newsfirstkannada.com

PSI ನೇಮಕಾತಿ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಆಗಿದ್ಯಾ? ಸಬ್ ಇನ್​​ಸ್ಪೆಕ್ಟರ್ ಲಿಂಗಯ್ಯನ ಮೇಲೆ ಸಿಸಿಬಿ ಅನುಮಾನ

Share :

Published January 20, 2024 at 12:53pm

    ನಿನ್ನೆಯಿಂದ ಸಬ್ ಇನ್​​ಸ್ಪೆಕ್ಟರ್ ಲಿಂಗಯ್ಯನನ್ನ ತೀವ್ರ ವಿಚಾರಣೆ

    ಜನವರಿ 23ರಂದು ನಡೆಯಬೇಕಿರುವ ಸಬ್ ಇನ್​​ಸ್ಪೆಕ್ಟರ್ ಎಕ್ಸಾಂ

    ಪರೀಕ್ಷೆ ಇರುವಾಗಲೇ ಮುಂಚಿತವಾಗಿ ಪೇಪರ್​ ಲೀಕ್ ಮಾಡಿದ್ರಾ?

ಬೆಂಗಳೂರು: ಇನ್ನೇನು 3 ದಿನಗಳಲ್ಲಿ ನಡೆಯಬೇಕಿದ್ದ ಪೊಲೀಸ್ ಸಬ್ ಇನ್​​ಸ್ಪೆಕ್ಟರ್ (ಪಿಎಸ್ಐ) ಹುದ್ದೆ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾದ ಆರೋಪ ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಇಂಟೆಲಿಜೆನ್ಸ್ ವಿಭಾಗದ ಸಬ್ ಇನ್​​ಸ್ಪೆಕ್ಟರ್ ಲಿಂಗಯ್ಯನನ್ನು ವಶಕ್ಕೆ ಪಡೆದು ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಪಿಎಸ್​ಐ ಮತ್ತು CTI ಎರಡು ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಬ್ ಇನ್​​ಸ್ಪೆಕ್ಟರ್ ಲಿಂಗಯ್ಯನನ್ನು ನಿನ್ನೆಯಿಂದ ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮೊಬೈಲ್​ನಲ್ಲಿನ ವ್ಯಾಟ್ಸ್ಆ್ಯಪ್‌​ ಮೂಲಕ ಚಾಟಿಂಗ್ ಮಾಡಿರುವ ಕುರಿತು ತೀವ್ರ ವಿಚಾರಣೆ ನಡೆಸಲಾಗುತ್ತಿದ್ದು ಚಾಟಿಂಗ್ ಯಾರಿಗೆ ಮಾಡಿರುವುದು, ಇದು ಚಾಟಿಂಗ್ ನಿಮ್ಮದೇನಾ? ಹಣದ ಬಗ್ಗೆಯು ಚರ್ಚೆ ಮಾಡಿದ್ದು, ಯಾರಿಂದಲಾದರೂ ಹಣ ಪಡೆದುಕೊಂಡಿದ್ದೀರಾ ಎಂದು ಅಧಿಕಾರಿಗಳು ಪ್ರಶ್ನೆಗಳ ಪ್ರಶ್ನೆ ಮಾಡುತ್ತಿದ್ದಾರೆ.

