/newsfirstlive-kannada/media/post_attachments/wp-content/uploads/2024/03/Hardik_Rohit-News-1.jpg)
ಸ್ಟಾರ್​ ಆಲ್​ರೌಂಡರ್​​​​ ಹಾರ್ದಿಕ್​ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್​ ಬ್ಯಾಕ್​ ಟು ಬ್ಯಾಕ್​​ 2 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದೆ. ಈ ಬೆನ್ನಲ್ಲೇ ಮುಂಬೈ ಇಂಡಿಯನ್ಸ್​​​ ಎರಡು ಗುಂಪಾಗಿದೆ ಅನ್ನೋ ಮಾತುಗಳು ಕೇಳಿ ಬಂದಿವೆ.
ಹೌದು, ಮುಂಬೈ ಇಂಡಿಯನ್ಸ್​​ ತಂಡವು ಮಾಜಿ ಕ್ಯಾಪ್ಟನ್​ ರೋಹಿತ್​ ಶರ್ಮಾ ಮತ್ತು ನೂತನ ನಾಯಕ ಹಾರ್ದಿಕ್​ ಪಾಂಡ್ಯ ಗುಂಪುಗಳಾಗಿ ವಿಭಜನೆ ಆಗಿದೆ. ಜಸ್ಪ್ರೀತ್ ಬುಮ್ರಾ, ತಿಲಕ್ ವರ್ಮಾ ಮತ್ತಿತರರು ರೋಹಿತ್​ ಬೆಂಬಲವಾಗಿದ್ದರೆ, ಇಶಾನ್ ಕಿಶನ್ ಹಾರ್ದಿಕ್ ಪಾಂಡ್ಯಗೆ ಬೆಂಬಲವಾಗಿ ನಿಂತಿದ್ದಾರೆ ಎನ್ನಲಾಗಿದೆ. ಮ್ಯಾನೇಜ್ಮೆಂಟ್​ ಕೂಡ ಹಾರ್ದಿಕ್​ ಪರವೇ ಇದೆ.
ಗುಜರಾತ್ ಟೈಟನ್ಸ್ ವಿರುದ್ಧ ಪಂದ್ಯದಲ್ಲಿ ಹಾರ್ದಿಕ್ ರೋಹಿತ್ ಶರ್ಮಾರನ್ನು ನಡೆಸಿಕೊಂಡ ರೀತಿ ನಿಜಕ್ಕೂ ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು. ಹೀಗಾಗಿ ಹಾರ್ದಿಕ್ ಪಾಂಡ್ಯಗೆ ಚಪ್ಪಲಿ ಎಸೆದು ಆಕ್ರೋಶ ಹೊರಹಾಕಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಘಟನೆಯನ್ನು ಅಶ್ವಿನ್​ ಖಂಡಿಸಿದ್ದಾರೆ.
Fans throwing Chappals and Sandals in Live Cricket Screening in Hyderabad.
Outrage is Real. Hardik Pandya is on the radar again of Rohit Sharma fans.#MumbaiIndians#RohitSharma?#SRHvsMI#HardikPandya#Chapri#KavyaMaran#MIvsSRH#SRHvMIpic.twitter.com/fIabUyUjPb
— Khabri_Prasang (@Prasang_) March 27, 2024
ಇದು ಫ್ರಾಂಚೈಸಿ ಮತ್ತು ಪ್ಲೇಯರ್​ ತಪ್ಪಲ್ಲ. ಭಾರತದಲ್ಲಿ ಫ್ಯಾನ್ಸ್ ವಾರ್ ಅಗ್ಲಿ ಆಗುತ್ತಿದೆ. ಇದು ಸಂಪೂರ್ಣ ‘ಸಿನಿಮಾ ಸಂಸ್ಕೃತಿ’. ಈ ಫ್ಯಾನ್ಸ್ ವಾರ್ ಅನ್ನೋದು ದೇಶ ಬಿಟ್ಟು ಹೋಗಬೇಕು ಎಂದರು.
ಇದನ್ನೂ ಓದಿ: Video: ಕೈ ಮೇಲೆ RCB ಪ್ಲೇಯರ್ಸ್​ ಹೆಸರು ಟ್ಯಾಟೂ ಹಾಕಿಸಿಕೊಂಡ ಅಪ್ಪಟ ಅಭಿಮಾನಿ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us