newsfirstkannada.com

ರಾಹುಲ್​ ದ್ರಾವಿಡ್​ ಬೆನ್ನಿಗೆ ಬಿದ್ದ ಟಾಪ್​ IPL ಫ್ರಾಂಚೈಸಿಗಳು.. ಬ್ಲ್ಯಾಂಕ್ ಚೆಕ್ ಆಫರ್ ತಿರಸ್ಕರಿಸಿದ ಕನ್ನಡಿಗ

Share :

Published September 9, 2024 at 11:13am

    ಕೋಚ್ ಆಗಿರುವುದರ ಹಿಂದೆ ಇಂಟ್ರೆಸ್ಟಿಂಗ್ ಕಹಾನಿ

    9 ವರ್ಷದ ಬಳಿಕ ಮತ್ತೆ ಕೋಚ್​​​​​​​​​​​​ ಆಗಿ IPL​​​ಗೆ ಎಂಟ್ರಿ

    ನಿಮ್ಗೆ ಎಷ್ಟು ಬೇಕೋ ಅಷ್ಟು ಚೆಕ್​ನಲ್ಲಿ ಬರೆದುಕೊಳ್ಳಿ

ಕೊನೆಗೂ ‘ನಿರುದ್ಯೋಗಿ’ ರಾಹುಲ್ ದ್ರಾವಿಡ್​​​​ ಉದ್ಯೋಗಿ ಆಗಿದ್ದಾರೆ. ರಾಜಸ್ಥಾನ ರಾಯಲ್ಸ್​ ತಂಡದ ಹೆಡ್​ಕೋಚ್​ ಹುದ್ದೆ ಅರಸಿ ಬಂದಿದೆ. ಆದ್ರೆ ದಿ ವಾಲ್​​ ರಾಜಸ್ಥಾನ ಕೋಚ್​​​​​​​​​​​​​ ಆಗೋದು ಅಷ್ಟೊಂದು ಸುಲಭವಿರಲಿಲ್ಲ. ಅದರ ಹಿಂದೆ ಒಂದು ಇಂಟ್ರೆಸ್ಟಿಂಗ್ ಕಹಾನಿ ಇದೆ.

ಟೀಮ್ ಇಂಡಿಯಾಗೆ ಹಿಸ್ಟಾರಿಕಲ್​ ಟಿ20 ವಿಶ್ವಕಪ್ ಗೆಲ್ಲಿಸಿ, ಹೆಡ್​ಕೋಚ್​ ಹುದ್ದೆಗೆ ಗುಡ್​ಬೈ ಹೇಳಿದ ರಾಹುಲ್​ ದ್ರಾವಿಡ್ ಮುಂದೇನ್ ಮಾಡ್ತಾರೆ ಅನ್ನೋ ಪ್ರಶ್ನೆಗೆ ಕೊನೆಗೂ ಆನ್ಸರ್ ಸಿಕ್ಕಿದೆ. 140 ಕೋಟಿ ಭಾರತೀಯರ ಮನಗೆದ್ದ ಮಹಾರಾಜ ಮತ್ತೆ ಐಪಿಎಲ್​​ಗೆ ರಿಟರ್ನ್​ ಆಗಿದ್ದಾರೆ. ರಾಜಸ್ಥಾನ ರಾಯಲ್ಸ್​ ತಂಡದ ಹೆಡ್​ಕೋಚ್ ಆಗಿ ದಿ ವಾಲ್​ ನೇಮಕಗೊಂಡಿದ್ದಾರೆ. ಆ ಮೂಲಕ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಮತ್ತೆ ರಾಹುಲ್​ ದ್ರಾವಿಡ್​ ದರ್ಬಾರ್ ಶುರುವಾಗಿದೆ.

ಇದನ್ನೂ ಓದಿ: 7 ವರ್ಷ ಪ್ರೀತಿಸಿ ಮದುವೆ, ವಿರಾಟ್ ಕೊಹ್ಲಿ -ಅನುಷ್ಕಾ ಪವರ್​​ಫುಲ್​ ಕಪಲ್.. ಇವರ ಬ್ಯುಸಿನೆಸ್ ಗುಟ್ಟು ಏನು?​

ದ್ರಾವಿಡ್​ಗೆ ಹೈ ಪ್ರೊಫೈಲ್​​ ತಂಡಗಳಿಂದ ಬ್ಲ್ಯಾಂಕ್​ ಚೆಕ್ ಆಫರ್​​​..!

