newsfirstkannada.com

×

ಪೋರ್ಶ್​ ಕಾರು ಆಕ್ಸಿಡೆಂಟ್​; ಬಾಲಕನನ್ನ ಸೇಫ್ ಮಾಡಲು ಭಾರೀ ಕುತಂತ್ರ; ಕಮಿಷನರ್ ಬಿಚ್ಚಿಟ್ರು ಸತ್ಯ; ಏನದು?

Share :

Published May 24, 2024 at 3:09pm

    ಅಪ್ರಾಪ್ತ ಬಾಲಕನಿಗೆ ತನ್ನ ಕೃತ್ಯದ ಬಗ್ಗೆ ಸಂಪೂರ್ಣ ಅರಿವು ಇದೆ

    ಐಷಾರಾಮಿ ಕಾರು ವೇಗವಾಗಿ ಡ್ರೈವ್ ಮಾಡಿ ಸಾವಿಗೆ ಕಾರಣನಾದ

    ಮಗನಿಗೆ ಕಾರು ಡ್ರೈವ್ ಮಾಡಲು ಕೊಡು ಎಂದಿದ್ದ ತಂದೆ ವಿಶಾಲ್

ಮುಂಬೈ: ಪುಣೆಯಲ್ಲಿ ಆಪ್ರಾಪ್ತನೊಬ್ಬ ಪೋರ್ಶ್​ ಕಾರಿನಲ್ಲಿ ವೇಗವಾಗಿ ಬಂದು ಬೈಕ್​ಗೆ ಡಿಕ್ಕಿ ಹೊಡೆದು ಇಬ್ಬರು ಸಾವಿಗೆ ಕಾರಣನಾಗಿದ್ದನು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಸ್ಟಡಿಯಲ್ಲೇ ಆರೋಪಿಗೆ ಪಿಜ್ಜಾ, ಬರ್ಗರ್ ನೀಡಿದ್ದ ಆರೋಪದ ಬಗ್ಗೆ ತನಿಖೆ ನಡೆಯುತ್ತಿದೆ. ಅಲ್ಲದೇ ಅಪಘಾತ ಬೇರೆ ಡ್ರೈವರ್​ನನ್ನು ಸಿಲುಕಿಸುವ ಯತ್ನ ವಿಫಲವಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಪೋರ್ಶ್​ ಕಾರು ಆಕ್ಸಿಡೆಂಟ್​; 1 ಗಂಟೆ ಟಿವಿ, 2 ಗಂಟೆ ಆಟ.. ರಿಮಾಂಡ್​ನಲ್ಲಿ ಬಾಲಾಪರಾಧಿ 

ಈ ಸಂಬಂಧ ಮಾತನಾಡಿರುವ ಪುಣೆಯ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಅವರು, ಪುಣೆಯಲ್ಲಿ ಪೋರ್ಶ್​ ಕಾರು ಡ್ರೈವ್ ಮಾಡಿದ್ದ ಅಪ್ರಾಪ್ತ ಬಾಲಕ ವೇದಾಂದ್‌ ಅಗರ್ವಾಲ್​​ ಇಬ್ಬರು ಟಿಕ್ಕಿಗಳ ಸಾವಿಗೆ ಕಾರಣನಾಗಿದ್ದನು. ಬಳಿಕ ಈತನನ್ನು ಪೊಲೀಸ್​ ಕಸ್ಟಡಿಗೆ ಒಪ್ಪಿಸಲಾಗಿತ್ತು. ಆದರೆ ಈ ವೇಳೆ ಕಸ್ಟಡಿಯಲ್ಲಿ ಇದ್ದರೂ ಬಾಲಾಪರಾಧಿಗೆ ಪಿಜ್ಜಾ, ಬರ್ಗರ್ ಅನ್ನು ನೀಡಲಾಗಿದೆ. ಅಲ್ಲದೇ ಪೋರ್ಶ್​ ಕಾರು ಚಾಲನೆ ಮಾಡುವಾಗ ತನ್ನ ಮಗನಿಗೆ ಡ್ರೈವ್ ಮಾಡಲು ಕೊಡು ಎಂದು ಚಾಲಕನಿಗೆ ತಂದೆ ವಿಶಾಲ ಅಗರವಾಲ್ ಹೇಳಿದ್ದರು. ಸದ್ಯ ಇವತ್ತಿಗೆ ವಿಶಾಲ ಅಗರವಾಲ್ ಪೊಲೀಸ್ ಕಸ್ಟಡಿ ಅಂತ್ಯವಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ‘ಸಿಡಿ ಶಿವು.. ಪೆನ್​ಡ್ರೈವ್ ಸ್ವಾಮಿ..’ ರಾಜ್ಯ ರಾಜಕಾರಣದಲ್ಲಿ ನಾಮಕರಣದ ಸಮರ..!

