PSI ಪರಶುರಾಮ ಸಾವಿನ ಬೆನ್ನಲ್ಲೇ CCB ಇನ್ಸ್‌ಪೆಕ್ಟರ್‌ ನಿಗೂಢ ಸಾವು; ಅಸಲಿ ಕಾರಣವೇನು?

author-image
admin
Updated On
PSI ಪರಶುರಾಮ ಸಾವಿನ ಬೆನ್ನಲ್ಲೇ CCB ಇನ್ಸ್‌ಪೆಕ್ಟರ್‌ ನಿಗೂಢ ಸಾವು; ಅಸಲಿ ಕಾರಣವೇನು?
Advertisment
  • ತಿಮ್ಮೇಗೌಡ ಸಾವಿಗೆ ಅಸಲಿ ಕಾರಣ ಮೇಲಾಧಿಕಾರಿಗಳ ಕಿರುಕುಳನಾ?
  • 2003ರ ಬ್ಯಾಚ್​ನಲ್ಲಿ ಸಿಸಿಬಿ ಇನ್ಸ್​ಪೆಕ್ಟರ್ ಆಗಿದ್ದ ತಿಮ್ಮೇಗೌಡ
  • ಇಂದು ಬೆಳಗ್ಗೆ ಕಗ್ಗಲಿಪುರದ ಬಳಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ

ಬೆಂಗಳೂರು: ರಾಜ್ಯದಲ್ಲಿ ಆರಕ್ಷಕರಿಗೆ ರಕ್ಷಣೆನೇ ಇಲ್ವಾ? ಅನ್ನೋ ಪ್ರಶ್ನೆ ಶುರುವಾಗಿದೆ. ಯಾದಗಿರಿ ಪಿಎಸ್​ಐ ಆತ್ಮಹತ್ಯೆ ದುರಂತ ಮಾಸುವ ಮುನ್ನವೇ ಸಿಸಿಬಿ ಇನ್ಸ್​ಪೆಕ್ಟರ್​ಯೋರ್ವ ಆತ್ಮಹತ್ಯೆ​ ಮಾಡಿಕೊಂಡಿದ್ದಾರೆ. ವರ್ಷದ ಹಿಂದೆ ತಲೆದಂಡದ ಶಿಕ್ಷೆ ಪಡೆದಿದ್ದ ಅಧಿಕಾರಿಯ ಸಾವು ನಿಗೂಢತೆಗೆ ಕಾರಣವಾಗಿದೆ. ಸಿಸಿಬಿ ಅಧಿಕಾರಿಯ ಸಾವಿನ ಸುತ್ತಾ ಅನುಮಾನಗಳ ಹುತ್ತವೇ ಬೆಳೆದು ನಿಂತಿದೆ.

ಇದನ್ನೂ ಓದಿ: ಅಜ್ಜನ ತಿಜೋರಿಯಿಂದ ಜಾಕ್‌ಪಾಟ್.. ಒಂದೇ ರಾತ್ರಿಗೆ ಕೋಟ್ಯಾಧಿಪತಿಯಾದ ಬೆಂಗಳೂರಿನ ಮಹಿಳೆ; ಹೇಗೆ?

ಮರಕ್ಕೆ ನೇಣು ಬಿಗಿದು ಸಿಸಿಬಿ ಇನ್ಸ್​ಪೆಕ್ಟರ್​ ಆತ್ಮಹತ್ಯೆಗೆ ಶರಣು
ತಿಮ್ಮೇಗೌಡ ಸಾವಿಗೆ ಅಸಲಿ ಕಾರಣ ಮೇಲಾಧಿಕಾರಿಗಳ ಕಿರುಕುಳನಾ?
ತಿಮ್ಮೇಗೌಡ್ರು ಸಿಸಿಬಿ ಆರ್ಥಿಕ ಅಪರಾಧ‌ ವಿಭಾಗದಲ್ಲಿ ಇನ್ಸ್​ಪೆಕ್ಟರ್​ ಆಗಿ ಕೆಲಸ ಮಾಡುತ್ತಾ ಇದ್ದರು. ಆದ್ರೆ ಏಕಾಏಕಿ ಅದೇನಾಯ್ತೋ ಗೊತ್ತಿಲ್ಲ.. ರಾಮನಗರದ ಕಗ್ಗಲೀಪುರದ ಬಳಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

publive-image

ಅಷ್ಟಕ್ಕೂ ಪೊಲೀಸ್ ಅಧಿಕಾರಿ ತಿಮ್ಮೇಗೌಡಾಗೆ ಸಾಯುವಂತದ್ದು ಏನಾಗಿತ್ತು? ಸಾವಿಗೆ ಮೇಲಾಧಿಕಾರಿಗಳ ಕಿರುಕುಳ ಕಾರಣನಾ? ಅಥವಾ ಖಿನ್ನತೆ ಕಾರಣಾನಾ? ಹೀಗೆ ಇನ್ಸ್​ಪೆಕ್ಟರ್ ಸಾವಿನ ಸುತ್ತಾ ಅನುಮಾನಗಳ ಹುತ್ತವೇ ಬೆಳೆದು ನಿಂತಿದೆ.

