/newsfirstlive-kannada/media/post_attachments/wp-content/uploads/2024/06/ROHIT_SHARMA_RAHUL.jpg)
2024ರ T20 ವಿಶ್ವಕಪ್ ಫೈನಲ್ನಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾವನ್ನು 7 ರನ್ಗಳ ಅಂತರದಿಂದ ಸೋಲಿಸುವ ಮೂಲಕ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಸದ್ಯ ಕೋಚ್ ರಾಹುಲ್ ದ್ರಾವಿಡ್ ಹಾಗೂ ಕ್ಯಾಪ್ಟನ್ ರೋಹಿತ್ ಶರ್ಮಾ ಸೇರಿದಂತೆ ಸಹ ಆಟಗಾರರಿಗೆ ಎಲ್ಲೆಡೆಯಿಂದ ಅಭಿನಂದನೆಗಳು ಹರಿದು ಬರುತ್ತಿವೆ. ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಅವರು ಕನ್ನಡಿಗ ರಾಹುಲ್ ದ್ರಾವಿಡ್ ಅವರಿಗೆ ವಿಶೇಷವಾಗಿ ವಿಶ್ ಮಾಡಿದ್ದಾರೆ.
ಇದನ್ನೂ ಓದಿ: ಬಿಕ್ಕಿಬಿಕ್ಕಿ ಕಣ್ಣೀರಿಟ್ಟ ಪಾಂಡ್ಯ.. ಪತ್ನಿ ಅನುಷ್ಕಾ ಶರ್ಮಾಗೆ ವಿಡಿಯೋ ಕಾಲ್ ಮಾಡಿ ಕೊಹ್ಲಿ ಭಾವುಕ
ಪ್ರಧಾನಿ ಮೋದಿಯವರು T20 ವಿಶ್ವಕಪ್ ಅನ್ನು ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನಿಮ್ಮ ಅದ್ಭುತವಾದ ಕೋಚಿಂಗ್ ಪ್ರಯಾಣದಿಂದ ಭಾರತ ತಂಡ ಇಂದು ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ನಿಮ್ಮ ಡೆಡಿಕೆಷನ್, ಕಾರ್ಯತಂತ್ರದಿಂದ ಒಳ್ಳೆಯ ಪ್ರತಿಭೆಗಳನ್ನ ತಂಡದಲ್ಲಿ ಗುರುತಿಸಿದ್ದೀರಿ. ಈ ಕೊಡುಗೆ ಹಾಗೂ ಸ್ಪೂರ್ತಿ ಮುಂದಿನ ಜನರೇಶನ್ಗೂ ಸಲ್ಲುತ್ತದೆ. ಭಾರತ ವಿಶ್ವಕಪ್ ಎತ್ತಿ ಹಿಡಿದಿರುವುದಕ್ಕೆ ನಮಗೆಲ್ಲ ತುಂಬಾ ಖುಷಿ ತಂದಿದೆ. ಆಟಗಾರರನ್ನು ಅಭಿನಂದಿಸುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಪ್ರಧಾನಿ ಮೋದಿಯವರು ಎಕ್ಸ್ ಅಕೌಂಡ್ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ.
ಇದನ್ನೂ ಓದಿ:ಧೋನಿ, ಕೊಹ್ಲಿಯನ್ನೇ ಮೀರಿಸಿದ ರೋಹಿತ್.. T20 ವಿಶ್ವಕಪ್ನಲ್ಲಿ ವರ್ಲ್ಡ್ ರೆಕಾರ್ಡ್ ಮಾಡಿದ ಹಿಟ್ಮ್ಯಾನ್
Rahul Dravid’s incredible coaching journey has shaped the success of Indian cricket.
His unwavering dedication, strategic insights and nurturing the right talent have transformed the team.
India is grateful to him for his contributions and for inspiring generations. We are… pic.twitter.com/8MKSPqztDV
— Narendra Modi (@narendramodi)
Rahul Dravid’s incredible coaching journey has shaped the success of Indian cricket.
His unwavering dedication, strategic insights and nurturing the right talent have transformed the team.
India is grateful to him for his contributions and for inspiring generations. We are… pic.twitter.com/8MKSPqztDV— Narendra Modi (@narendramodi) June 30, 2024
">June 30, 2024
ಟಿ20 ವಿಶ್ವಕಪ್ ಗೆಲುವಿನೊಂದಿಗೆ ರಾಹುಲ್ ದ್ರಾವಿಡ್ರ ಕೋಚ್ ಅವಧಿ ಅಂತ್ಯವಾಗಿದೆ. ನಿರ್ಗಮಿಸ್ತಾ ಇರುವ ಹೆಡ್ ಮಾಸ್ಟರ್ಗೆ ಗೆಲುವಿನ ಉಡುಗೊರೆ ನೀಡಿರುವ ಕ್ರಿಕೆಟರ್ಸ್, ಮೈದಾನದಲ್ಲೇ ಅವರನ್ನು ಎತ್ತಾಡಿಸಿ ವಿಶೇಷ ಗೌರವ ಸಲ್ಲಿಸಿದರು. ಟ್ರೋಫಿ ಕೈಗೆ ಸಿಕ್ಕ ಬಳಿಕ ಆಟಗಾರರ ಸಂತೋಷಕ್ಕೆ ಪಾರವೇ ಇರಲಿಲ್ಲ. ಮೈದಾನದಲ್ಲಿ ಸಖತ್ ಸ್ಟೆಪ್ಸ್ ಹಾಕಿ ಮಿಂಚಿದ್ರು. ರಾಹುಲ್ ದ್ರಾವಿಡ್ ಕೂಡ ಟ್ರೋಫಿಯನ್ನು ಒಮ್ಮೆ ಎತ್ತಿ ಎಲ್ಲ ಆಟಗಾರರೊಂದಿಗೆ ಸಂಭ್ರಮಿಸಿದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