ಪ್ರತ್ಯಕ್ಷದರ್ಶಿಗಳಿಗೆ ಕಿರುಕುಳ ನೀಡಿದ ಆರೋಪಿಗಳು

ಪೋಷಕರೇ ಅಪ್ರಾಪ್ತ ಬಾಲಕನಿಗೆ ಪೋರ್ಶ್​ ಕಾರು ನೀಡಿದ್ದಾರೆ. ಆದರೆ ಈಗ ಅಪ್ರಾಪ್ತನನ್ನು ವಯಸ್ಕನೆಂದು ಪರಿಗಣಿಸಿ ವಿಚಾರಣೆ ನಡೆಸಬೇಕಿದೆ. ಈ ಸಂಬಂಧ ನಾವು ಬಾಲನ್ಯಾಯ ಮಂಡಳಿಯನ್ನು ಸಂಪರ್ಕ ಮಾಡಿದ್ದೇವೆ. ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾದ ಅಪ್ರಾಪ್ತನ ರಕ್ತದ ರಿಪೋರ್ಟ್ ಇನ್ನೂ ಬಂದಿಲ್ಲ. ಈ ಪ್ರಕರಣವನ್ನು ಬೇರೆ ಬೇರೆ ಕೋನದಿಂದ ತನಿಖೆ ಮಾಡುತ್ತಿದ್ದೇವೆ. ಕೇಸ್​ಗೆ ಸಂಬಂಧಿಸಿದಂತೆ ಆರೋಪಿಗಳು ಘಟನೆ ನಡೆದಾಗಿದ್ದಂತಹ ಪ್ರತ್ಯಕ್ಷದರ್ಶಿಗಳಿಗೆ ಕಿರುಕುಳ ನೀಡಿದ್ದಾರೆ. ಹೀಗಾಗಿ ಇದನ್ನು ಅತ್ಯಂತ ಜಾಗರೂಕತೆಯಿಂದ ತನಿಖೆ ಮಾಡುತ್ತಿದ್ದೇವೆ ಎಂದು ಪೊಲೀಸ್ ಕಮಿಷನರ್‌ ಹೇಳಿದ್ದಾರೆ.

‘ಕಾರು ಡ್ರೈವ್ ಮಾಡುವಾಗ ಬಾಲಕನಿಗೆ ಅರಿವು ಇತ್ತು’

ಇನ್ನು ಅಪ್ರಾಪ್ತ ಬಾಲಕನಿಗೆ ತನ್ನ ಕೃತ್ಯದ ಬಗ್ಗೆ ಸಂಪೂರ್ಣ ಅರಿವು ಇದೆ. ಆದರೆ ಕಾರ್ ಅಪಘಾತದ ಕೇಸ್​ನಲ್ಲಿ ಬೇರೆ ಡ್ರೈವರ್​ನನ್ನು ಸಿಲುಕಿಸುವ ಯತ್ನ ನಡೆದಿತ್ತು. ಅಪ್ರಾಪ್ತನು ಕಾರು ಚಾಲನೆ ಮಾಡುತ್ತಿರಲಿಲ್ಲ ಎಂದು ಬಿಂಬಿಸಲು ಯತ್ನಿಸಲಾಗಿತ್ತು. ಆದರೆ ಅವೆಲ್ಲ ವಿಫಲವಾಗಿವೆ. ಆರೋಪಿಗಳು ಸಾಕ್ಷ್ಯ ನಾಶ ಪಡಿಸಲು ಯತ್ನಿಸಿರುವ ಅಡಿ ಸೆಕ್ಷನ್​ಗಳನ್ನ ಸೇರ್ಪಡೆ ಮಾಡುತ್ತಿದ್ದೇವೆ ಎಂದು ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೋರ್ಶ್​ ಕಾರು ಆಕ್ಸಿಡೆಂಟ್​; ಬಾಲಕನನ್ನ ಸೇಫ್ ಮಾಡಲು ಭಾರೀ ಕುತಂತ್ರ; ಕಮಿಷನರ್ ಬಿಚ್ಚಿಟ್ರು ಸತ್ಯ; ಏನದು?

https://newsfirstlive.com/wp-content/uploads/2024/05/PUNE_Porsche_Car-1.jpg

Load More