newsfirstkannada.com

×

ಅಮ್ಮನ ಜೊತೆ ಭಾರೀ ಮೊತ್ತದ ಅಪಾರ್ಟ್​​ಮೆಂಟ್ ಖರೀದಿಸಿದ ಸ್ಟಾರ್ ಕ್ರಿಕೆಟರ್.. ಎಷ್ಟು ಕೋಟಿ?

Share :

Published September 25, 2024 at 12:59pm

    ಈ ಪ್ರದೇಶದಲ್ಲಿ ಪ್ರತಿ ಚದರ ಮೀಟರ್​ಗೆ 55,238 ರೂಪಾಯಿ ಇದೆ

    ಕೋಟಿ ಕೋಟಿ ಹಣ ಕೊಟ್ಟು ಐಷಾರಾಮಿ ಖರೀದಿಸಿದ ಪ್ಲೇಯರ್

    ವಾಣಿಜ್ಯ ನಗರಿಯ ಹೃದಯ ಭಾಗದಲ್ಲಿ ಆಸ್ತಿ ಖರೀದಿಸಿದ ಕ್ರಿಕೆಟರ್

ಟೀಮ್ ಇಂಡಿಯಾದ ಯಂಗ್ ಕ್ರಿಕೆಟರ್ ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಯಾವಗಲೂ ಇನ್​ಸ್ಟಾದಲ್ಲಿ ಆ್ಯಕ್ಟಿವ್ ಆಗಿತ್ತಾರೆ. ಕ್ರಿಕೆಟ್​ ಮೈದಾನದಲ್ಲೂ ಭರ್ಜರಿ ಬ್ಯಾಟಿಂಗ್ ಮಾಡುತ್ತಾರೆ. ಪ್ರಸ್ತುತ ಯುವ ಆಟಗಾರ ತನ್ನ ಅಮ್ಮನ ಜೊತೆ ಸೇರಿ ದುಬಾರಿ ಮೊತ್ತ ಕೊಟ್ಟು ಐಷಾರಾಮಿ ಅಪಾರ್ಟ್​ಮೆಂಟ್ ಖರೀದಿ ಮಾಡಿದ್ದಾರೆ.

ಇದನ್ನೂ ಓದಿ: KL ರಾಹುಲ್​​ 8 ವರ್ಷದಿಂದ ಸೆಂಚುರಿ ಸಿಡಿಸಿಲ್ವಾ..? ಕಾನ್ಪುರದ​ ಟೆಸ್ಟ್ ಮೇಲೆ ಕನ್ನಡಿಗನ ಭವಿಷ್ಯ!

ಭಾರತದ ಆಟಗಾರ ಶ್ರೇಯಸ್ ಅಯ್ಯರ್ ತನ್ನ ಕುಟುಂಬದ ಜೊತೆ ಒಳ್ಳೆ ಸ್ನೇಹಿತನಂತೆ ಇರುತ್ತಾರೆ. ಸಹೋದರಿಯನ್ನ ರೇಗಿಸುತ್ತ, ಅಮ್ಮನಿಗೆ ಗುಡ್ ಫ್ರೆಂಡ್ ಆಗಿರುವ ಶ್ರೇಯಸ್ ಅಯ್ಯರ್ ಮುಂಬೈನ ಹೃದಯ ಭಾಗ ಎನಿಸಿರುವ ವರ್ಲಿಯಲ್ಲಿ ಭಾರೀ ಮೊತ್ತದ ಅಪಾರ್ಟ್​ಮೆಂಟ್​ ಖರೀದಿ ಮಾಡಿದ್ದಾರೆ. ಈ ಅಪಾರ್ಟ್​ಮೆಂಟ್​ ಅನ್ನು ತಾನು ಒಬ್ಬನೇ ಖರೀದಿ ಮಾಡಿಲ್ಲ. ಬದಲಿಗೆ ಇದರಲ್ಲಿ ತನ್ನ ತಾಯಿ ರೋಹಿಣಿ ಅಯ್ಯರ್ ಕೂಡ ಪಾಲು ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಪದವೀಧರರಿಗೆ ವಿಮಾ ವಲಯದಲ್ಲಿ ಉದ್ಯೋಗಾವಕಾಶ.. ಅರ್ಜಿ ಆರಂಭ, ಎಷ್ಟು ಹುದ್ದೆ ಖಾಲಿ ಇವೆ?

