ದೆಹಲಿಯ ಗಾಂಧಿ ಕುಟುಂಬಕ್ಕೆ ಪುನರ್ಜನ್ಮ ನೀಡಿದ್ದ ಕರ್ನಾಟಕ
ಇಂದಿರಾ ಗಾಂಧಿಯನ್ನು ಪ್ರಿಯಾಂಕಾರಲ್ಲಿ ಕಾಣುವ ನಾಯಕರು.!
ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದರೆ ಕರ್ನಾಟಕ ಹೊಸ ಇತಿಹಾಸ
ಪ್ರಿಯಾಂಕಾ ಗಾಂಧಿ, ಚುನಾವಣಾ ರಾಜಕೀಯಕ್ಕೆ ಇನ್ನೂ ಧುಮುಕದ ಕಾಂಗ್ರೆಸ್ ನಾಯಕಿ. ಚುನಾವಣಾ ರಾಜಕೀಯದಲ್ಲಿ ಅದೃಷ್ಟದ ಪರೀಕ್ಷೆಗಿಳಿಯದ ಗಾಂಧಿ ಕುಟುಂಬದ ಸದಸ್ಯೆ. ಇದೀಗ ಪ್ರಿಯಾಂಕಾ ‘ಲೋಕ’ ಸಮರದ ಅಖಾಡಕ್ಕೆ ಇಳಿಯಲಿದ್ದಾರೆ ಎಂಬ ಸುದ್ದಿ ಸದ್ದು ಮಾಡ್ತಿದೆ. ಗಾಂಧಿ ಕುಟುಂಬಕ್ಕೆ ಪುನರ್ಜನ್ಮ ನೀಡಿದ್ದ ಕರುನಾಡಿನಿಂದಲೇ ಕಣಕ್ಕಿಳಿತಾರೆ ಎಂಬ ಚರ್ಚೆ ಶುರುವಾಗಿದೆ.
ಇಂದಿರಾ ಗಾಂಧಿಯ ತೇಜಸ್ಸು.. ರಾಜೀವ್ ಗಾಂಧಿಯ ವರ್ಚಸ್ಸು ಹೊಂದಿರೋ ನಾಯಕಿ ಪ್ರಿಯಾಂಕಾ ಗಾಂಧಿ. ಕಾಂಗ್ರೆಸ್ ನಾಯಕರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯನ್ನ ಪ್ರಿಯಾಂಕಾರಲ್ಲಿ ಕಾಣ್ತಿದ್ದಾರೆ.. ಆದ್ರೆ, ಇದುವರೆಗೂ ಪ್ರಿಯಾಂಕಾರ ವರ್ಚಸ್ಸಿನ ಪರೀಕ್ಷೆಯಾಗಿಲ್ಲ. ಆದ್ರೀಗ ಮೊದಲ ಬಾರಿಗೆ ಚುನಾವಣಾ ಸಮರಕ್ಕೆ ಧುಮುಕ್ತಿದ್ದಾರೆ ಎಂಬ ಮಾತು ಮಾರ್ಧನಿಸುತ್ತಿದೆ.
‘ರೆಡ್ ಕಾರ್ಪೆಟ್’ ಹಾಕಿ ಸ್ವಾಗತಿಸಲು ‘ಕೈ’ ನಾಯಕರು ಸಜ್ಜು!
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಸ್ಪರ್ಧಿಸುವ ಬಗ್ಗೆ ವದಂತಿ ಹರಡಿದೆ. ಕಾಂಗ್ರೆಸ್ ಅಧಿಕಾರದಲ್ಲಿರುವ ಕರ್ನಾಟಕದ ಕೊಪ್ಪಳ ಅಥವಾ ತೆಲಂಗಾಣದ ಯಾವುದಾದ್ರೂ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಬಹುದು ಎಂಬ ಸುದ್ದಿ ಹಬ್ಬಿದೆ.. ಸ್ಥಳೀಯ ಕಾಂಗ್ರೆಸ್ ಘಟಕಕ್ಕೆ ತಿಳಿಸದೆ ಎಐಸಿಸಿ, ಈಗಾಗಲೇ ಕೊಪ್ಪಳ ಕ್ಷೇತ್ರದಲ್ಲಿ ಸಮೀಕ್ಷೆಗಳನ್ನ ನಡೆಸಿದೆ ಎಂಬ ಮಾಹಿತಿ ಸಿಕ್ಕಿದೆ.