ದಿ ವಾಲ್​ ಖ್ಯಾತಿಯ ದ್ರಾವಿಡ್​ 9 ವರ್ಷಗಳ ಬಳಿಕ ಮತ್ತೆ ಕೋಚ್​​​​​​​​​​​​ ಆಗಿ ಐಪಿಎಲ್​​​ಗೆ ಎಂಟ್ರಿಕೊಟ್ಟಿದ್ದಾರೆ. ಅದು ತಮ್ಮ ನೆಚ್ಚಿನ ರಾಜಸ್ಥಾನ ರಾಯಲ್ಸ್​ ತಂಡಕ್ಕೆ. ಇದು ಸದ್ಯಕ್ಕೆ ಎಲ್ಲರಿಗೂ ಗೊತ್ತಿರೋ ಸಂಗತಿ. ಆದ್ರೆ ಇದೀಗ ನಿಮಗೆ ಗೊತ್ತಿರದ ಬಿಗ್​​ಅಪ್​ಡೇಟ್ ನ್ಯೂಸ್​​​​ವೊಂದು ಹೊರಬಿದ್ದಿದೆ. ಅದೇನಂದ್ರೆ ರಾಯಲ್ಸ್​​​ ತಂಡದ ಹೆಡ್​ಕೋಚ್​​ ಆಗಿ 2025ನೇ ಐಪಿಎಲ್ ಸೀಸನ್​ನಲ್ಲಿ ಕಮಾಲ್ ಮಾಡಲು ಸಜ್ಜಾಗಿರೋ ರಾಹುಲ್​ ದ್ರಾವಿಡ್​ ಸೆಳೆಯಲು ಹೈ ಪ್ರೊಫೈಲ್​ ಫ್ರಾಂಚೈಸಿಗಳು ಬ್ಲ್ಯಾಂಕ್​​ ಚೆಕ್​​​​ ಆಫರ್​ ನೀಡಿದ್ವಂತೆ. ಆದ್ರೆ ಅದನ್ನ ತಿರಸ್ಕರಿಸಿ ಮತ್ತೆ ರಾಜಸ್ಥಾನದ ಗೂಡಿಗೆ ಮರಳಿದ್ದಾರೆ.

ಬ್ಲ್ಯಾಂಕ್​​ ಚೆಕ್​​ ಆಫರ್​​​ ಬಿಟ್ಟು,’ರಾಯಲ್’​​​​​ ಸಂಬಂಧಕ್ಕೆ ಜೈ..!

ರಾಹುಲ್​ ದ್ರಾವಿಡ್​​​​​​ ಟೀಮ್ ಇಂಡಿಯಾಗೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಬೆನ್ನಲ್ಲೆ ದಿ ವಾಲ್​​​​ಗೆ ಫುಲ್ ಡಿಮ್ಯಾಂಡ್ ಬಂತು. ಕೆಲ ಬಲಿಷ್ಠ ಐಪಿಎಲ್ ಫ್ರಾಂಚೈಸಿಗಳು ಚಾಂಪಿಯನ್ ಕೋಚ್​​ನನ್ನ ಸೆಳೆಯಲು ಬ್ಲ್ಯಾಂಕ್​ ಚೆಕ್​ ಆಫರ್​​ ನೀಡಿದ್ವು. ನಿಮಗೆ ಎಷ್ಟು ಬೇಕೋ ಅಷ್ಟು ಬರೆದುಕೊಳ್ಳಿ. ನಮ್ಮ ತಂಡಕ್ಕೆ ಬನ್ನಿ ಅನ್ನೋ ಬಿಗ್​ ಆಫರ್​ ಮುಂದಿಟ್ಟಿದ್ವು. ಆದ್ರೆ ಬ್ಲ್ಯಾಂಕ್​ ಆಫರ್​​​​​ ಸಾರಸಗಟವಾಗಿ ತಿರಸ್ಕರಿಸಿದ ದ್ರಾವಿಡ್​​ ರಾಜಸ್ಥಾನ ಜತೆಗಿನ ರಾಯಲ್ ಸಂಬಂಧಕ್ಕೆ ಜೈ ಅಂದಿದ್ದಾರೆ.

ದ್ರಾವಿಡ್​​ ರಾಜಸ್ಥಾನ ತಂಡದ ಹೆಡ್​ಕೋಚ್​ ಆಫರ್​ ಒಪ್ಪಿದ್ದೇಕೆ..?

