newsfirstkannada.com

ಸ್ವಂತ ಮಗನ ಕೊಲ್ಲಲು 75 ಲಕ್ಷಕ್ಕೆ ಸುಪಾರಿ ಕೊಟ್ಟ ಅಪ್ಪ, ಗುಂಡಿನ ದಾಳಿಯಲ್ಲಿ ಬಚಾವ್ ಆಗಿದ್ದೇ ದೊಡ್ಡದು

Share :

Published April 27, 2024 at 9:46am

    ಒಟ್ಟು 6 ಮಂದಿಯ ಬಂಧಿಸಿ ತೀವ್ರ ವಿಚಾರಣೆ ನಡೆಯುತ್ತಿದೆ

    ಕೇಸ್​ ತನಿಖೆಗೆ ಕೈಗೊತ್ತಿಕೊಂಡಿದ್ದ ಪೊಲೀಸರಿಗೆ ಶಾಕಿಂಗ್ ವಿಚಾರ

    ತೀವ್ರ ವಿಚಾರಣೆ ವೇಳೆ ಅಸಲಿ ಕತೆ ಹೇಳಿದ ಆರೋಪಿಗಳು

ಸ್ವಂತ ಮಗನನ್ನೇ ಕೊಲ್ಲಲು 75 ಲಕ್ಷ ರೂಪಾಯಿಗೆ ಸುಪಾರಿ ನೀಡಿದ ಆರೋಪದ ಮೇಲೆ ಮಹಾರಾಷ್ಟ್ರದ ಪುಣೆ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ. ಸುಪಾರಿ ನೀಡಿದ ವ್ಯಕ್ತಿ ಸೇರಿ ಒಟ್ಟು 6 ಮಂದಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಪುಣೆ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ನೀಡಿರುವ ಮಾಹಿತಿ ಪ್ರಕಾರ, ದಿನೇಶ್​ ಅಗ್ರಡೆ ಮಗನನ್ನೇ ಕೊಲ್ಲಲು ಸುಪಾರಿ ನೀಡಿದ ತಂದೆಯಾಗಿದ್ದಾನೆ. ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ ಈತ, ಮಗನೊಂದಿಗೆ ಆಸ್ತಿ ವಿಚಾರದಲ್ಲಿ ಮುನಿಸಿಕೊಂಡಿದ್ದ. ಮಗ ಧೀರಜ್ ಅಗ್ರೆಡ್​ ತನ್ನ ಬ್ಯುಸಿನೆಸ್​ಗೆ ಅಡ್ಡಿಯಾಗ್ತಿದ್ದಾನೆ ಎಂದು ಸುಪಾರಿ ನೀಡಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದಿದ್ದಾರೆ.

ಇದನ್ನೂ ಓದಿ:ಗ್ರೀನ್ ಇನ್​ಸ್ಟಾ ಪೋಸ್ಟ್​ಗೆ ಹಿಂದಿಯಲ್ಲಿ ಕಮೆಂಟ್​​ ಮಾಡಿದ ವಿಲ್​ ಜಾಕ್ಸ್.. ಅಂಥದ್ದು ಏನ್ ಮಾಡಿದ್ರು?​

ಏಪ್ರಿಲ್ 16ರ ಮಧ್ಯಾಹ್ನ 3.30ರ ಸುಮಾರಿಗೆ ಬೈಕ್​ನಲ್ಲಿ ಬಂದ ಇಬ್ಬರು ಧೀರಜ್ ಮೇಲೆ ಗುಂಡಿನಿಂದ ದಾಳಿ ಮಾಡಿ ಪರಾರಿಯಾಗಿದ್ದಾರೆ. ಆದರೆ ದಾಳಿಗೊಳಗಾದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದ. ನಂತರ ಧೀರಜ್ ಎಫ್​ಐಆರ್ ದಾಖಲಿಸಿದ್ದ. ತನಿಖೆ ವೇಳೆ ಸ್ವಂತ ತಂದೆಯೇ ಮಗನ ಕೊಲ್ಲಲು ಸುಪಾರಿ ನೀಡಿರೋದು ಗೊತ್ತಾಗಿದೆ. ಈ ಸಂಬಂಧ ಪ್ರಶಾಂತ್, ಅಶೋಕ್, ಪ್ರವೀಣ್, ಯೋಗೇಶ್ ಜಾಧವ್ ಹಾಗೂ ಚೇತನ್ ಎಂಬ ಆರೋಪಿಗಳನ್ನೂ ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರಿಗೆ ಮಳೆ ಬರೋದು ಯಾವಾಗ? ಒಂದು ವಾರದಿಂದ ಉರಿ ಬಿಸಿಲು.. ದಾಖಲೆಯ ತಾಪಮಾನ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ವಂತ ಮಗನ ಕೊಲ್ಲಲು 75 ಲಕ್ಷಕ್ಕೆ ಸುಪಾರಿ ಕೊಟ್ಟ ಅಪ್ಪ, ಗುಂಡಿನ ದಾಳಿಯಲ್ಲಿ ಬಚಾವ್ ಆಗಿದ್ದೇ ದೊಡ್ಡದು

https://newsfirstlive.com/wp-content/uploads/2023/10/Police-Vehicle.jpg

Load More