Pushpa 2: The Rule ಸಿನಿಮಾಗೆ ದೊಡ್ಡ ಸಂಕಷ್ಟ.. ರಿಲೀಸ್​ಗೂ ಮುನ್ನವೇ ಅನುಮಾನ ಶುರು..!

author-image
Ganesh
Updated On
Pushpa 2: The Rule ಸಿನಿಮಾಗೆ ದೊಡ್ಡ ಸಂಕಷ್ಟ.. ರಿಲೀಸ್​ಗೂ ಮುನ್ನವೇ ಅನುಮಾನ ಶುರು..!
Advertisment
  • ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ಚಿತ್ರ
  • ಆಗಸ್ಟ್ 15 ರಂದು ತೆರೆಗೆ ತರಲು ನಿರ್ಧರಿಸಿದೆ ಚಿತ್ರತಂಡ
  • ಅಲ್ಲು ಅರ್ಜುನ್ ಸಿನಿಮಾಗೆ ಎದುರಾದ ತಲೆನೋವು ಏನು?

ತೆಲಂಗಾಣ ಹಾಗೂ ಆಂಧ್ರ ಪ್ರದೇಶದಲ್ಲಿ ಪುಷ್ಪ ಚಾಪ್ಟರ್ 2 ಸಿನಿಮಾನ ಖರೀದಿ ಮಾಡೋಕೆ ಯಾವ ವಿತರಕರು ಮುಂದಾಗ್ತಿಲ್ಲವಂತೆ. ತೆಲುಗು ರಾಜ್ಯಗಳಲ್ಲಿ ಪುಷ್ಪ ಸಿನಿಮಾ ರಿಲೀಸ್ ಮಾಡಲು ನಿರ್ಮಾಪಕರು ಹೆಚ್ಚು ಡಿಮ್ಯಾಂಡ್​ ಮಾಡ್ತಿರುವ ಕಾರಣ, ವಿತರಕರು ಯಾರೂ ಧೈರ್ಯ ಮಾಡ್ತಿಲ್ಲ ಎನ್ನಲಾಗಿದೆ.

ಇದನ್ನೂ ಓದಿ:ಕೊಡಲಿಯಿಂದ ಕೊಚ್ಚಿ ಅಪ್ಪ-ಅಮ್ಮ, ಹೆಂಡತಿ, ಮಗು ಸೇರಿ ಒಂದೇ ಕುಟುಂಬ 8 ಮಂದಿಯ ಬರ್ಬರ ಹತ್ಯೆ

publive-image

ಪುಷ್ಪ ಮೊದಲ ಚಾಪ್ಟರ್​ ರಿಲೀಸ್ ಆದಾಗ, ತೆಲುಗು ಡಿಸ್ಟ್ರುಬ್ಯೂಟರ್​ಗೆ ನಷ್ಟ ಆಗಿತ್ತು. ಹಾಗಾಗಿ ಹೆಚ್ಚು ಹಣ ನೀಡಿ ಸಿನಿಮಾ ಖರೀದಿ ಮಾಡಿ ಲಾಸ್ ಆದರೆ ನಷ್ಟ ತುಂಬಿ ಕೊಡುವ ಭರವಸೆ ಕೊಡದ ಕಾರಣ ವಿತರಕರು ಹಿಂದೇಟು ಹಾಕ್ತಿದ್ದಾರೆ ಎನ್ನಲಾಗಿದೆ.

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ಚಿತ್ರವು ಆಗಸ್ಟ್ 15 ರಂದು ತೆರೆಗೆ ಬರುತ್ತಿದೆ. ಸುಮಾರು 500 ಕೋಟಿ ಮೌಲ್ಯದ ಈ ಚಿತ್ರಕ್ಕೆ ಸುಕಮಾರ್ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಇದನ್ನೂ ಓದಿ:T20 ವಿಶ್ವಕಪ್​ ತಂಡದಲ್ಲಿ 5 ಐಪಿಎಲ್ ಫ್ಲಾಪ್ ಸ್ಟಾರ್​.. ರೋಹಿತ್ ಪಡೆಗೆ ಇವರದ್ದೇ ಚಿಂತೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment