/newsfirstlive-kannada/media/post_attachments/wp-content/uploads/2024/10/EXAMS_PSI_1.jpg)
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದಿಂದ ಇಂದು ಪೊಲೀಸ್ ಸಬ್ ಇನ್​​ಸ್ಪೆಕ್ಟರ್​ (ಪಿಎಸ್​ಐ) ಹುದ್ದೆಗಳ ನೇಮಕಾತಿ ಪರೀಕ್ಷೆ ನಡೆಯಲಿದೆ. ಒಟ್ಟು ಹುದ್ದೆಗಳು 402 ಇದ್ದು 66,990 ಅಭ್ಯರ್ಥಿಗಳು 163 ಕೇಂದ್ರಗಳಲ್ಲಿ ಪರೀಕ್ಷೆಯನ್ನು ಬರೆಯಲಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರೀಕ್ಷಾ ಅಕ್ರಮಗಳಿಗೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದೆ. ಹೀಗಾಗಿ ಅಭ್ಯರ್ಥಿಗಳು ಪ್ರವೇಶ ಪತ್ರದಲ್ಲಿರುವ ಎಲ್ಲ ಸೂಚನೆಗಳನ್ನು ಸರಿಯಾಗಿ ಗಮನಿಸಿ ಅವುಗಳನ್ನು ಪಾಲನೆ ಮಾಡಬೇಕು. ಪ್ರತಿ ಪರೀಕ್ಷಾ ಕೊಠಡಿಯಲ್ಲಿ ಕ್ಯಾಮೆರಾ ಇರುತ್ತದೆ. ವೆಬ್ ಕಾಸ್ಟಿಂಗ್ ಮೂಲಕ ಅಲ್ಲಿನ ಎಲ್ಲ ಬೆಳವಣಿಗೆಗಳನ್ನು ಪ್ರತಿ ಕ್ಷಣ ವೀಕ್ಷಣೆ ಮಾಡಲಾಗುತ್ತದೆ. ಪ್ರತಿ ಕೇಂದ್ರದಲ್ಲೂ ಜಾಮರ್ ಅಳವಡಿಸಿ ಆಸುಪಾಸಿನಲ್ಲಿ ಬ್ಲೂಟೂಥ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ವಸ್ತುಗಳು ಕಾರ್ಯನಿರ್ವಹಿಸದಂತೆ ಪ್ರಾಧಿಕಾರ ಕ್ರಮಗಳನ್ನು ತೆಗೆದುಕೊಂಡಿದೆ.
ಇದನ್ನೂ ಓದಿ:KRCL Recruitment; ವಿವಿಧ ಸರ್ಕಾರಿ ಹುದ್ದೆಗಳು.. ಸಂದರ್ಶನ ಮಾತ್ರ, ಪರೀಕ್ಷೆ ಇಲ್ಲ!
/newsfirstlive-kannada/media/post_attachments/wp-content/uploads/2024/10/EXAMS_PSI.jpg)
ಪರೀಕ್ಷೆ ಆರಂಭವಾಗುವ ಸಮಯ
ಪೇಪರ್-1 ಪರೀಕ್ಷೆ; ಬೆಳಗ್ಗೆ 10:30 ರಿಂದ ಮಧ್ಯಾಹ್ನ 12 ಗಂಟೆಗೆ ಮುಗಿಯುತ್ತದೆ
ಪೇಪರ್-2 ಪರೀಕ್ಷೆ; ಮಧ್ಯಾಹ್ನ 12:30 ರಿಂದ 2 ಗಂಟೆಗೆ ಮುಗಿಯುತ್ತದೆ
ಅಭ್ಯರ್ಥಿಗಳಿಗೆ ವಿಶೇಷ ಸೂಚನೆಗಳೇನು..?
- ಹಾಲ್​ ಟಿಕೆಟ್​ ಮೇಲೆ ನಿಮ್ಮ ಫೋಟೋ ಅಂಟಿಸಬೇಕು
- ನೀಲಿ ಅಥವಾ ಕಪ್ಪು ಬಾಲ್​ ಪೆನ್ನು ಉಪಯೋಗಿಸಿ
- ಡ್ರೆಸ್​ ಕೋಡ್ ಪಾಲಿಸಲೇಬೇಕು (ಜೀನ್ಸ್, ಫುಲ್ ಶರ್ಟ್​, ವಾಚ್, ಬ್ಲೂಟೂಥ್, ಫೋನ್, ಚಿನ್ನ, ಬೆಳ್ಳಿ ಆಭರಣಗಳನ್ನು ನಿಷೇಧಿಸಲಾಗಿದೆ )
- ಎಲೆಕ್ಟ್ರಾನಿಕ್ ವಸ್ತುಗಳಿಗೆ ಅನುಮತಿ ಇರುವುದಿಲ್ಲ
- 2 ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು (ಸೆಕ್ಯೂರಿಟಿ ಚೆಕ್ಕಿಂಗ್ ಇರುವ ಕಾರಣ ಬೇಗ ಬರಲೇಬೇಕು)
- ಟೀ ಶರ್ಟ್, ಫಾರ್ಮಲ್ ಪ್ಯಾಂಟ್ ಧರಿಸಬೇಕು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us