Advertisment

ಬಳ್ಳಾರಿ ಜೈಲಿನಲ್ಲಿ ದರ್ಶನ್​ಗೆ ಸಮಸ್ಯೆ; ರಾತ್ರಿ ನಡೆದ ಕೆಟ್ಟ ಅನುಭವದ ವಿರುದ್ಧ ಅಧಿಕಾರಿಗಳಿಗೆ ದೂರು

author-image
Ganesh
Updated On
ಬಳ್ಳಾರಿಯಲ್ಲಿದ್ರೂ ಬಿಡದ ಪವಿತ್ರಾ ಗೌಡ.. ಕೊಲೆ ಕೇಸ್‌ಗೆ ಅತಿ ದೊಡ್ಡ ಟ್ವಿಸ್ಟ್; ದರ್ಶನ್‌ಗೆ ಹೊಸ ಟೆನ್ಷನ್‌; ಏನಾಯ್ತು?
Advertisment
  • ಸೀನನೂ ಇಲ್ಲ, ನಾಗನೂ ಇಲ್ಲ.. ಜೈಲಲ್ಲಿ ದರ್ಶನ್ ಏಕಾಂಗಿ
  • ನಿದ್ದೆ ಬಂದರೂ ನೆಮ್ಮದಿಯಿಂದ ನಿದ್ರೆ ಮಾಡದ ಸ್ಥಿತಿ ಎದುರಾಗಿತ್ತು
  • ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯದ ತಪ್ಪಿಗೆ ಬಳ್ಳಾರಿ ಜೈಲಿಗೆ ಶಿಫ್ಟ್

ಬಳ್ಳಾರಿ: ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯದ ತಪ್ಪಿಗೆ ಕೊಲೆ ಆರೋಪಿ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದಾರೆ. ಒಲ್ಲದ ಮನಸ್ಸಿನಿಂದಲೇ ಎರಡು ರಾತ್ರಿ ಕಳೆದಿರುವ ದರ್ಶನ್​​ಗೆ ಇದೀಗ ಸಮಸ್ಯೆಯೊಂದು ಎದುರಾಗಿದೆ.

Advertisment

ಬಳ್ಳಾರಿ ಸೆಂಟ್ರಲ್ ಜೈಲಿನ 6*12 ಹೈಸೆಕ್ಯೂರಿಟಿ ಸೆಲ್​ನ 15ನೇ ಕೋಣೆಯಲ್ಲಿ ದರ್ಶನ್ ಇದ್ದಾರೆ. ಎರಡು ರಾತ್ರಿ ಬಳ್ಳಾರಿ ಜೈಲಿನಲ್ಲಿ ಕಳೆದಿರುವ ದರ್ಶನ್​​ ಸೊಳ್ಳೆಗಳ ಕಾಟಕ್ಕೆ ಹೈರಾಣಾಗಿದ್ದಾರೆ. ಸೊಳ್ಳೆಗಳಿಂದಾಗಿ ನಿದ್ರೆ ಬಂದರೂ ನೆಮ್ಮದಿಯಾಗಿ ಮಲಗದ ಸ್ಥಿತಿ ನಿರ್ಮಾಣವಾಗಿತ್ತು. ಸೊಳ್ಳೆಗಳ ಕಾಟದಿಂದ ದರ್ಶನ್ ಕಂಗೆಟ್ಟಿದ್ದಾರೆ.

ಹೀಗಾಗಿ ಕೋಣೆಗೆ ಸೊಳ್ಳೆ ಬಾರದ ವ್ಯವಸ್ಥೆ ಮಾಡುವಂತೆ ಜೈಲು ಸಿಬ್ಬಂದಿಗೆ ದರ್ಶನ್ ಮನವಿ ಮಾಡಿಕೊಂಡಿದ್ದಾರೆ. ಇಂದು ಬೆಳಗ್ಗೆ ಜೈಲು ಸಿಬ್ಬಂದಿ ಕೊಟ್ಟ ವಾಂಗಿಬಾತ್ ಸೇವಿಸಿದ್ದಾರೆ. ಜೈಲಿನ ಮೆನು ಪ್ರಕಾರ ಕೊಟ್ಟ 460 ಗ್ರಾಂ ವಾಂಗಿಬಾತ್ ನೀಡಲಾಗಿದೆ. ಪರಪ್ಪನ ಅಗ್ರಹಾರದಲ್ಲಿ ತನ್ನ ಗ್ಯಾಂಗ್ ಜೊತೆ ಕಳೆಯುತ್ತಿದ್ದ ದರ್ಶನ್, ಇಲ್ಲಿ ಏಕಾಂಗಿಯಾಗಿದ್ದಾರೆ.

ಇದನ್ನೂ ಓದಿ:ಟೈಂ ಎಲ್ಲದ್ಕೂ ಉತ್ತರ ಕೊಡುತ್ತೆ, ದರ್ಶನ್ ಫ್ಯಾನ್ಸ್​ಗೆ ಧನ್ಯವಾದ ಹೇಳ್ತೀನಿ -ವಿನೋದ್ ಪ್ರಭಾಕರ್ ಅಚ್ಚರಿ ಹೇಳಿಕೆ

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment