ನನಗೆ ತೀವ್ರವಾಗಿ ನೋವನ್ನು ತಂದಿವೆ ಎಂದು ಹೇಳಿದ್ದರು.
2011ರಲ್ಲಿ ಬಿಡುಗಡೆಯಾಗಿದ್ದ ಸಾತ್ ಕೂನ್ ಮಾಫ್ ಸಿನಿಮಾದಲ್ಲಿ ಒಂದು ಶೃಂಗಾರದ ದೃಶ್ಯವಿತ್ತು ಅದರಲ್ಲಿ ನನ್ನೊಂದಿಗೆ ನಟಿಸಲು ಪ್ರಿಯಾಂಕಾ ಒಪ್ಪಲಿಲ್ಲ ಎಂದು ಅನ್ನು ಹೇಳಿದ್ರೆ. ಆ ಸಿನಿಮಾದಲ್ಲಿ ಅಂತಹದೊಂದು ದೃಶ್ಯವೇ ಇರಲಿಲ್ಲ ಎಂದು ಪ್ರಿಯಾಂಕಾ ವಾದಿಸುತ್ತಾರೆ. ಅಸಲಿಗೆ ಅಲ್ಲಿ ನಡೆದಿದ್ದು ಏನು ಎಂಬುದು ಇನ್ನೂ ಕೂಡ ಗುಟ್ಟಾಗಿಯೇ ಉಳಿದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