ಬಾಲಿವುಡ್ ನಟನನ್ನು ವರಿಸಿದ ಚಿರು ಸಿನಿಮಾ ನಟಿ
ಪುಲ್ಕಿತ್ ಸಾಮ್ರಾಟ್ ಜೊತೆ ಗೂಗ್ಲಿ ಬೆಡಗಿಯ ಮದುವೆ
ವಿವಾಹದ ಫೋಟೋ ಹಂಚಿಕೊಂಡ ಕೃತಿ ಕರಬಂಧ
ಗೂಗ್ಲಿ ಬೆಡಗಿ ಕೃತಿ ಕರಬಂಧ ಮತ್ತು ಬಾಲಿವುಡ್ ನಟ ಪುಲ್ಕಿತ್ ಸಾಮ್ರಾಟ್ ವಿವಾಹವಾಗಿದ್ದಾರೆ. ಈ ಸಂತಸದ ಕ್ಷಣವನ್ನ ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಅಂದಹಾಗೆಯೇ ಈ ಜೋಡಿ ನಿನ್ನೆ ವಿವಾಹವಾಗಿದ್ದಾರೆ. ಕುಟುಂಬ ಸಮ್ಮುಖದಲ್ಲಿ ಹಸೆಮಣೆ ಏರಿದ್ದಾರೆ. ಇವರ ವಿವಾಹದ ಸುದ್ದಿ ಕಳೆದ ಕೆಲವು ದಿನಗಳಿಂದಲೇ ಸುದ್ದಿಯಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಆಮಂತ್ರಣ ಪತ್ರಿಕೆ ಕೂಡ ಸೋರಿಕೆಯಾಗಿತ್ತು. ಅದರಂತೆ ಕೃತಿ ಮತ್ತು ಪುಲ್ಕಿತ್ ನಿನ್ನೆ ಅದ್ಧೂರಿಯಾಗಿ ವಿವಾಹಬಂಧಿಯಾಗಿದ್ದಾರೆ.
ಚಿರು ಸಿನಿಮಾ ನಟಿ ಕೃತಿ ಕರಬಂಧ ಮತ್ತು ಪುಲ್ಕಿತ್ ಸಾಮ್ರಾಟ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಈ ಹಿಂದಿನಿಂದಲೂ ಕೇಳಿಬಂದಿತ್ತು. 2 ವರ್ಷಗಳಿಂದ ಈ ಜೋಡಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಇದೀಗ ಈ ಜೋಡಿ ವಿವಾಹವಾಗಿದ್ದಾರೆ.
View this post on Instagram
ಎರಡನೇ ವಿವಾಹ!
ಅಂದಹಾಗೆಯೇ ಪುಲ್ಕಿತ್ಗೆ ಇದು ಎರಡನೇ ಮದುವೆಯಾಗಿದ್ದು, ಈ ಮೊದಲು ಅಂದರೆ 2014ರಲ್ಲಿ ಸಲ್ಮಾನ್ ಖಾನ್ ಸಹೋದರೆ ಶ್ವೇತಾ ರೋಹಿರಾ ಜೊತೆಗೆ ವಿವಾಹವಾಗಿತ್ತು. ಬಳಿಕ 2015ರಲ್ಲಿ ಇವರಿಬ್ಬರ ಸಂಬಂಧ ಮುರಿದುಬಿತ್ತು. ಬಳಿಕ ಇಬ್ಬರು ವಿಚ್ಛೇದನದ ಮೂಲಕ ದೂರವಾದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