ಇಬ್ಬರು ಅಭ್ಯರ್ಥಿಗಳಿಂದ ಮುಂಗಾಡ ರೂಪದಲ್ಲಿ 10 ಲಕ್ಷ ರೂಪಾಯಿಗಳನ್ನು ಪಡೆದಿರುವ ಮಾಹಿತಿ ಇದೆ ಎನ್ನಲಾಗುತ್ತಿದೆ. ನಿಜವಾಗಿ ಇದೇ 23ರಂದು ನಡೆಯಲಿರುವ ಪಿಎಸ್ಐ ಪ್ರಶ್ನೆ ಪತ್ರಿಕೆಗಳು ಸೋರಿಕೆ ಆಗಿದೆಯಾ ಅಂತಾನೂ ವಿಚಾರಿಸಲಾಗುತ್ತಿದೆ. ಇನ್ನು ವಶಕ್ಕೆ ಪಡೆದಿರುವ ಅಧಿಕಾರಿ ಜೊತೆ ಚಾಟಿಂಗ್​ ಮೂಲಕ ಸಂಪರ್ಕದಲ್ಲಿದ್ದವ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ. ಹೀಗಾಗಿ ಅವರಿಗೂ ನೋಟಿಸ್ ಕೊಟ್ಟು ಮಾಹಿತಿ ಪಡೆಯಲು ಸಿಸಿಬಿ ಮುಂದಾಗಿದೆ.

ಇದನ್ನೂ ಓದಿ: Breaking News: ಡಿವೋರ್ಸ್ ವದಂತಿ ಮಧ್ಯೆ ಎರಡನೇ ಮದುವೆಯಾದ ಸಾನಿಯಾ ಮಿರ್ಜಾ ಪತಿ ಮಲಿಕ್..!

ಸಬ್ ಇನ್​​ಸ್ಪೆಕ್ಟರ್ ಲಿಂಗಯ್ಯನ ಫೋನ್​ ಅನ್ನು ವಶಕ್ಕೆ ಪಡೆದು ಆಡಿಯೋ ಮತ್ತು ವಾಟ್ಸ್​ಆ್ಯಪ್ ಚಾಟಿಂಗ್ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಸದ್ಯ ಮೊಬೈಲ್​ನಲ್ಲಿ ಯಾರೆಲ್ಲರ ಜೊತೆ ಸಂಪರ್ಕದಲ್ಲಿದ್ದಾರೆ ಅಂತ ಪರಿಶೀಲನೆ ಕೈಗೊಳ್ಳಲಾಗಿದೆ. ಪಿಎಸ್​ಐ ಮತ್ತು CTI ಎರಡು ಪರೀಕ್ಷೆಯ ಪೇಪರ್ ಲೀಕ್ ಆಗಿದೆಯಾ ಎಂಬುದು ಸದ್ಯದ ಪ್ರಶ್ನೆಯಾಗಿದೆ. ಇದೆಲ್ಲ ಅಧಿಕಾರಿಗಳ ವಿಚಾರಣೆ ಬಳಿಕವೇ ಎಲ್ಲ ಗೊತ್ತಾಗಲಿದೆ.

ಈಗಾಗಲೇ ನಡೆಸಲಾಗಿದ್ದ ಪಿಎಸ್​ಐ ಪರೀಕ್ಷೆಯು ಹಗರಣದ ಗೂಡಾಗಿತ್ತು. ಇನ್ನು ಪ್ರರಕಣ ತನಿಖೆಯಲ್ಲಿರುವಾಗಲೇ ಮರು ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಅಸ್ತು ಎಂದಿತ್ತು. ಹೀಗಾಗಿ ಜನವರಿ 23 ರಂದು ಪಿಎಸ್​ಐ ಮರು ಪರೀಕ್ಷೆಗೆ ಎಲ್ಲ ರೀತಿಯ ಸಿದ್ಧತೆಗಳು ನಡೆಯುತ್ತಿರುವಾಗಲೇ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿವೆ ಎನ್ನುವುದು ಅಭ್ಯರ್ಥಿಗಳಿಗೆ ನುಂಗಲಾಗದ ಬಿಸಿ ತುಪ್ಪವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

PSI ನೇಮಕಾತಿ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಆಗಿದ್ಯಾ? ಸಬ್ ಇನ್​​ಸ್ಪೆಕ್ಟರ್ ಲಿಂಗಯ್ಯನ ಮೇಲೆ ಸಿಸಿಬಿ ಅನುಮಾನ

https://newsfirstlive.com/wp-content/uploads/2024/01/PSI_EXAM-1.jpg

Load More