newsfirstkannada.com

ಅವರು 1 ಲಕ್ಷ ಪೆನ್​ ಡ್ರೈವ್ ರೆಡಿ​ ಮಾಡಿಸಿದ್ದಾರಂತೆ; ಆರ್​ ಅಶೋಕ್ ​ಹೀಗೆ ಹೇಳಿದ್ದು ಯಾರಿಗೆ?

Share :

Published May 7, 2024 at 2:57pm

  ಹೆಣ್ಣು ಮಕ್ಕಳ ಮಾನ ಮರ್ಯಾದೆಯನ್ನ ವಿಶ್ವಮಟ್ಟದಲ್ಲಿ ಹರಾಜು ಹಾಕಿದ್ದಾರೆ

  ಶಿವರಾಮೇಗೌಡರವರು ಯಾವ ಪಾರ್ಟಿಯಲ್ಲಿದ್ದಾರೆ ಅಂತ ನಮಗೆ ಗೊತ್ತಿಲ್ಲ

  ಕಾಂಗ್ರೆಸ್​​ ಒಂಥರಾ ಮನೆಹಾಳು ಪಾರ್ಟಿಯಾಗಿದೆ ಎಂದು ಹೇಳಿದ ಆರ್​ ಅಶೋಕ್​

ಕಾಂಗ್ರೆಸ್​​ ಒಂಥರಾ ಮನೆಹಾಳು ಪಾರ್ಟಿಯಾಗಿದೆ. ಹೆಣ್ಣು ಮಕ್ಕಳ ಮಾನ ಮರ್ಯಾದೆಯನ್ನ ವಿಶ್ವಮಟ್ಟದಲ್ಲಿ ಹರಾಜು ಹಾಕಿದ್ದಾರೆ. ಈ ಪಾಪ ಕಾಂಗ್ರೆಸ್​ಗೆ ಸುತ್ತಿಕೊಳ್ಳುತ್ತೆ. ಈ ಪಾದಿಂದ ಕರ್ನಾಟಕದಲ್ಲಿ ಕಾಂಗ್ರೆಸ್​ ಸರ್ಕಾರ ಸರ್ವನಾಶ ಆಗುತ್ತೆ ಎಂದು ವಿರೋಧ ಪಕ್ಷದ ನಾಯಕ ಆರ್​ ಅಶೋಕ್​ ಹೇಳಿದ್ದಾರೆ.

ಬಿಸಿ ಎಣ್ಣೆ ಕೆಂಡದ ಮೇಲೆ ಬಿದ್ದ ಪರಿಸ್ಥಿತಿಯಾಗಿದೆ. ಅವರೇನು ತಿಳಿದುಕೊಂಡಿದ್ರು ಅಂದ್ರೆ ನಮ್ಮನ್ನ ಸೇಫ್​ ಮಾಡ್ತಾರೆ ಅಂತ. ಆದ್ರೆ ಕಾಂಗ್ರೆಸ್​ನವರು ಅದನ್ನು ಮೂರಾಬಟ್ಟೆ ಮಾಡಿ, 1 ಲಕ್ಷಕ್ಕೂ ಹೆಚ್ಚು ಪೆನ್​ ಡ್ರೈವ್​ ಮಾಡಿಸಿದ್ದಾರಂತೆ. ಅಷ್ಟೊಂದು ದುಡ್ಡು ಎಲ್ಲಿಂದ ಬಂತು. ಕೋಟ್ಯಾಂತರ ಹಣ ಹಂಚೋಕೆ, ತಯಾರು ಮಾಡೋಕೆ ಹಣ ಯಾರು ಕೊಟ್ರು?. ಸಂತ್ರಸ್ತೆಯರು ಕೊಡ್ತಾರಾ?, ಅಪರಾಧಿ ಕೊಡ್ತಾರೆ. ಎಲ್ಲ ಕೊಟ್ಟಿರೋದು ಸರ್ಕಾರ. ಅಂದ್ರೆ ಇದರ ಹಿಂದೆ ದುಡ್ಡಿನ ವ್ಯವಹಾರ ಕೂಡ ನಡೆದಿದೆ. ಒಂದು ರೀತಿ ಕೇಂದ್ರ ಸರ್ಕಾರ, ನರೇಂದ್ರ ಮೋದಿಗೆ ಮುಜುಗರ ತರಬೇಕು ಮಾಡಿರೋ ಪ್ಲಾನ್​ ಎಂದು ಆರ್​ ಅಶೋಕ್ ಹೇಳಿದ್ದಾರೆ.