ಆನೇಕಲ್ ಪಟಾಕಿ ದುರಂತದಲ್ಲಿ ಅಮಾನತಾಗಿದ್ದ ‌ತಿಮ್ಮೇಗೌಡ
ಅಮಾನತಾಗಿದ್ದಕ್ಕೆ ಖಿನ್ನತೆ ಒಳಗಾಗಿದ್ರಾ ಸಿಸಿಬಿ ಇನ್ಸ್​​ಪೆಕ್ಟರ್ ?

2023ರ ಅಕ್ಟೋಬರ್ 8 ದೇಶದಲ್ಲಿ ದೀಪಾವಳಿಯ ಸಂಭ್ರಮ ಜೋರಾಗಿತ್ತು. ಆ ದೀಪಗಳ ನಡುವೆಯೂ ಅದೊಂದು ಘಟನೆ ಕತ್ತಲ ಕಾರ್ಮೋಡ ಆವರಿಸುವಂತೆ ಮಾಡಿತ್ತು. ಸಂತೋಷಕ್ಕಾಗಿ ತಯಾರಾಗ್ತಿದ್ದ ಪಟಾಕಿ ಫ್ಯಾಕ್ಟರಿಯೇ ಹೊತ್ತಿ ಉರಿದಿತ್ತು. ಈ ಸ್ಫೋಟದಲ್ಲಿ ಬರೋಬ್ಬರಿ 12 ಮಂದಿ ಸಜೀವ ದಹನರಾಗಿದ್ದರು. ಬಳಿಕ ಪಟಾಕಿ ಅಂಗಡಿಗೆ ಹಿಂದಿನ ಇನ್ಸ್‌ಪೆಕ್ಟರ್​​ ಅಪ್ರೂವಲ್ ಕೊಟ್ಟಿದ್ದ ತಿಮ್ಮೇಗೌಡ ಅವರನ್ನ ಅಮಾನತು ಮಾಡಲಾಯಿತು.

ಇದನ್ನೂ ಓದಿ: ಸಾಯುವ ಹಿಂದಿನ ದಿನ ಕೈಯಾರೆ ಚಿತ್ರಾನ್ನ ಮಾಡಿ ಬಡಿಸಿದ್ದ -ಮೃತ ಪರಶುರಾಮನ ತಂದೆ ಆಕ್ರಂದನ.. 

ಯಾರು ‘ಈ’ ತಿಮ್ಮೇಗೌಡ..?
2003ರ ಬ್ಯಾಚ್​ನಲ್ಲಿ ಸಿಸಿಬಿ ಇನ್ಸ್​ಪೆಕ್ಟರ್ ಆಗಿದ್ದ ತಿಮ್ಮೇಗೌಡ
ಅಮಾನತಿನಿಂದ ಖಿನ್ನತೆಗೆ ಒಳಗಾಗಿದ್ದ ಇನ್ಸ್​​ಪೆಕ್ಟರ್​ ತಿಮ್ಮೇಗೌಡ
ಬಳಿಕ ಇನ್ಸ್​​ಪೆಕ್ಟರ್​ ತಿಮ್ಮೇಗೌಡಗೆ ಕ್ಲೀನ್ ಚೀಟ್ ನೀಡಿದ್ದ ಕೋರ್ಟ್​
ಕ್ಲೀನ್ ಚೀಟ್ ಸಿಕ್ಕರೂ ಖಿನ್ನತೆಯಿಂದ ಹೊರ ಬರದ ತಿಮ್ಮೇಗೌಡ
ಇಂದು ಬೆಳಗ್ಗೆ ಕಗ್ಗಲಿಪುರದ ಬಳಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ
ತಿಮ್ಮೇಗೌಡ ಸಾವಿಗೆ ಹಿರಿಯ ಅಧಿಕಾರಿಗಳೇ ಕಾರಣ ಅಂತ ಆರೋಪ

ಅಷ್ಟಕ್ಕೂ.. ಸಿಸಿಬಿ ಇನ್ಸ್​ಪೆಕ್ಟರ್​ ತಿಮ್ಮೇಗೌಡ ಸಾವಿಗೆ ಅಸಲಿ ಕಾರಣವೇನು? ಖಿನ್ನತೆ ತಾಳಲಾರದೇ ಆತ್ಮಹತ್ಯೆಗೆ ಶರಣಾದ್ರಾ? ಅಥವಾ ನಿಜಕ್ಕೂ ಅವರಿಗೆ ಹಿರಿಯ ಅಧಿಕಾರಿಗಳ ಕಿರುಕುಳವಿತ್ತಾ? ಸದ್ಯ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಮಾತ್ರ ನಿಗೂಢವಾಗಿದೆ. ಯಾದಗಿರಿ PSI ಸಾವಿನ ಬೆನ್ನಲ್ಲೇ ಮತ್ತೊಬ್ಬ ಇನ್ಸ್‌ಪೆಕ್ಟರ್‌ ಸಾವನ್ನಪ್ಪಿರೋದು ಸರ್ಕಾರದ ಕಾರ್ಯವೈಖರಿಯ ಮೇಲೆ ಬೊಟ್ಟು ಮಾಡುವಂತೆ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment