ಮನೆಯಲ್ಲಿ ಆರಾಮಾಗಿ ಮಲಗಿದ್ದವನಿಗೆ ಶಾಕ್​ ಕೊಟ್ಟ ಟೋಲ್​ ಪ್ಲಾಜಾ; ನುಂಗಿದ್ದು ಎಷ್ಟು ಹಣ?

author-image
Gopal Kulkarni
Updated On
ವಾಹನ ಸವಾರರಿಗೆ ಬಿಗ್ ರಿಲೀಫ್‌.. ಇನ್ಮುಂದೆ 20 ಕಿ.ಮೀ ಟೋಲ್‌ ದರ ಉಚಿತ; ಹೊಸ ರೂಲ್ಸ್‌ ಘೋಷಣೆ!
Advertisment
  • ಮನೆಯಲ್ಲಿ ಆರಾಮಾಗಿ ಮಲಗಿದ್ದವನಿಗೆ ಶಾಕ್ ಕೊಟ್ಟ ಟೋಲ್ ​ಪ್ಲಾಜಾ!
  • ಆ ದಾರಿಯಲ್ಲಿ ಪ್ರಯಾಣಿಸದಿದ್ದರು ಕಟ್ ಆಗಿದ್ದು ಎಷ್ಟು ಹಣ ಗೊತ್ತಾ?
  • ಕೊನೆಗೆ X ಖಾತೆಯಲ್ಲಿ ದೂರು ನೀಡಿದವನಿಗೆ ಸಿಕ್ಕ ಪರಿಹಾರವೇನು?

ಅಮೃತಸರ: ಸದ್ಯ ದೇಶದಲ್ಲಿ ಒಂದೂರಿಂದ ಮತ್ತೊಂದು ಊರಿಗೆ ದೀರ್ಘ ಪ್ರಯಾಣ ಕೈಗೊಂಡ್ರೆ, ಸ್ವಂತ ವಾಹನಕ್ಕೆ ಪೆಟ್ರೋಲ್​ಗೆ ಎಷ್ಟು ಹಣ ಖರ್ಚು ಮಾಡ್ತೀವೋ, ಅಷ್ಟೇ ಹಣ ಟೋಲ್​ಪ್ಲಾಜಾಗಳಿಗೆ ಕಟ್ಟುತ್ತೇವೆ. ಈಗಂತೂ ಫಾಸ್ಟ್​​ ಟ್ಯಾಗ್ ಬಂದ ಮೇಲಂತೂ ನಮ್ಮ ಅಕೌಂಟ್​ನಿಂದಲೇ ಹಣ ಟಕ್ ಅಂತ ಕಟ್ ಆಗುತ್ತೆ. ಫಾಸ್ಟ್​​ಟ್ಯಾಗ್​​ನಲ್ಲಿ ಕಟ್ ಆದ ಹಣ ಎಷ್ಟು ಅನ್ನೋದು ಮೆಸೇಜ್ ಮೂಲಕವೇ ಬಂದು ಬಿಡುತ್ತೆ. ಆದ್ರೆ ಒಂದು ಹೆದ್ದಾರಿಯಲ್ಲಿ ಪ್ರಯಾಣವೇ ಮಾಡದೇ, ಮನೆಯಲ್ಲಿ ನೆಮ್ಮದಿಯಾಗಿ ಮಲಗಿರುವ ಪಂಜಾಬ್​ನ ಒಬ್ಬ ವ್ಯಕ್ತಿಗೆ ಈ ಟೋಲ್​ ಪ್ಲಾಜಾ ಬಿಗ್ ಶಾಕ್ ನೀಡಿದೆ.