ಒಂದು ವೇಳೆ ದ್ರಾವಿಡ್​ ಹೈ ಫ್ರೊಫೈಲ್​ ಫ್ರಾಂಚೈಸಿಗಳ ಬ್ಲ್ಯಾಂಕ್​​​​ ಚೆಕ್​​​​ ಆಫರ್​ ಒಪ್ಪಿದ್ರೆ ಅವರು ಬಯಸಿದಷ್ಟು ಹಣ ಸಿಗ್ತಿತ್ತು. ಬಹುಶಃ ಐಪಿಎಲ್​​​​ ಕೋಚ್​ಗಳ ಪೈಕಿ ಹೆಚ್ಚಿನ ವೇತನ ಪಡೆಯಬಹುದಿತ್ತು. ಆದ್ರೆ ದ್ರಾವಿಡ್ ಹಾಗೆ ಮಾಡಲಿಲ್ಲ. ಹಣಕ್ಕಿಂತ, ಬಾಂಧವ್ಯಕ್ಕೆ ಹೆಚ್ಚು ಒತ್ತು ನೀಡಿ ರಾಜಸ್ಥಾನ ರಾಯಲ್ಸ್​​ ತಂಡದ ಕೋಚಿಂಗ್ ಹುದ್ದೆಯನ್ನ ಒಪ್ಪಿಕೊಂಡಿದ್ದಾರೆ. ಇದಕ್ಕೆ ಅನೇಕ ಕಾರಣಗಳಿವೆ.

ಇದನ್ನೂ ಓದಿ: ರೋಹಿತ್ ಲೇಜಿಯಾಗಿ, ಕ್ಯಾಸುವೆಲ್ ಆಗಿ ಕಾಣುತ್ತಾರೆ.. ಆದ್ರೆ ಸತ್ಯವಾಗಲೂ..; ಅಂಪೈರ್ ಬಿಗ್​ ಸ್ಟೇಟ್​ಮೆಂಟ್!

ದ್ರಾವಿಡ್​​ ರಾಜಸ್ಥಾನ ಹೆಡ್​​​ ಕೋಚ್​ ಆಗಿದ್ದೇಕೆ..?

  • ದ್ರಾವಿಡ್​​​-ರಾಜಸ್ಥಾನ ನಡುವೆ ಅವಿನಾಭಾವ ಸಂಬಂಧ
  • 2011ರ ಹರಾಜಿನಲ್ಲಿ ದ್ರಾವಿಡ್​ ಖರೀದಿಸಿದ್ದ ರಾಜಸ್ಥಾನ
  • 2011 ರಿಂದ 2013ರ ತನಕ ರಾಯಲ್ಸ್​​​ ಪರ ಕಣಕ್ಕೆ
  • 2014 ಹಾಗೂ 2015 ರಲ್ಲಿ ಕೋಚ್ ಆಗಿ ಕಾರ್ಯ ನಿರ್ವಹಣೆ
  • ದ್ರಾವಿಡ್​ ಶಿಷ್ಯ ಸ್ಯಾಮ್ಸನ್​ ರಾಜಸ್ಥಾನ ತಂಡದ ಕ್ಯಾಪ್ಟನ್

ಟೀಮ್ ಇಂಡಿಯಾಗೆ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆಲ್ಲಿಸಿದ ದಿ ವಾಲ್ ಕೋಚ್​ ಆದ ಬೆನ್ನಲ್ಲೆ ಅಪಾರ ನಿರೀಕ್ಷೆಗಳು ಗರಿಗೆದರಿವೆ. ಗುರು ದ್ರಾವಿಡ್​​​​, ಶಿಷ್ಯ ಸ್ಯಾಮ್ಸನ್​​ ಕೆಮಿಸ್ಟ್ರಿಯಲ್ಲಿ ಹೊಸ ಯುಗಾರಂಭಗೊಳ್ಳಲಿದೆ ಅನ್ನೋ ಟಾಕ್ಸ್ ಕೇಳಿ ಬರ್ತಿದೆ. ಚಾಂಪಿಯನ್ ಕ್ಯಾಪ್ಟನ್​ ದ್ರಾವಿಡ್​​ ಬ್ಲೂ ಜರ್ಸಿಯಲ್ಲಿ ಸಕ್ಸಸ್ ಕಂಡಂತೆ ಐಪಿಎಲ್​ ಕೋಚ್ ಸಕ್ಸಸ್​ ಕಾಣಲಿ ಅನ್ನೋದು ಎಲ್ಲ ಕನ್ನಡಿಗರ ಆಶಯವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ರಾಹುಲ್​ ದ್ರಾವಿಡ್​ ಬೆನ್ನಿಗೆ ಬಿದ್ದ ಟಾಪ್​ IPL ಫ್ರಾಂಚೈಸಿಗಳು.. ಬ್ಲ್ಯಾಂಕ್ ಚೆಕ್ ಆಫರ್ ತಿರಸ್ಕರಿಸಿದ ಕನ್ನಡಿಗ

https://newsfirstlive.com/wp-content/uploads/2024/09/RAHUL_DRAVID.jpg

Load More