ಆದ್ರೆ, ಕಾಂಗ್ರೆಸ್‌ನ ಯಾವೊಬ್ಬ ಹಿರಿಯ ನಾಯಕರೂ ಇದನ್ನು ಖಚಿತಪಡಿಸಿಲ್ಲ. ಈ ಬಗ್ಗೆ ಮಾತ್ನಾಡಿದ ಶಾಸಕ ರಾಘವೇಂದ್ರ ಹಿಟ್ನಾಳ್, ಪ್ರಿಯಾಂಕಾ ಗಾಂಧಿ ಕೊಪ್ಪಳ ಕ್ಷೇತ್ರಕ್ಕೆ ಬಂದ್ರೆ ರೆಡ್ಕಾರ್ಪೆಟ್ ಹಾಕಿ ಸ್ವಾಗತ ಕೋರುತ್ತೇವೆ ಎಂದಿದ್ದಾರೆ. ಜೊತೆಗೆ ಎಐಸಿಸಿ ನಾಯಕರು ನಡೆಸಿರುವ ಸರ್ವೆಯ ಬಗ್ಗೆ ನಮಗೆ ಮಾಹಿತಿ ಇಲ್ಲ ಅಂತ ಸ್ಪಷ್ಟನೆ ನೀಡಿದ್ದಾರೆ.
ಇನ್ನೂ ಸ್ವಾಮಿ ಕಾರ್ಯದ ಜೊತೆ ಸ್ವಕಾರ್ಯ ಎನ್ನುವಂತೆ ಪ್ರಿಯಾಂಕಾ ಗಾಂಧಿ ಸ್ಪರ್ಧೆ ಬಗ್ಗೆ ಮಾತ್ನಾಡಿದ ಶಾಸಕ ರಾಘವೇಂದ್ರ ಹಿಟ್ನಾಳ್, ನನ್ನ ಸಹೋದರ ರಾಜಶೇಖರ್ ಹಿಟ್ನಾಳ್ ಕೂಡ ಕೊಪ್ಪಳ ಟಿಕೆಟ್ ಆಕಾಂಕ್ಷಿ ಎಂದಿದ್ದಾರೆ. ಆದ್ರೆ, ಪ್ರಿಯಾಂಕಾ ಸ್ಪರ್ಧೆ ಬಗೆಗಿನ ಊಹಾ ಪೋಹಾಗಳಿಗೆ ಉತ್ತರ ಕೊಡಲ್ಲ ಅಂತ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಪ್ರಿಯಾಂಕಾ ಗಾಂಧಿ ಗೆಲುವಿಗೆ ಕೊಪ್ಪಳ ಸುರಕ್ಷಿತ ಕ್ಷೇತ್ರವೇ?
ಕೊಪ್ಪಳದಲ್ಲಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸೋದೇ ಆದ್ರೆ ಇದು ಅವರ ಗೆಲುವಿಗೆ ಪೂರಕ ಆಗುವ ಸಾಧ್ಯತೆ ಇದೆ.. ಯಾಕಂದ್ರೆ ಕೊಪ್ಪಳದ ಹಾಲಿ ಲೋಕಸಭಾ ಸದಸ್ಯ ಕರಡಿ ಸಂಗಣ್ಣ ಬಿಜೆಪಿ ಪಕ್ಷದಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಜೊತೆಗೆ ಕೇಂದ್ರದ ಸರ್ಕಾರದ ವಿರುದ್ಧ ಈ ಭಾಗದಲ್ಲಿ ಆಡಳಿತ ವಿರೋಧಿ ಅಲೆ ಇದೆ.. ಜೊತೆಗೆ ಕೈ ಗ್ಯಾರಂಟಿಗಳ ಪ್ರಭಾವ ವರ್ಕೌಟ್ ಆಗಿದೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಕೈಗೆ ಹೆಚ್ಚು ಲಾಭ ಅಂತ ಕಾಂಗ್ರೆಸ್ಸಿಗರು ನಂಬಿದ್ದಾರೆ.
ಲೋಕಸಭೆ ಎಲೆಕ್ಷನ್ ಹತ್ತಿರವಾಗ್ತಿದ್ದು, ದಕ್ಷಿಣ ಭಾರತದಿಂದ ಪ್ರಿಯಾಂಕಾ ಸ್ಪರ್ಧಿಸ್ತಾರಾ ಅನ್ನೋ ಚರ್ಚೆ ಶುರುವಾಗಿದೆ. ಈ ಹಿಂದೆ ಗಾಂಧಿ ಕುಟುಂಬಕ್ಕೆ ಪುನರ್ಜನ್ಮ ನೀಡಿದ್ದ ಕರ್ನಾಟಕ, ಪ್ರಿಯಾಂಕಾ ಸ್ಪರ್ಧಿಸಿದಲ್ಲಿ ಹೊಸ ಇತಿಹಾಸ ಬರೆದಂತಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