newsfirstkannada.com

×

Ind vs Ban; ಅಶ್ವಿನ್​ ಮತ್ತೊಂದು ದಾಖಲೆ.. ಟೀಮ್ ಇಂಡಿಯಾ ಗೆಲ್ಲಲು ಏನ್ ಮಾಡಬೇಕು?

Share :

Published October 1, 2024 at 9:15am

Update October 1, 2024 at 9:20am

    ಓಪನರ್ಸ್​ 18 ಬಾಲ್​ಗಳಲ್ಲಿ ಅರ್ಧಶತಕ ಸಿಡಿಸಿ ವಿಶ್ವದಾಖಲೆ

    ವಿಶೇಷವಾದ ದಾಖಲೆ ಮಾಡಿದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್

    ಜಹೀರ್ ಖಾನ್ ರೆಕಾರ್ಡ್​ ಬ್ರೇಕ್ ಮಾಡಿದ್ರಾ ಚೆನ್ನೈ ಆಟಗಾರ?

ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್​​ನಲ್ಲಿ ಟೀಮ್ ಇಂಡಿಯಾದ ಪ್ಲೇಯರ್ಸ್ ಒಂದಲ್ಲ ಒಂದು ದಾಖಲೆ ನಿರ್ಮಾಣ ಮಾಡುತ್ತಿದ್ದಾರೆ. ಓಪನರ್ಸ್​ ಆಗಿ ಬ್ಯಾಟಿಂಗ್​​ಗೆ ಆಗಮಿಸಿದ್ದ ರೋಹಿತ್, ಜೈಸ್ವಾಲ್ ಕೇವಲ 18 ಬಾಲ್​ಗಳಲ್ಲಿ ಅರ್ಧಶತಕ ಸಿಡಿಸಿ ವಿಶ್ವದಾಖಲೆ ಮಾಡಿದ್ದರು. ಇದರ ಬೆನ್ನಲ್ಲೇ ಆರ್​ ಅಶ್ವಿನ್​ ಮತ್ತೊಂದು ವಿಶೇಷವಾದ ದಾಖಲೆ ಮಾಡಿದ್ದಾರೆ.

ಇದನ್ನೂ ಓದಿ: ಅಮ್ಮನ ಜೊತೆ ಭಾರೀ ಮೊತ್ತದ ಅಪಾರ್ಟ್​​ಮೆಂಟ್ ಖರೀದಿಸಿದ ಸ್ಟಾರ್ ಕ್ರಿಕೆಟರ್.. ಎಷ್ಟು ಕೋಟಿ?

ಉತ್ತರಪ್ರದೇಶದ ಕಾನ್ಪುರದ ಗ್ರೀನ್ ಪಾರ್ಕ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೆಸ್ಟ್​ ಪಂದ್ಯದ 2ನೇ ಇನ್ನಿಂಗ್ಸ್​​ನಲ್ಲಿ ಆರ್​.ಅಶ್ವಿನ್​ 2 ವಿಕೆಟ್ ಪಡೆದು ಅಮೋಘ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ಬಾಂಗ್ಲಾದೇಶದ ವಿರುದ್ಧ ಅತಿ ಹೆಚ್ಚು ವಿಕೆಟ್​ಗಳನ್ನು ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಆರ್​.ಅಶ್ವಿನ್ ಪಾತ್ರರಾಗಿದ್ದಾರೆ. ಈವರೆಗೆ ಬಾಂಗ್ಲಾದ ವಿರುದ್ಧ 31 ವಿಕೆಟ್​ಗಳನ್ನು ಪಡೆದು ಜಹೀರ್ ಖಾನ್ ದಾಖಲೆ ಮಾಡಿದ್ದರು. ಆದರೆ ಇದೀಗ ಈ ದಾಖಲೆಯನ್ನು ಅಶ್ವಿನ್ ಬ್ರೇಕ್ ಮಾಡಿದ್ದು ಬಾಂಗ್ಲಾ ವಿರುದ್ಧ ಒಟ್ಟು 33 ವಿಕೆಟ್​ಗಳನ್ನು ಪಡೆದುಕೊಂಡಿದ್ದಾರೆ. ಇನ್ನು ಇಂದು ಕೊನೆ ದಿನವಾಗಿದ್ದರಿಂದ ಇವತ್ತು ಅಶ್ವಿನ್ ವಿಕೆಟ್ ಪಡೆಯಬಹುದು.

