newsfirstkannada.com

ಪ್ರಜ್ವಲ್ ರೇವಣ್ಣ ವಾಪಸ್ ಬರ್ತಾ ಇರೋದು ಟೂ ಲೇಟ್ ಎಂದ ಆರ್. ಅಶೋಕ್​; ಕಾರಣವೇನು?

Share :

Published May 27, 2024 at 5:54pm

    ಒಂದು ತಿಂಗಳ ಬಳಿಕ ವಿಡಿಯೋದಲ್ಲಿ ಪ್ರತ್ಯಕ್ಷವಾದ ಹಾಸನ ಸಂಸದ ಪ್ರಜ್ವಲ್ ರೇವಣ್ಣ

    ಪ್ರಜ್ವಲ್ ರೇವಣ್ಣ ಈ ಕೆಲಸವನ್ನು ಮೊದಲೇ ಮಾಡಬೇಕಿತ್ತು ಆದರೆ..

    ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ದಾರೆ, ಅವರಿಗೆ ಶಿಕ್ಷೆ ಆಗಬೇಕು- ಆರ್​ ಅಶೋಕ್​

ಬೆಂಗಳೂರು: ಹಾಸನದಲ್ಲಿ ವೈರಲ್ ಆದ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಕೊನೆಗೂ ಪ್ರತ್ಯಕ್ಷವಾಗಿದ್ದಾರೆ. ಪ್ರಜ್ವಲ್ ರೇವಣ್ಣ ಬರೋಬ್ಬರಿ ಒಂದು ತಿಂಗಳ ಬಳಿಕ ಪ್ರತ್ಯಕ್ಷವಾಗಿದ್ದಾರೆ. ವಿದೇಶದಲ್ಲಿ ಇದ್ದುಕೊಂಡು ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಪ್ರಜ್ವಲ್ ರೇವಣ್ಣ ಅವರು ರಾಜ್ಯದ ಜನತೆಯಲ್ಲಿ ಕ್ಷಮೆ ಕೇಳಿದ್ದಾರೆ.

ಇದನ್ನೂ ಓದಿ: ‘ನಾನು ಡಿಪ್ರೆಶನ್‌ಗೆ ಹೋಗಿ ಐಸೋಲೇಷನ್‌ಗೆ ಒಳಗಾಗಿದ್ದೆ’- ಪ್ರಜ್ವಲ್​ ರೇವಣ್ಣ ವಿಡಿಯೋದಲ್ಲಿ ಹೇಳಿದ್ದೇನು?

ಪ್ರಜ್ವಲ್ ರೇವಣ್ಣ ವಿಡಿಯೋ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್​ ಅಶೋಕ್​ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಮಾತಾಡಿದ ಅವರು, ಪ್ರಜ್ವಲ್ ರೇವಣ್ಣ ವಿಡಿಯೋ ಬಿಡುಗಡೆ ಮಾಡಿ ಬರ್ತೀನಿ ಅಂದಿದ್ದರು. ಆದ್ರೆ ಮೊದಲೇ ಈ ಕೆಲಸ ಮಾಡಬೇಕಿತ್ತು. ಮೊದಲೇ ಹೇಳಿದ್ರೆ ಅದಕ್ಕೆ ಒಂದು ಅರ್ಥ‌ ಈಗ ಟೂ ಲೇಟ್ ಅಂತ ಅನಿಸುತ್ತೆ. ಈಗಾಲಾದರೂ ಹೇಳಿದ್ದಾರಲ್ಲಾ? ಬೇಗ ಬಂದು ತನಿಖೆಗೆ ಸಹಕರಿಸಲಿ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಷಡ್ಯಂತ್ರ ಮಾಡಿರೋದು ಕಣ್ಣಿಗೆ ಕಾಣುತ್ತಿದೆ. ಷಡ್ಯಂತ್ರ ಮಾಡಿರೋದು ನಿಜ. ಆರೋಪಿಗಳನ್ನು ಇನ್ನೂ ಅರೆಸ್ಟ್ ಮಾಡಿಲ್ಲ. ಕಾಂಗ್ರೆಸ್ ಒಕ್ಕಲಿಗರ ಮುಗಿಸುವ ಷಡ್ಯಂತ್ರ ಮಾಡಿದ್ದಾರೆ. ಅದರ ಒಂದು ಭಾಗ ಇದು. ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ದಾರೆ. ಅವರಿಗೆ ಶಿಕ್ಷೆ ಆಗಬೇಕು ಇದು ಬಿಜೆಪಿ ನಿಲುವು. ಈ ಪ್ರಕರಣ ಸಂಬಂಧ ತನಿಖೆಯಾಗಬೇಕು . ಲೇಟಾಗಿ ಆದ್ರೂ ಪ್ರಜ್ವಲ್ ಬರೋದಕ್ಕೆ ಒಪ್ಪಿಕೊಂಡಿದ್ದಾರೆ. ಎಸ್​ಐಟಿ ರಚನೆ ಮಾಡಿರೋದು ಕಾಂಗ್ರೆಸ್‌ನವರನ್ನು ರಕ್ಷಣೆ ಮಾಡಿಕೊಳ್ಳೋದಕ್ಕೆ ಅಷ್ಟೇ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಜ್ವಲ್ ರೇವಣ್ಣ ವಾಪಸ್ ಬರ್ತಾ ಇರೋದು ಟೂ ಲೇಟ್ ಎಂದ ಆರ್. ಅಶೋಕ್​; ಕಾರಣವೇನು?

https://newsfirstlive.com/wp-content/uploads/2024/05/r-ashpk.jpg

Load More