ಬಳಿಕ ಮಾತನಾಡಿದ ಆರ್​ ಅಶೋಕ್, ಶಿವರಾಮೇಗೌಡರವರು ಯಾವ ಪಾರ್ಟಿಯಲ್ಲಿದ್ದಾರೆ ಅಂತ ನಮಗೆ ಗೊತ್ತಿಲ್ಲ. ಕಾಂಗ್ರೆಸ್​​ನಲ್ಲಿ 5 ಬಾರಿ ಸೇರಿದ್ದಾರೆ, ಬಿಜೆಪಿ 5 ಬಾರಿ ಸೇರಿದ್ದಾರೆ. ಜನತಾದಳಕ್ಕೆ 5 ಬಾರಿ ಸೇರಿದ್ದಾರೆ. ಹಾಗಾಗಿ ಅವರು ಯಾವ ಪಾರ್ಟಿಯಲ್ಲಿ ಇದ್ದಾರೆ ಅಂತ ನನಗಂತೂ ಗೊತ್ತಿಲ್ಲ. ಬಿಜೆಪಿಯಲ್ಲಿ ಇದ್ರೆ ಡಿಕೆಶಿ ಮನೆಗೆ ಯಾಕೆ ಹೋಗ್ಬೇಕು?. ಅದನ್ನ ಅನುಮತಿ ತೆಗೋಬೇಕಲ್ವಾ ಎಂದಿದ್ದಾರೆ.

ಇದನ್ನೂ ಓದಿ: ಯಾವೆಲ್ಲಾ ವಿಡಿಯೋ ಬಿಡ್ಬೇಕು ಅಂತ ಟಿಕ್ ಹಾಕಿದ್ಯಾರು?; ಹೆಚ್​ಡಿಕೆ ಸ್ಫೋಟಕ ಹೇಳಿಕೆ

ಸಿದ್ದರಾಮಯ್ಯನವರ ಸ್ಟ್ರಾಟಜಿಯೇ ಒಕ್ಕಲಿಗರ ಸರ್ವನಾಮ ಮಾಡಬೇಕು ಎಂಬುದು. ಹಿಂದೆ ವಿರೇಂದ್ರ ಪಾಟೀಲರನ್ನು ಇಳಿಸಿ ಲಿಂಗಾಯತರಿಗೆ ಅವಮಾನ ಮಾಡಿದ್ರು. ಹಿಂದೆ ಯಾವ ರೀತಿ ಅವಮಾನ ಆಗಿದೆ ಅದೇ ರೀತಿ ಈಗ ಒಕ್ಕಲಿಗರಿಗೆ ಆಗ್ತಿದೆ. ಇದು ಸ್ಪಷ್ಟವಾಗಿ ಕಾಣ್ತಿದೆ ಎಂದು ಆರ್​ ಅಶೋಕ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅವರು 1 ಲಕ್ಷ ಪೆನ್​ ಡ್ರೈವ್ ರೆಡಿ​ ಮಾಡಿಸಿದ್ದಾರಂತೆ; ಆರ್​ ಅಶೋಕ್ ​ಹೀಗೆ ಹೇಳಿದ್ದು ಯಾರಿಗೆ?

https://newsfirstlive.com/wp-content/uploads/2024/05/R-Ashok.jpg

Load More