ಎಸ್.ಜೆ.ಪಾರ್ಕ್ ಪೊಲೀಸ್ ಅಧಿಕಾರಿಗಳಿಂದ ಜನಸಂಪರ್ಕ ಸಭೆ
ವ್ಯಾಪಾರಿಗಳ ಕುಂದು ಕೊರತೆಗಳನ್ನು ಆಲಿಸಿದ ಪೊಲೀಸ್ ಅಧಿಕಾರಿಗಳು
ಕಳೆದುಕೊಂಡ ಫೋನ್ ಪತ್ತೆ ಮಾಡಿ ವಾರಸುದಾರರಿಗೆ ನೀಡಿದ ಪೊಲೀಸರು
ಬೆಂಗಳೂರು: ಎಸ್.ಜೆ.ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯ ಎ.ಡಿ.ಎ ರಂಗಮಂದಿರದಲ್ಲಿ ಮಾಸಿಕ ಜನಸಂಪರ್ಕ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಎಸ್.ಜೆ.ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಬಾರಗುಂಡಿ, ರಾಮಣ್ಣಗಾರ್ಡನ್, ಸಿ.ಎಸ್.ಐ ಕಾಂಪೌಂಡ್ನ ನಿವಾಸಿಗಳು ಜೊತೆಗೆ ಎಸ್.ಪಿ.ರಸ್ತೆ, ಎಸ್.ಜೆ.ಪಿ ರಸ್ತೆ ಮತ್ತು ಎನ್.ಆರ್.ರಸ್ತೆಯ ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಕುಂದುಕೊರತೆಗಳನ್ನು ತಿಳಿಸಿದ್ದಾರೆ.
ಜನಸಂಪರ್ಕ ಸಭೆಯಲ್ಲಿ ಶ್ರೀ.ಸತೀಶ್ ಕುಮಾರ್.ಐ.ಪಿ.ಎಸ್, ಮಾನ್ಯ ಅಪರ ಪೊಲೀಸ್ ಆಯುಕ್ತರು, (ಪಶ್ಚಿಮ), ಬೆಂಗಳೂರು ನಗರ, ಶ್ರೀ.ಶೇಖರ್.ಎಸ್.ಟಿ, ಐ.ಪಿ.ಎಸ್, ಮಾನ್ಯ ಉಪ ಪೊಲೀಸ್ ಆಯುಕ್ತರು, ಕೇಂದ್ರ ವಿಭಾಗ, ಶ್ರೀ.ಶಿವಾನಂದ ಚಲವಾದಿ, ಸಹಾಯಕ ಪೊಲೀಸ್ ಆಯುಕ್ತರು, ಹಲಸೂರುಗೇಟ್ ಉಪ ವಿಭಾಗ ಮತ್ತು ಶ್ರೀ.ಗುರುಪ್ರಸಾದ್.ಎನ್, ಪೊಲೀಸ್ ಇನ್ಸ್ ಪೆಕ್ಟರ್, ಹಾಗೂ ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಜರಿದ್ದು, ಮಾನ್ಯ ಅಪರ ಪೊಲೀಸ್ ಆಯುಕ್ತರು, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಸಮಸ್ಯೆಗಳನ್ನು ಇತ್ಯರ್ಥಗೊಳಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿರುತ್ತಾರೆ.
ಉತ್ತಮ ಕರ್ತವ್ಯ ನಿರ್ವಹಿಸಿದ ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಪ್ರಶಂಸಿಸಿ ಸನ್ಮಾನ ಮಾಡಿರುತ್ತಾರೆ. ಇದೇ ಸಂದರ್ಭದಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ ಮೊಬೈಲ್ ಫೋನ್ಗಳನ್ನು ಪತ್ತೆ ಮಾಡಿ, ವಾರಸುದಾರರಿಗೆ ನೀಡಿರುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