ಮುಂಬೈನ ವರ್ಲಿಯಲ್ಲಿರುವ ಅಪಾರ್ಟ್​ಮೆಂಟ್ ಒಟ್ಟು 525 ಸ್ಕ್ವಾರ್​ಫೀಟ್ ಇದ್ದು ಇದಕ್ಕೆ ಒಟ್ಟು 2 ಕೋಟಿ 90 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ. ಇದೆ ಸೆಪ್ಟೆಂಬರ್ 19ರಂದು ಆಸ್ತಿ, ಅಯ್ಯರ್ ಹೆಸರಿಗೆ ಬಂದಿದ್ದು ರಿಜಿಸ್ಟ್ರೇಷನ್ ಕೂಡ ಪೂರ್ಣಗೊಂಡಿದೆ ಎನ್ನಲಾಗಿದೆ. ಇನ್ನು ಮುಂಬೈನ ಗಗನಚುಂಬಿ ಬೀಲ್ಡಿಂಗ್​​ಗಳಲ್ಲಿ ಒಂದಾದ ಲೋಧಾ ವರ್ಲ್ಡ್ ಟವರ್ಸ್‌ನಲ್ಲಿ ಈಗಾಗಲೇ ಐಷಾರಾಮಿ ಅಪಾರ್ಟ್‌ಮೆಂಟ್ ಹೊಂದಿದ್ದಾರೆ. ಇದರ ಜೊತೆಗೆ ಇದೀಗ ವರ್ಲಿಯಲ್ಲೂ ಖರೀದಿ ಮಾಡಿದ್ದಾರೆ. ವರ್ಲಿಯಲ್ಲಿ ಸ್ಥಳ ಪ್ರತಿ ಚದರ ಮೀಟರ್​ಗೆ 55,238 ರೂಪಾಯಿ ಇದೆ ಎಂದು ರಿಯಲ್​ ಎಸ್ಟೇಟ್ ಮೂಲಗಳು ಹೇಳುತ್ತವೆ.

ಇನ್ನು ಶ್ರೇಯಸ್ ಅಯ್ಯರ್ ಅವರು ವರ್ಲಿಯಲ್ಲಿ ಅಪಾರ್ಟ್​ಮೆಂಟ್​ ಕೊಂಡುಕೊಳ್ಳಲು ಬಲವಾದ ಕಾರಣ ಇದೆ. ಏಕೆಂದರೆ ಈ ವರ್ಲಿ ಭಾಗದಲ್ಲೇ ಸಾಕಷ್ಟು ಸೆಲೆಬ್ರಿಟಿಗಳು, ಸ್ಟಾರ್​ ಕ್ರಿಕೆಟರ್ಸ್, ರಾಜಕಾರಣಿಗಳು, ಉದ್ಯಮಿಗಳು ಸೇರಿದಂತೆ ಗಣ್ಯ ವ್ಯಕ್ತಿಗಳು ಇಲ್ಲಿ ವಾಸವಾಗಿದ್ದರಂತೆ. ಹೀಗಾಗಿಯೇ ಕೋಲ್ಕತ್ತ ಕ್ಯಾಪ್ಟನ್​ ಈ ಪ್ರದೇಶದಲ್ಲಿ ಅಪಾರ್ಟ್​ಮೆಂಟ್ ಕೊಂಡುಕೊಂಡಿದ್ದಾರೆ ಎಂದು ಹೇಳಲಾಗುತ್ತದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಅಮ್ಮನ ಜೊತೆ ಭಾರೀ ಮೊತ್ತದ ಅಪಾರ್ಟ್​​ಮೆಂಟ್ ಖರೀದಿಸಿದ ಸ್ಟಾರ್ ಕ್ರಿಕೆಟರ್.. ಎಷ್ಟು ಕೋಟಿ?

https://newsfirstlive.com/wp-content/uploads/2024/09/Shreyas_Iyer.jpg

Load More