ಇದನ್ನೂ ಓದಿ: ಬಾಂಗ್ಲಾಗೆ ಡಿಚ್ಚಿಕೊಟ್ಟ R ಅಶ್ವಿನ್.. ಇತಿಹಾಸ ನೆನಪಿಸಿದ ಸ್ಟಾರ್ ಆಲ್​​ರೌಂಡರ್..!​ ಏನದು?

ಬಾಂಗ್ಲಾ ವಿರುದ್ಧ ಹೆಚ್ಚು ವಿಕೆಟ್ ಪಡೆದವರು

  • ರವಿಚಂದ್ರನ್ ಅಶ್ವನ್= 33
  • ಜಹೀರ್ ಖಾನ್= 31
  • ಇಶಾಂತ್ ಶರ್ಮಾ= 25
  • ಉಮೇಶ್ ಯಾದವ್= 22

2 ದಿನ ಮಳೆಯಿಂದ ರದ್ದಾಗಿದ್ದ 2ನೇ ಟೆಸ್ಟ್​ 4 ದಿನದಲ್ಲಿ ಟಿ20 ಶೈಲಿಯಲ್ಲಿ ಮನರಂಜನೆ ನೀಡಿತು. ಬಾಂಗ್ಲಾ ಮೊದಲ ಇನ್ನಿಂಗ್ಸ್​​ನಲ್ಲಿ 233 ರನ್​ ಗಳಿಸಿತ್ತು. ಇನ್ನು ಭಾರತದ ಬ್ಯಾಟ್ಸ್​ಮನ್​ಗಳು ಮೊದಲ ಇನ್ನಿಂಗ್ಸ್​ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ್ದರು. ಈ ಮೂಲಕ 285 ರನ್​ ಬಾರಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಸದ್ಯ 2ನೇ ಇನ್ನಿಂಗ್ಸ್​ ಆರಂಭಿಸಿರುವ ಬಾಂಗ್ಲಾದೇಶ 2 ವಿಕೆಟ್​ಗೆ 26 ರನ್​ಗಳನ್ನು ಗಳಿಸಿದೆ. ರವೀಂದ್ರ ಜಡೇಜಾ ಇಡೀ ಟೆಸ್ಟ್ ಕರೀಯರ್​​ನಲ್ಲೇ ಒಟ್ಟು 300 ವಿಕೆಟ್ ಪಡೆದು ಸಾಧನೆ ಮಾಡಿದರು. ಇಂದು ಕೊನೆ ದಿನವಾಗಿದ್ದರಿಂದ ಒಂದು ವೇಳೆ ಮಧ್ಯಾಹ್ನದ ವೇಳೆಗೆ ಬಾಂಗ್ಲಾ ಪ್ಲೇಯರ್ಸ್​ ಅನ್ನು ಆಲೌಟ್ ಮಾಡಿ ಭಾರತ ಟಾರ್ಗೆಟ್ ರೀಚ್ ಮಾಡಿದ್ರೆ ಗೆಲುವು ಸಾಧಿಸಲಿದೆ. ಇಂದು ದಿನ ಪೂರ್ತಿ ಬಾಂಗ್ಲಾದೇಶ ಆಡಿದರೆ ಪಂದ್ಯ ಡ್ರಾ ಆಗಬಹುದು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Ind vs Ban; ಅಶ್ವಿನ್​ ಮತ್ತೊಂದು ದಾಖಲೆ.. ಟೀಮ್ ಇಂಡಿಯಾ ಗೆಲ್ಲಲು ಏನ್ ಮಾಡಬೇಕು?

https://newsfirstlive.com/wp-content/uploads/2024/10/ASHWIN_KOHLI.jpg

Load More