ಟೀಮ್ ಇಂಡಿಯಾಗೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಕೋಚ್ ರಾಹುಲ್ ದ್ರಾವಿಡ್
ಭಾರತ ತಂಡದ ಕೋಚ್ ಹುದ್ದೆ ತೊರೆದ ರಾಹುಲ್ ದ್ರಾವಿಡ್ಗೆ ಡಿಮ್ಯಾಂಡ್
ರಾಹುಲ್ ದ್ರಾವಿಡ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಣೆ!
ಬರೋಬ್ಬರಿ 17 ವರ್ಷಗಳ ತಪಸ್ಸಿನ ಬಳಿಕ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದಿದೆ. ವಿಶ್ವಕಪ್ ಗೆದ್ದ ಬೆನ್ನಲ್ಲೇ ಕ್ಯಾಪ್ಟನ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ಗೆ ಗುಡ್ ಬೈ ಹೇಳಿದ್ರು. ಜತೆಗೆ ಟೀಮ್ ಇಂಡಿಯಾ ಮುಖ್ಯ ಕೋಚ್ ಸ್ಥಾನದಿಂದ ರಾಹುಲ್ ದ್ರಾವಿಡ್ ಕೂಡ ಕೆಳಗಿಳಿದ್ರು.
ಇನ್ನು, ರಾಹುಲ್ ದ್ರಾವಿಡ್ ನಿರ್ಗಮನದ ಬಳಿಕ ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಅನೌನ್ಸ್ ಆಗಿದ್ದಾರೆ. ಹಾಗಾಗಿ ರಾಹುಲ್ ದ್ರಾವಿಡ್ ಈಗ ರೆಸ್ಟ್ನಲ್ಲಿದ್ದು, ವಿಶ್ವಕಪ್ ಗೆಲ್ಲಿಸಿಕೊಟ್ಟ ಕೋಚ್ಗೆ ಭಾರೀ ಡಿಮ್ಯಾಂಡ್ ಶುರುವಾಗಿದೆ.
ಹೌದು, 2025ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಈಗಿನಿಂದಲೇ ಎಲ್ಲಾ ಫ್ರಾಂಚೈಸಿಗಳು ತಯಾರಿ ನಡೆಸಿಕೊಂಡಿದೆ. ಈ ವರ್ಷದ ಕೊನೆ ಡಿಸೆಂಬರ್ ತಿಂಗಳಲ್ಲಿ 2025ರ ಐಪಿಎಲ್ನ ಮೆಗಾ ಆಕ್ಷನ್ ನಡೆಯಲಿದೆ. ಈ ಮೆಗಾ ಆಕ್ಷನ್ನಲ್ಲಿ ಐಪಿಎಲ್ ಫ್ರಾಂಚೈಸಿಗಳು ಎಲ್ಲರನ್ನು ಬಿಟ್ಟು ತಮಗೆ ಬೇಕಾದ ಆಟಗಾರರನ್ನು ಮತ್ತೆ ಖರೀದಿ ಮಾಡಬೇಲೇಬೇಕಿದೆ. ಈ ಮುನ್ನವೇ ರಾಹುಲ್ ದ್ರಾವಿಡ್ಗೆ ಹಲವು ಫ್ರಾಂಚೈಸಿಗಳು ಮಣೆ ಹಾಕಿವೆ ಎನ್ನಲಾಗುತ್ತಿದೆ.
ಆರ್ಸಿಬಿ ಟೀಮ್ಗೆ ದ್ರಾವಿಡ್ ಎಂಟ್ರಿ!
ಕೆಕೆಆರ್, ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ರಾಹುಲ್ ದ್ರಾವಿಡ್ ಅವರನ್ನು ಕೋಚ್ ಆಗುವಂತೆ ಅಪ್ರೋಚ್ ಮಾಡಿವೆ ಎಂದು ತಿಳಿದು ಬಂದಿದೆ. ಗಮನಾರ್ಹ ವಿಚಾರ ಎಂದರೆ ಆರ್ಸಿಬಿ ಕೂಡ ದ್ರಾವಿಡ್ ಅವರನ್ನು ತವರು ಟೀಮ್ಗೆ ಕರೆ ತರೋ ಪ್ರಯತ್ನ ಮಾಡುತ್ತಿದೆ. ಹಾಗಾಗಿ ಆರ್ಸಿಬಿ ತಂಡದ ಕೋಚ್ ಆಗಲಿದ್ದಾರಾ ದ್ರಾವಿಡ್? ಎಂಬ ಚರ್ಚೆ ಜೋರಾಗಿದೆ.
ಇದನ್ನೂ ಓದಿ: ಭಾರತ ತಂಡಕ್ಕೆ ಮೋಸ ಮಾಡಿ ಸಿಕ್ಕಿಬಿದ್ದ ಸ್ಟಾರ್ ಬ್ಯಾಟರ್.. ಪಂತ್ ವಿರುದ್ಧ ಕೇಳಿ ಬಂದ ಆರೋಪವೇನು?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್