ಅಬ್ಬಬ್ಬಾ ರಿಲೀಸ್ ಆಗಿರೋ ಮೊದಲ ಹಾಡಿನಲ್ಲಿ ರಗಡ್ ಲುಕ್ನಲ್ಲಿ ಐಕಾನ್ ಸ್ಟಾರ್
ಕೊನೆಗೂ ಬಿಡುಗಡೆ ಆಯ್ತು ಬಹುನಿರೀಕ್ಷಿತ ಪುಷ್ಪ 2 ಸಿನಿಮಾದ ಮೊದಲ ಸಾಂಗ್
ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಪುಷ್ಪ 2 ಚಿತ್ರದ ಹೊಸ ಹಾಡು
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರ ಬಹುನಿರೀಕ್ಷಿತ ಪುಷ್ಪ 2: ದಿ ರೂಲ್ ಸಿನಿಮಾದ ಮೊದಲ ಹಾಡು ಇದೀಗ ರಿಲೀಸ್ ಆಗಿದೆ. ಅಬ್ಬಬ್ಬಾ ರಿಲೀಸ್ ಆಗಿರೋ ಪುಷ್ಪ 2 ಸಿನಿಮಾದ ಮೊದಲ ಹಾಡಿನಲ್ಲೇ ಅಲ್ಲು ಅರ್ಜುನ್ ಫ್ಯಾನ್ಸ್ಗೆ ಕಿಕ್ ಕೊಟ್ಟಿದ್ದಾರೆ. ಹೌದು, ಮತ್ತೊಮ್ಮೆ ಬಾಕ್ಸ್ಆಫೀಸ್ ಉಡೀಸ್ ಮಾಡೋದಕ್ಕೆ ಭರ್ಜರಿಯಾಗಿ ತಯಾರಿ ನಡೆಸುತ್ತಿದ್ದ ಪುಷ್ಪ 2 ಚಿತ್ರತಂಡ ಹೊಸ ಹಾಡನ್ನು ರಿಲೀಸ್ ಮಾಡಿ ಅಭಿಮಾನಿಗಳ ಗಮನ ತನ್ನತ್ತ ಸೆಳೆಯುತ್ತಿದ್ದಾರೆ.
ಇದನ್ನೂ ಓದಿ: PushpaPushpa: ಪುಷ್ಪ 2 ಫ್ಯಾನ್ಸ್ಗೆ ಬಿಗ್ ಅಪ್ಡೇಟ್.. ಮೊದಲ ಹಾಡು ರಿಲೀಸ್ ಯಾವಾಗ?
ಹೌದು, ಇಷ್ಟು ದಿನ ಪುಷ್ಪ ಸಿನಿಮಾದ ಅಪ್ಡೇಟ್ಸ್ಗಾಗಿ ಕಾಯುತ್ತಿದ್ದ ಅಭಿಮಾನಿಗಳು ಮೊದಲ ಹಾಡನ್ನು ಕೇಳಿ ಫುಲ್ ಖುಷ್ ಆಗಿದ್ದಾರೆ. ಮೊನ್ನೆಯಷ್ಟೇ ಈ ಸಿನಿಮಾದ ಟೀಸರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ್ದ ಚಿತ್ರತಂಡ ಇದೀಗ ಪುಷ್ಪ ಪುಷ್ಪ ಪುಷ್ಪರಾಜ್ ಫುಲ್ ಸಾಂಗ್ ಬಿಡುಗಡೆಯಾಗಿದೆ. ಹೊಸ ಸಾಂಗ್ನಲ್ಲಿ ಐಕಾನ್ ಸ್ಟಾರ್ ಖಡಕ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಮೊದ ಮೊದಲು ಕೆಂಪು ಬಣ್ಣದ ಕಾರಿನಿಂದ ಇಳಿದ ಅಲ್ಲು ಅರ್ಜುನ್ ರಗಡ್ ಆಗಿ ಬರುತ್ತಿರುತ್ತಾರೆ.
ಆಗ ನೋಡಿ ಬರೋದೇ ಪುಷ್ಪ ಪುಷ್ಪ ಪುಷ್ಪ ಪುಷ್ಪ ಪುಷ್ಪರಾಜ್ ಎಂದು ಶುರುವಾದ ಹಾಡು ನೀ ಗಡ್ಡ ಹಂಗೆ ಸವರುತ್ತಿದ್ರೆ ದೇಶವೇ ಹೆದರುತ್ತಿತ್ತಂತೆ, ನೀ ಬುಜವ ಎತ್ತಿ ನಡೆಯುತ್ತಿದ್ರೆ ಹುಲಿಯೇ ಬೆದರುತ್ತಿತ್ತಂತೆ ಎಂಬ ಟ್ರಾಕ್ ಸಖತ್ ಹವಾ ಕ್ರಿಯೇಟ್ ಮಾಡುತ್ತಿದೆ. ಈ ಹಾಡಿನಲ್ಲಿ ನಟನ ಶೂ ಬಹಳ ವಿಶೇಷವಾಗಿದೆ. ಪುಷ್ಪ 1ರಲ್ಲಿ ನಟ ಚಪ್ಪಲಿ ಹಾಕಿಕೊಂಡು ತನ್ನದೇಯಾದ ಸ್ಟೈಲ್ನಲ್ಲಿ ಹೆಚ್ಚೆ ಹಾಕಿದ್ದರು. ಇದೀಗ ರಿಲೀಸ್ ಆಗಿರೋ ಸಾಂಗ್ನಲ್ಲಿ ಪುಷ್ಪರಾಜ್ ಸಖತ್ ಆಗಿರೋ ಶೂಗಳನ್ನು ಧರಿಸಿದ್ದಾರೆ. ಜೊತೆಗೆ ಪುಷ್ಪರಾಜ್ನ ಸ್ಟೆಪ್ಗೆ ಅಭಿಮಾನಿಗಳು ಕಳೆದುಹೋಗಿದ್ದಾರೆ. ಈ ಹಾಡಂತೂ ದೊಡ್ಡ ಹೈಪ್ ಕ್ರಿಯೇಟ್ ಮಾಡುವುದರಲ್ಲಿ ಯಾವುದೇ ಅನುಮಾನವೇ ಇಲ್ಲ.
ಸದ್ಯ ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಅಭಿಮಾನಿಗಳಲ್ಲಿ ಪುಷ್ಪ 2 ಸಿನಿಮಾದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಸದ್ಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪುಪ್ಪ 2 ಸಿನಿಮಾ ಆಗಸ್ಟ್ 15ರಂದು ತೆರೆಗೆ ಬರಲಿದೆ. ಈ ಬಹುನೀರಿಕ್ಷಿತ ಸಿನಿಮಾದಲ್ಲಿ ಅಲ್ಲು ಅರ್ಜುನ್ಗೆ ಜೋಡಿಯಾಗಿ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಸೇರಿದಂತೆ ಧನಂಜಯ, ಫಹಾದ್ ಫಾಸಿಲ್, ಜಗದೀಶ್ ಪ್ರತಾಪ್ ಭಂಡಾರಿ, ಜಗಪತಿ ಬಾಬು, ರಾವ್ ರಮೇಶ್, ಅಜಯ್, ಮೈಮ್ ಗೋಪಿ, ಸುನಿಲ್, ಅನಸೂಯಾ ಭಾರದ್ವಾಜ್, ಶ್ರೀತೇಜ್, ಬ್ರಹ್ಮಾಜಿ ಮುಂತಾದವರು ನಟಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