newsfirstkannada.com

ಚಂದನ್ ಶೆಟ್ಟಿ, ನಿವೇದಿತಾ ಡಿವೋರ್ಸ್ ಆಗಿದ್ದು ಯಾಕೆ? ಈ ಬಗ್ಗೆ ನಟಿ ರಾಗಿಣಿ ಹೇಳಿದ್ದೇನು?

Share :

Published June 9, 2024 at 3:36pm

Update June 9, 2024 at 3:46pm

  ಚಂದನ್, ನಿವೇದಿತಾ ಡಿವೋರ್ಸ್ ಸುದ್ದಿ ಕೇಳಿ ಅಭಿಮಾನಿಗಳು ಶಾಕ್!

  ಡಿವೋರ್ಸ್ ಕೊಟ್ಟು ಮಾಜಿ ದಂಪತಿಗಳಾದ ಚಂದನ್, ನಿವೇದಿತಾ ಗೌಡ

  ಚಂದನ್, ನಿವೇದಿತಾಗೆ ಒಂದೇ ದಿನದಲ್ಲಿ ಡಿವೋರ್ಸ್ ಸಿಗಲು ಕಾರಣ ಏನು

ಕನ್ನಡದ ನಟ, ಗಾಯಕ​​ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಡಿವೋರ್ಸ್‌ಗೆ ಮುಂದಾಗಿದ್ದಾರೆ. ನಾಲ್ಕು ವರ್ಷದ ದಾಂಪತ್ಯ ಜೀವನಕ್ಕೆ ಈ ಕ್ಯೂಟ್ ಕಪಲ್‌ ದಿಢೀರ್ ಅಂತ ಬ್ರೇಕ್ ಹಾಕಿದ್ದಾರೆ. ಈ ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದಿದ್ದಾರೆ. ಚಂದನ್ ಶೆಟ್ಟಿ, ನಿವೇದಿತಾ ಗೌಡ ವಿಚ್ಛೇದನ ಮಂಜೂರು ಮಾಡಿ ಬೆಂಗಳೂರು ಕೌಟುಂಬಿಕ ನ್ಯಾಯಾಲಯ ಆದೇಶ ಹೊರಡಿಸಿದೆ.

ಇದನ್ನೂ ಓದಿ: ಒಂದು ವರ್ಷದಿಂದಲೇ ಡಿವೋರ್ಸ್ ಪ್ಲಾನ್‌.. ಚಂದನ್ ನಂಗೆ ಬೇಡ ಅಂತ ನಿವೇದಿತಾ ಡಿಸೈಡ್ ಮಾಡಿದ್ದೇಕೆ?

ಇದೀಗ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಡಿವೋರ್ಸ್ ಬಗ್ಗೆ ಸ್ಯಾಂಡಲ್​​ವುಡ್​ ನಟಿ ರಾಗಿಣಿ ದ್ವಿವೇದಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಟಿ ರಾಗಿಣಿ, ಅವರ ವೈಯಕ್ತಿಕ ವಿಚಾರಕ್ಕೆ ನಾನು ಕಾಮೆಂಟ್ ಮಾಡಲ್ಲ. ಬದುಕು ತುಂಬಾ ಸುಲಭವಲ್ಲ. ಜೀವನದಲ್ಲಿ ಏರಿಳಿತಗಳು ಇರುತ್ತವೆ. ನಾವೇನು ಕಾಂಟ್ರುಬ್ಯೂಟ್ ಮಾಡದೇ ಹೋದರೆ ನಾವು ಕಾಮೆಂಟ್ ಮಾಡೋಕೆ ಹೋಗಬಾರದು ಎಂದು ಖಾಸಗಿ ವಾಹಿನಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು, ಬಿಗ್​ಬಾಸ್​ ಮೂಲಕ ಖ್ಯಾತಿ ಪಡೆದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಸಖತ್​ ಫೇಮಸ್​ ಆಗಿದ್ದರು. ಇದಾದ ಬಳಿಕ 2019ರಲ್ಲಿ ಮೈಸೂರು ದಸರಾ ಕಾರ್ಯಕ್ರಮದ ವೇದಿಕೆಯಲ್ಲಿ ನಿವೇದಿತಾಗೆ ಚಂದನ್ ಪ್ರಪೋಸ್ ಮಾಡಿ ಸಖತ್​ ಸುದ್ದಿಯಲ್ಲಿದ್ದರು. ನಂತರ ಎರಡು ಕುಟುಂಬದ ಒಪ್ಪಿಗೆ ಪಡೆದು 2020ರಲ್ಲಿ ಚಂದನ್ ಮತ್ತು ನಿವೇದಿತಾ ಮೈಸೂರಿನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಇದೀಗ ಮದುವೆಯಾದ ನಾಲ್ಕೇ ವರ್ಷಕ್ಕೆ ಜೋಡಿ ದೂರವಾಗೋ ಮೂಲಕ ಶಾಕ್ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಂದನ್ ಶೆಟ್ಟಿ, ನಿವೇದಿತಾ ಡಿವೋರ್ಸ್ ಆಗಿದ್ದು ಯಾಕೆ? ಈ ಬಗ್ಗೆ ನಟಿ ರಾಗಿಣಿ ಹೇಳಿದ್ದೇನು?

https://newsfirstlive.com/wp-content/uploads/2024/06/ragini.jpg

Load More