/newsfirstlive-kannada/media/post_attachments/wp-content/uploads/2024/05/Baby-Death-Heart-Attack.jpg)
ಮಾನವರಲ್ಲಿ ಹೆಚ್ಚುತ್ತಿರುವ ಅಧಿಕ ತೂಕ, ಸ್ಥೂಲಕಾಯತೆ, ಮಧುಮೇಹ ಹಾಗೂ ಕ್ಯಾನ್ಸರ್‌ಗಳಂತ ಸಾಂಕ್ರಾಮಿಕವಲ್ಲದ ಕಾಯಿಲೆಗಳನ್ನು ಎದುರಿಸಲು ಎಲ್ಲಾ ರಾಷ್ಟ್ರಗಳು ಮುಂದಾಗಬೇಕು. ಆರೋಗ್ಯಕರ ಆಹಾರ ಮತ್ತು ದೈಹಿಕ ಚಟುವಟಿಕೆಗಳನ್ನು ಉತ್ತೇಜಿಸುವ ಪಾಲಿಸಿಗಳನ್ನು ಬಲಪಡಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಹೆಚ್​ಒ) ಎಲ್ಲಾ ದೇಶಗಳಿಗೆ ಕರೆ ನೀಡಿದೆ.
/newsfirstlive-kannada/media/post_attachments/wp-content/uploads/2024/09/FAT_MEN.jpg)
ಆಗ್ನೇಯ ಏಷ್ಯಾದಲ್ಲಿ ಇತ್ತೀಚೆಗೆ ಮಕ್ಕಳು ವಯಸ್ಸಿಗೂ ಮೀರಿ ದಪ್ಪವಾಗುತ್ತಿದ್ದಾರೆ. ಇದರಿಂದ ಅವರಲ್ಲಿ ಚಯಾಪಚಯ ಸಮಸ್ಯೆ ಕಾಡುತ್ತಿವೆ. ವಯಸ್ಕರಲ್ಲಿಯೂ ಇದು ಸಾಮಾನ್ಯವಾಗಿದ್ದು ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಇವುಗಳಿಂದ ದೇಹದಲ್ಲಿ ಹೃದಯದ ರಕ್ತನಾಳಗಳಿಗೆ ಸಂಬಂಧಿಸಿದ ಸಮಸ್ಯೆ, ಮಧುಮೇಹ, ಕ್ಯಾನ್ಸರ್​ನಂತಹ ಸಾಂಕ್ರಾಮಿಕವಲ್ಲದ ಕಾಯಿಲೆ ಪ್ರಕರಣಗಳು ಹೆಚ್ಚುತ್ತಿವೆ. ಮಾನವರು ಸಾವನ್ನಪ್ಪಿದ್ದರೆ ಅದರಲ್ಲಿ ಮೂರನೇ ಎರಡರಷ್ಟು ಈ ಕಾಯಿಲೆಗಳೇ ಕಾರಣವಾಗಿವೆ ಎಂದು ಡಬ್ಲುಹೆಚ್​ಒ ಆಗ್ನೇಯ ಏಷ್ಯಾದ ಪ್ರಾದೇಶಿಕ ನಿರ್ದೇಶಕರಾದ ಸೈಮಾ ವಾಝೆದ್ ತಿಳಿಸಿದ್ದಾರೆ.
ಇದನ್ನೂ ಓದಿ:ನಿಮ್ಮ ದೈನಂದಿನ ಜೀವನ ಹೇಗಿದೆ? ಈ ಹವ್ಯಾಸ ಮೆದುಳಿನ ಮೇಲೆ ಕೆಟ್ಟ ಪರಿಣಾಮ ಬೀರಬಹುದು!
/newsfirstlive-kannada/media/post_attachments/wp-content/uploads/2024/09/FAT_MEN_1.jpg)
ಕೇವಲ 5 ವರ್ಷದ ಒಳಗಿನ ಸುಮಾರು 50 ಲಕ್ಷ ಮಕ್ಕಳು ಅಧಿಕ ತೂಕ ಹೊಂದಿರುವುದು ಆಘಾತಕಾರಿ ಸಂಗತಿಯಾಗಿದೆ. ಇತ್ತೀಚೆಗೆ ಕ್ಷಿಪ್ರ ನಗರೀಕರಣ ಜೊತೆಗೆ ಜನಸಂಖ್ಯೆ ಹೆಚ್ಚುತ್ತಿದೆ. ಫಾಸ್ಟ್​ಫುಡ್​ನಂತ ಅನಾರೋಗ್ಯಕರ ಆಹಾರಗಳು ತಿಂದು ದೈಹಿಕ ಚಟುವಟಿಕೆ ಕಡೆ ಗಮನ ಹರಿಸದಿರುವುದು. ಈ ಎಲ್ಲ ಕಾರಣಗಳಿಂದ ಮಕ್ಕಳು ಹಾಗೂ ವಯಸ್ಕರು ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಇದರಿಂದ 2030ರ ವೇಳೆಗೆ ದೊಡ್ಡ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಇವುಗಳನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ಎಲ್ಲ ದೇಶಗಳು ತೆಗೆದುಕೊಂಡರೇ 2030ರ ವೇಳೆಗೆ ಇದರಲ್ಲಿ ಯಶಸ್ಸನ್ನು ಗಳಿಸಬಹುದು. ಈ ಕಾಯಿಲೆಗಳಿಂದ ಸಾವನ್ನಪ್ಪುವವರನ್ನು 3ನೇ ಒಂದರಷ್ಟು ಕಡಿಮೆ ಮಾಡಬಹುದು. ಇದಕ್ಕೆ ಆರೋಗ್ಯಕರ ಆಹಾರ ಹಾಗೂ ದೈಹಿಕ ಚಟುವಟಿಕೆಗಳನ್ನು ಕೈಗೊಳ್ಳಬೇಕು. ದೈಹಿಕ ಚಟುವಟಿಕೆಗಳಿಗೆ ಬೇಕಾದ ಪೂರಕ ಪರಿಸರವನ್ನು ನಿರ್ಮಾಣ ಮಾಡಬೇಕಿದೆ ಎಂದು ಅವರು ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us