ಇದನ್ನೂ ಓದಿ:ಅಬ್ಬಬ್ಬಾ.. 542 ಕೆಜಿ ತೂಕ ಇದ್ದ ದಡೂತಿ ದೇಹ ಇಷ್ಟು ಕಡಿಮೆ ಆಯ್ತಾ? ಈತನ ಭಾರ ಇಳಿಸಿದ ದೊರೆ ಯಾರು?

publive-image

ಮನೆಯಲ್ಲಿ ಮಲಗಿದ ವ್ಯಕ್ತಿಯ 220 ರೂಪಾಯಿ ಗುಳುಂ
ಪಂಜಾಬ್​ನ ಸುಂದರ್ ದೀಪ್ ಅನ್ನೋ ವ್ಯಕ್ತಿ ತಮ್ಮ ಎಕ್ಸ್ ಖಾತೆಯಲ್ಲಿ ಇಂತಹದೊಂದು ಪೋಸ್ಟ್​ನ್ನು ಹಾಕಿದ್ದಾರೆ. ಆಗಸ್ಟ್ 14 ರ ಮಧ್ಯಾಹ್ನ ಎರಡು ಗಂಟೆಯ ಸುಮಾರಿಗೆ ಮನೆಯಲ್ಲಿ ಬೆಚ್ಚಗೆ ಮಲಗಿದ್ದ ಕಾರು ಮಾಲೀಕ ಸುಂದರದೀಪ್ ಅವರ ಮೊಬೈಲ್​ಗೆ ಒಂದು ಮೆಸೇಜ್ ಬರುತ್ತೆ. ಲಡೋವಾಲಾ ಪ್ಲಾಜಾದಲ್ಲಿ ತಮ್ಮ ಫಾಸ್ಟ್​ಟ್ಯಾಗ್ ಅಕೌಂಟ್​ನಿಂದ 220 ರೂಪಾಯಿ ಕಟ್ ಆಗಿರುವ ಮೆಸೇಜ್ ನೋಡಿ ಗಾಬರಿ ಆಗಿ ಹೋಗ್ತಾರೆ ಸುಂದರದೀಪ್​, ಅದನ್ನು ಸ್ಕ್ರೀನ್ ಶಾಟ್ ತೆಗೆದುಕೊಂಡು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಯಾರಿಗೆ ಸಾಲುತ್ತೆ ಸಂಬಳ.. ಕಾಗ್ನಿಜೆಂಟ್‌ ಕೊಟ್ಟ ಹೊಸ ಆಫರ್‌ ಸರೀನಾ? ತಪ್ಪಾ? ನೆಟ್ಟಿಗರು ಕನ್ಫ್ಯೂಸ್‌!

HI FASTAG _NETC ಅಂತ ಹೇಳಿದ ಸುಂದರದೀಪ್, ನಾನು ಹಾಯಾಗಿ ಮಲಗಿದಾಗ ನನ್ನ ಖಾತೆಯಿಂದ 220 ರೂಪಾಯಿ ಕಟ್ ಆಗಿದೆ. ನಾನು ಈ ತಿಂಗಳಲ್ಲಿ ನನ್ನ ದುಡ್ಡು ಕಟ್ ಆದ ಟೋಲ್​ ಪ್ಲಾಜಾ ರಸ್ತೆಯಲ್ಲಿ ಪ್ರಯಾಣವೇ ಮಾಡಿಲ್ಲ. ಏನ್​ ನಡೀತಾ ಇದೆ ಇಲ್ಲಿ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

ಈ ಟ್ವೀಟ್​ಗೆ ಸ್ಪಂದಿಸಿದ ಫಾಸ್ಟ್ ಟ್ಯಾಗ್ ಕೂಡಲೇ ಗ್ರಾಹಕರ ಸೇವಾ ಬಳಿಗೆ ಹೋಗಿ ಭೇಟಿಯಾಗಿ, ಹಾಗೂ ಬ್ಯಾಂಕ್​ನಲ್ಲಿಯೂ ಕೂಡ ಈ ಬಗ್ಗೆ ಮಾತನಾಡಿ, ನಿಮ್ಮ ದೂರನ್ನು ನಾವು ತುಂಬಾ ಗಂಭೀರವಾಗಿ ಪರಿಗಣಿಸಿದ್ದೇವೆ. ಕೂಡಲೇ ಎಲ್ಲವನ್ನೂ ಸರಿಪಡಿಸಿಕೊಡಲಾಗುವುದು ಎಂದು ಆಶ್ವಾಸನೆಯನ್ನೂ ಕೂಡ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment