newsfirstkannada.com

ಒಂದು ತಿಂಗಳಿಂದ ನಿರ್ಮಾಪಕ ಸೌಂದರ್ಯ ಜಗದೀಶ್‌ ಬದಲಾಗಿದ್ರು.. ಆತ್ಮಹತ್ಯೆಗೆ ಕಾರಣವಾಗಿದ್ದು ಆ 2 ಘಟನೆ!

Share :

Published April 14, 2024 at 5:31pm

Update April 14, 2024 at 5:34pm

  ಒಂದು ತಿಂಗಳಿನಿಂದ ಸೌಂದರ್ಯ ಜಗದೀಶ್ ಒಂಟಿಯಾಗಿ ಮನೆಯಲ್ಲಿ ವಾಸ!

  ವೈದ್ಯರು ನೀಡಿದ್ದ ಡಿಪ್ರೆಷನ್​ಗೆ ಔಷಧಿಯನ್ನು ಸೇವಿಸುತ್ತಿದ್ದ ಸೌಂದರ್ಯ ಜಗದೀಶ್

  ಬಟ್ಟೆ ಒಣಹಾಕುವ ರಾಡ್​ಗೆ ನೇಣು ಬಿಗಿದುಕೊಂಡು ಜಗದೀಶ್ ಆತ್ಮಹತ್ಯೆಗೆ ಶರಣು

ಬೆಂಗಳೂರು: ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರು ಮಹಾಲಕ್ಷ್ಮಿ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ. ನಿರ್ಮಾಪಕ ಸೌಂದರ್ಯ ಜಗದೀಶ್ ಅವರು ಆರ್ಥಿಕ ಸಂಕಷ್ಟದಿಂದ ಖಿನ್ನತೆಯಿಂದ ಬಳಲುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: 2 ವರ್ಷದ ಬಳಿಕ ಮತ್ತೆ ‘ಕೆಜಿಎಫ್​ ಚಾಪ್ಟರ್​ 2’ ಹವಾ.. ರಾಕಿ ಫ್ಯಾನ್ಸ್‌ ಸೆಲೆಬ್ರೇಷನ್ ಹೇಗಿದೆ ಗೊತ್ತಾ?

ನಿರ್ಮಾಪಕ ಸೌಂದರ್ಯ ಜಗದೀಶ್ ಅವರು ಸಾಲಗಳು ಹೆಚ್ಚಾಗಿ ಮಾಡಿಕೊಂಡಿದ್ದರಂತೆ. ಹಲವು ತಿಂಗಳಿನಿಂದ ಸಾಲ ಮರು ಪಾವತಿ ಮಾಡಲಾಗಿದೆ ನೊಂದಿದ್ದರಂತೆ. ಕಳೆದ ಒಂದು ತಿಂಗಳ ಹಿಂದೆ ಸೌಂದರ್ಯ ಜಗದೀಶ್ ಅವರ ಅತ್ತೆ ವಯೋಸಹಜವಾಗಿ ಸಾವನ್ನಪ್ಪಿದರು. ಈ ಹಿನ್ನೆಲೆ ಮಾನಸಿಕವಾಗಿ ಕುಗ್ಗಿದ್ದರಂತೆ. ಹೀಗಾಗಿ ಜಗದೀಶ್​ ಅವರ ಕುಟುಂಬಸ್ಥರು ಮಾನಸಿಕ ವೈದ್ಯರ ಬಳಿ ಕೌಸ್ಸಿಲಿಂಗ್ ಮಾಡಿಸಿದ್ದರಂತೆ. ವೈದ್ಯರು ನೀಡಿದ್ದ ಡಿಪ್ರೆಷನ್​ಗೆ ಔಷಧಿಯನ್ನು ಸೌಂದರ್ಯ ಜಗದೀಶ್ ಸೇವಿಸುತ್ತಿದ್ದರಂತೆ. ಕಳೆದ ಒಂದು ತಿಂಗಳಿನಿಂದ ಸೌಂದರ್ಯ ಜಗದೀಶ್ ಒಂಟಿಯಾಗಿ ಮನೆಯಲ್ಲಿ ಇರುತ್ತಿದ್ದರಂತೆ. ಇಂದು ಬೆಳಗಿಜಾವ ಮನೆಯ ಹಿಂಭಾಗದಲ್ಲಿ ಬಟ್ಟೆ ಒಣಹಾಕುವ ರಾಡ್​ಗೆ ನೇಣು ಬಿಗಿದುಕೊಂಡು ಜಗದೀಶ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇಂದು ಬೆಳಗ್ಗೆ 9:30 ಗಂಟೆ ಮನೆಯವರು ಮನೆಯ ಹಿಂಭಾಗಕ್ಕೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಕುಟುಂಬಸ್ಥರು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಆಸ್ಪತ್ರೆಗೆ ಸಾಗಿಸುವ ಮುಂಚೆಯೇ ಜಗದೀಶ್ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಬಳಿಕ ರಾಮಯ್ಯ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಸದ್ಯ ಮರಣೋತ್ತರ ಪರೀಕ್ಷೆ ಮುಗಿಸಿಕೊಂಡು ಮೃತ ದೇಹವನ್ನು ಆಸ್ಪತ್ರೆಯಿಂದ ಮನೆಗೆ ರವಾನಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂದು ತಿಂಗಳಿಂದ ನಿರ್ಮಾಪಕ ಸೌಂದರ್ಯ ಜಗದೀಶ್‌ ಬದಲಾಗಿದ್ರು.. ಆತ್ಮಹತ್ಯೆಗೆ ಕಾರಣವಾಗಿದ್ದು ಆ 2 ಘಟನೆ!

https://newsfirstlive.com/wp-content/uploads/2024/04/jagadish-1.jpg

Load More