ಫೆಬ್ರವರಿ14, 2019ರಂದು ಪುಲ್ವಾದಲ್ಲಿ ನಡೆದ ಭೀಕರ ದಾಳಿ
ಸಿಆರ್ಪಿಎಫ್ ಬೆಂಗಾವಲು ಪಡೆಯ ವಾಹನದ ಮೇಲೆ ದಾಳಿ
ಈ ಘಟನೆಯಲ್ಲಿ 40 ಸಿಆರ್ಪಿಎಫ್ ಜವಾನರು ಸಾವನ್ನಪ್ಪಿದ್ದರು
Pulwama Terror: 2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಭೀಕರ ದಾಳಿ ನಡೆದಿತ್ತು. ಸಿಆರ್ಪಿಎಫ್ ಬೆಂಗಾವಲು ಪಡೆಯ ವಾಹನದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಬಂಧಿಸಲಾದ ಕಾಕಪೋರಾ ಹಾಜಿಬಲ್ ಗ್ರಾಮದ ಆರೋಪಿ ಬಿಲಾಲ್ ಅಹ್ಮದ್ ಕುಚೇಯ್ ಹೃದಯಾಘಾತದಿಂದ (Heart attack) ಸಾವನ್ನಪ್ಪಿದ್ದಾನೆ .
32 ವರ್ಷದ ಬಿಲಾಲ್ ಅಹ್ಮದ್ ಕುಚೇಯ್ ಜಮ್ಮುವಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಅದಕ್ಕೂ ಮುನ್ನ ಸೆಪ್ಟೆಂಬರ್ 17ರಂದು ಕಿಶ್ವಾರವ ಜಿಲ್ಲಾ ಕಾರಾಗೃಹದಲ್ಲಿ ಬಿಲಾಲ್ ಅಹ್ಮದ್ ಕುಚೇಯ್ ಅನಾರೋಗ್ಯಕ್ಕೆ ಒಳಗಾಗಿದ್ದನು. ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸೋಮವಾರದಮದು ಬಿಲಾಲ್ ಅಹ್ಮದ್ ಕುಚೇಯ್ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ದೊಡ್ಡ ಹಿನ್ನಡೆ.. ಏನಿದು ಮುಡಾ ಹಗರಣ..?
2020ರ ಅಗಸ್ಟ್ 25ರಂದು ಬಿಲಾಲ್ ಅಹ್ಮದ್ ಕುಚೇಯ್ ಸೇರಿ 19 ಮಂದಿ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ ಚಾರ್ಜ್ಶೀಟ್ ಮಾಡಿತ್ತು. ಬಂಧಿತರಾದ 7 ಮಂದಿಯಲ್ಲಿ ಬಿಲಾಲ್ ಅಹ್ಮದ್ ಕುಚೇಯ್ ಕೂಡ ಸೇರಿದ್ದನು.
ಇದನ್ನೂ ಓದಿ: VIDEO: ತಿರುಪತಿ ಲಡ್ಡುವಿನಲ್ಲಿ ಸಿಕ್ತು ತಂಬಾಕು ತುಂಡುಗಳು! ತಿಮ್ಮಪ್ಪನ ಪ್ರಸಾದ ತಿಂದು ಬೆಚ್ಚಿ ಬಿದ್ದ ಮಹಿಳೆ
ಬಿಲಾಲ್ ಅಹ್ಮದ್ ಕುಚೇಯ್ ವಿರುದ್ಧ ಕಾನೂನ ಬಾಹಿರ ಚಟುವಟಿಕೆ ಕಾಯಿದೆ, ವಿದೇಶ ಕಾಯಿದೆ ಮತ್ತು ಜಮ್ಮು ಮತ್ತು ಕಾಶ್ಮೀರ ಸಾರ್ವಜನಿಕ ಆಸ್ತಿ ಹಾನಿ ಕಾಯ್ದೆಯಡಿ ಎನ್ಐಯ ಆರೋಪಪಟ್ಟಿ ಸಲ್ಲಿಸಿತ್ತು.
ಪುಲ್ವಾಮ ದಾಳಿ
ಫೆಬ್ರವರಿ 14, 2019ರಲ್ಲಿ ಜಮ್ಮ ಮತ್ತು ಕಾಶ್ಮೀರದ ಪುಲ್ವಾದಲ್ಲಿ ಭೀಕರ ದಾಳಿ ಸಂಭವಿಸಿತ್ತು. ಮಧ್ಯಾಹ್ನ 3:15ಕ್ಕೆ ಜಮ್ಮು ಮತ್ತು ಶ್ರೀನಗರದ ಹೆದ್ದಾರಿಯಲ್ಲಿ ಸಿಆರ್ಪಿಎಫ್ ಯೋಧರ ಬೆಂಗಾವಲು ವಾಹನದ ಮೇಲೆ ಸ್ಫೋಟಕ ತುಂಬಿದ ವಾಹನ ಡಿಕ್ಕಿ ಹೊಡೆದಿತ್ತು.
ಪುಲ್ವಾಮ ಉಗ್ರರ ದಾಳಿಯಲ್ಲಿ ಸುಮಾರು 40 ಸಿಆರ್ಪಿಎಫ್ ಜವಾನರು ಸಾವನ್ನಪ್ಪಿದ್ದರು. ಹಲವರು ಗಾಯಗೊಂಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