newsfirstkannada.com

ಮತ್ತಷ್ಟೂ ಹೆಚ್ಚಾಯ್ತು ಪುಷ್ಪ- 2 ಮೇಲಿನ ನಿರೀಕ್ಷೆ.. ಆ ಒಂದು ಸೀನ್​ಗಾಗಿ ಎಷ್ಟು ಕೋಟಿ ಖರ್ಚು ಮಾಡಿದ್ರು ಗೊತ್ತಾ?

Share :

Published April 12, 2024 at 6:23am

Update April 12, 2024 at 6:47am

    ಪುಷ್ಪ 2 ಸೀಕ್ವೆಲ್ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿರೋ ಫ್ಯಾನ್ಸ್​

    ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹುಟ್ಟುಹಬ್ಬದಂದೇ ಪುಷ್ಪ-2 ಟೀಸರ್ ಔಟ್

    ಅಭಿಮಾನಿಗಳ ಮೈ ರೋಮಾಂಚನಗೊಳಿಸುವಂತಿದೆ ಸ್ಟೈಲೀಶ್​ ಸ್ಟಾರ್ ನಟನೆ

ಟಾಲಿವುಡ್ ಡ್ಯಾಷಿಂಗ್ ಡೈರೆಕ್ಟರ್ ಸುಕುಮಾರ್ ಹಾಗೂ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತೊಮ್ಮೆ ಬಾಕ್ಸಾ ಆಫೀಸ್ ಉಡೀಸ್​ ಮಾಡೋದಿಕ್ಕೆ ಭರ್ಜರಿಯಾಗಿ ಸಜ್ಜಾಗ್ತಿದ್ದಾರೆ. ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2: ದಿ ರೂಲ್ ಸಿನಿಮಾಗಾಗಿ ಎಲ್ಲಾ ಸಿನಿ ಪ್ರಿಯರು ಕಾತುರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ: ಅಬ್ಬಾ..! ಮಹಾಕಾಳಿ ಅವತಾರದಲ್ಲಿ ಅಬ್ಬರಿಸಿದ ಅಲ್ಲು ಅರ್ಜುನ್​.. ಪುಷ್ಪ-2 ಸಿನಿಮಾದ ಟೀಸರ್​ ಔಟ್​

ಮೊನ್ನೆಯಷ್ಟೇ ಅಲ್ಲು ಅರ್ಜುನ್ ಹುಟ್ಟುಹಬ್ಬದ ಪ್ರಯುಕ್ತ ಪುಷ್ಪ 2 ದಿ ರೂಲ್ ಸಿನಿಮಾದ ಟೀಸರ್ ರಿಲೀಸ್​ ಆಗಿತ್ತು. ರಿಲೀಸ್​​ ಆಗಿ ಕೆಲವೇ ಗಂಟೆಗಳಲ್ಲಿ ಮಿಲಿಯನ್​ ಗಟ್ಟಲೆ ವೀವ್ಸ್​ ಕೂಡ ಪಡೆದುಕೊಂಡಿತ್ತು. ಹೀಗಾಗಿ ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಸುಕುಮಾರ್ ಕಾಂಬಿನೇಷನ್‌ ಪುಷ್ಪ 2: ದಿ ರೂಲ್ ಸಿನಿಮಾದ ಮೇಲೆ ಅಭಿಮಾನಿಗಳಲ್ಲಿ ನಿರೀಕ್ಷೆ ದುಪ್ಪಟ್ಟಾಗಿದೆ.

ಇನ್ನು, ರಿಲೀಸ್ ಆಗಿದ್ದ ಟೀಸರ್‌ನಲ್ಲಿ ಅಲ್ಲು ಅರ್ಜುನ್ ಗಂಗಮ್ಮ ಜಾತ್ರೆಯಲ್ಲಿ ಕಾಳಿ ಅವತಾರದಲ್ಲಿ ಸೀರೆಯುಟ್ಟು ಫೈಟಿಂಗ್​ ಮಾಡಿದ್ದರು. ಆಗ ನೆಟ್ಟಿಗರ ಗಮನ ಗಂಗಮ್ಮ ಜಾತ್ರೆಯ ಸೆಟ್ ಮೇಲೆ ನೆರೆದಿತ್ತು. ಇದೀಗ ಈ ಸೆಟ್‌ ಬಗ್ಗೆಯೇ ಸಾಮಾಜಿಕ ಜಾಲತಾಣದಲ್ಲಿ ಜೋರು ಚರ್ಚೆ ಶುರುವಾಗಿದೆ. ಹೌದು, ಪುಷ್ಪ 2: ದಿ ರೂಲ್ ಸಿನಿಮಾದ ಗಂಗಮ್ಮ ಜಾತ್ರೆಯ ಸೀನ್‌ಗಾಗಿಯೇ ಡೈರೆಕ್ಟರ್ ಸುಕುಮಾರ್ ಅವರು ಬರೋಬ್ಬರಿ 60 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆಯಂತೆ.

ಇದನ್ನೂ ಓದಿ: ಚುನಾವಣೆ ಹೊತ್ತಲ್ಲಿ ಉಪಮುಖ್ಯಮಂತ್ರಿ ಶಿವಕುಮಾರ್​ಗೆ ಬಿಗ್ ಶಾಕ್ ಕೊಟ್ಟ ಲೋಕಾಯುಕ್ತ..!

ಇದನ್ನೂ ಓದಿ: ರಾವಣನ ಪಾತ್ರದಲ್ಲಿ ಯಶ್ ನಟಿಸುತ್ತಿಲ್ಲ, ಆದರೆ.. ಬಾಲಿವುಡ್​​ನ ರಾಮಾಯಣ ಚಿತ್ರದಲ್ಲಿ ಯಶ್ ಪಾತ್ರ ಏನು..?

ಸದ್ಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪುಪ್ಪ 2 ಸಿನಿಮಾ ಆಗಸ್ಟ್ 15ರಂದು ತೆರೆಗೆ ಬರಲಿದ್ದು, ಇನ್ನು ಬಹುನೀರಿಕ್ಷಿತ ಸಿನಿಮಾದಲ್ಲಿ ಅಲ್ಲು ಅರ್ಜುನ್​ಗೆ ಜೋಡಿಯಾಗಿ ನ್ಯಾಷನಲ್​ ಕ್ರಷ್ ರಶ್ಮಿಕಾ ಮಂದಣ್ಣ ಸೇರಿದಂತೆ ಧನಂಜಯ, ಫಹಾದ್ ಫಾಸಿಲ್, ಜಗದೀಶ್ ಪ್ರತಾಪ್ ಭಂಡಾರಿ, ಜಗಪತಿ ಬಾಬು, ರಾವ್ ರಮೇಶ್, ಅಜಯ್, ಮೈಮ್ ಗೋಪಿ, ಸುನಿಲ್, ಅನಸೂಯಾ ಭಾರದ್ವಾಜ್, ಶ್ರೀತೇಜ್, ಬ್ರಹ್ಮಾಜಿ ಮುಂತಾದವರು ನಟಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮತ್ತಷ್ಟೂ ಹೆಚ್ಚಾಯ್ತು ಪುಷ್ಪ- 2 ಮೇಲಿನ ನಿರೀಕ್ಷೆ.. ಆ ಒಂದು ಸೀನ್​ಗಾಗಿ ಎಷ್ಟು ಕೋಟಿ ಖರ್ಚು ಮಾಡಿದ್ರು ಗೊತ್ತಾ?

https://newsfirstlive.com/wp-content/uploads/2024/04/pushpa-24.jpg

Load More