newsfirstkannada.com

ಇಂದು ಮಲೆನಾಡ ಹೆಬ್ಬಾಗಿಲಿನಲ್ಲಿ ರಾಹುಲ್ ಮತಬೇಟೆ.. ಅಶ್ಲೀಲ ವಿಡಿಯೋ ಪ್ರಕರಣವನ್ನೇ ಅಸ್ತ್ರವಾಗಿಸೋ ಸಾಧ್ಯತೆ

Share :

Published May 2, 2024 at 7:31am

  ಪ್ರಜ್ವಲ್‌ ಕೇಸ್​ನಲ್ಲೂ ಕಾಂಗ್ರೆಸ್​ ರಾಜಕೀಯ ಮಾಡ್ತಿದೆ

  ಕಾಂಗ್ರೆಸ್​ ಕಲಿಗಳಿಗೆ ಬ್ರಹ್ಮಾಸ್ತ್ರವಾದ ಹಾಸ ಅಶ್ಲೀಲ ವಿಡಿಯೋ ಕೇಸ್​

  ಶಿವಮೊಗ್ಗದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಗೀತಾ ಶಿವರಾಜ್ ವಿರುದ್ಧ ರಾಹುಲ್​ ಮತಬೇಟೆ

ಅಶ್ಲೀಲ ವಿಡಿಯೋ ಪ್ರಕರಣವನ್ನೇ ಹಿಡಿದು ಲೋಕ ಸಮರದಲ್ಲಿ ಸೆಣಸಾಡ್ತಿರೋ ಕಾಂಗ್ರೆಸ್​ ಪಡೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಟಕ್ಕರ್​ ನೀಡಿದ್ದಾರೆ. ರಾಜ್ಯ ಸರ್ಕಾರದ ವಿರುದ್ದವೇ ಅಮಿತ್​ ಶಾ ಮುರಿದು ಬಿದ್ದಿದ್ದಾರೆ. ಇನ್ನೂ ಇಂದು ಮಲೆನಾಡ ಹೆಬ್ಬಾಗಿಲಿನಲ್ಲಿ ಮತ ಶಿಕಾರಿ ನಡೆಸಲಿರೋ ರಾಹುಲ್ ಗಾಂಧಿ ಪ್ರಜ್ವಲ್​ ಪ್ರಕರಣವನ್ನ ಹಿಡಿದು ಮೈತ್ರಿ ಪಡೆ ವಿರುದ್ಧ ಹರಿಹಾಯೋ ಸಾಧ್ಯತೆ ಇದೆ.

ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿರೋ ಹಾಸನ ಹಸಿಬಿಸಿ ವಿಡಿಯೋಗಳು ಸದ್ಯ ಕಾಂಗ್ರೆಸ್​ ಕಲಿಗಳಿಗೆ ಬ್ರಹ್ಮಾಸ್ತ್ರವಾಗಿದೆ. ಅಶ್ಲೀಲ ವಿಡಿಯೋಗಳನ್ನೇ ಕಾಂಗ್ರೆಸ್​ ಪಡೆ ಆಯುಧ ಮಾಡಿಕೊಂಡಿದ್ದು, ಬಿಜೆಪಿ ಹೈಕಮಾಂಡ್​ ನಾಯಕರ ವಿರುದ್ಧ ವಾಗ್ದಾಳಿ ನಡೆಸ್ತಿದೆ. ಹಾಸನದ ಅಶ್ಲೀಲ ಪ್ರಕರಣದ ಬಗ್ಗೆ ಮೋದಿ, ಅಮಿತ್ ಶಾ ಉತ್ತರಿಸಬೇಕು ಅಂತ ವಾಗ್ಬಾಣಗಳನ್ನ ಬಿಡ್ತಿದೆ. ಕಾಂಗ್ರೆಸ್​ ಆರೋಪಕ್ಕೆ ಸಿಡಿದೆದ್ದಿರೋ ಕೇಂದ್ರ ಗೃಹಸಚಿವ ಅಮಿತ್ ಶಾ ಪ್ರಜ್ವಲ್​ ಅಶ್ಲೀಲ ವಿಡಿಯೋ ಪ್ರಕರಣದ ಬಗ್ಗೆ ಮೌನ ಮುರಿದಿದ್ದಾರೆ. ಕಾಂಗ್ರೆಸ್​ ಸರ್ಕಾರದ ವಿರುದ್ದವೇ ಆರೋಪದ ಸಿಡಿಗುಂಡು ಸಿಡಿಸಿದ್ದಾರೆ.

ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ಅಮಿತ್ ಶಾ ಕಿಡಿ

ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಭಾಗಿಯಾಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅಶ್ಲೀಲ ವಿಡಿಯೋ ಪ್ರಕರಣದ ಬಗ್ಗೆ ಮೌನ ಮುರಿದ್ದಾರೆ.. ರಾಜ್ಯ ಸರ್ಕಾರದ ವಿರುದ್ದವೇ ಮುರಿದು ಬಿದ್ದ ಅಮಿತ್ ಶಾ, ಪ್ರಜ್ವಲ್‌ನನ್ನ ವಿದೇಶಕ್ಕೆ ಹಾರಿಹೋಗಲು ಏಕೆ ಬಿಟ್ರಿ ಅಂತ ಪ್ರಶ್ನೆ ಮಾಡಿದ್ದಾರೆ.. ಅಲ್ಲದೇ ಈ ಪ್ರಕರಣದಲ್ಲಿಯೂ ಕಾಂಗ್ರೆಸ್ ರಾಜಕಾರಣ ಮಾಡ್ತಿದೆ ಅಂತ ಗರಂ ಆಗಿದ್ದಾರೆ.

ಅಮಿತ್​ ಶಾ ಮತ್ತು ಹೆಚ್​ ಡಿ ಕುಮಾರಸ್ವಾಮಿ

ಈಗ ನಮ್ಮ ಜೆಡಿಎಸ್​ ಮೇಲೆ ಆರೋಪವಿದೆ. ರೇವಣ್ಣ ಅವರ ಸಿಡಿ ಬಂದಿದೆ. ಅದೇ ಕಾರಣಕ್ಕೆ ಬಿಜೆಪಿಯನ್ನ ಆರೋಪಿಸುತ್ತಿದ್ದಾರೆ. ನಾನು ಇವತ್ತು ಇದಕ್ಕೆ ಸ್ಪಷ್ಟನೆ ನೀಡುತ್ತಿದ್ದೇನೆ. ಯಾವುದೇ ಮಹಿಳೆ ಜೊತೆ ಯಾರೇ ಆದ್ರೂ ಅತ್ಯಾಚಾರ ನಡೆಸಿದ್ರೆ. ಭಾರತೀಯ ಜನತಾ ಪಾರ್ಟಿ ಅವರ ಜೊತೆ ನಿಲ್ಲುವುದಿಲ್ಲ. ಕೇಳಿ ಸಿದ್ದರಾಮಯ್ಯ ಜೀ, ಡಿ.ಕೆ ಶಿವಕುಮಾರ್​ ಜೀ, ಸರ್ಕಾರ ನಿಮ್ಮದೇ ಇದೆ. ಕಾಂಗ್ರೆಸ್​ ಪಕ್ಷದ್ದೇ ಇದೆ. ನೀವು ಯಾಕೆ ಈ ಬಗ್ಗೆ ಕ್ರಮ ಕೈಗೊಂಡಿಲ್ಲ?. ಪ್ರಜ್ವಲ್‌ನನ್ನ ವಿದೇಶಕ್ಕೆ ಹಾರಿಹೋಗಲು ಏಕೆ ಬಿಟ್ರಿ? ಕಠೋರ ಶಿಕ್ಷೆ ನೀಡಿ, ನಾವು ಅದಕ್ಕೆ ಬೆಂಬಲ ಕೊಡ್ತೇವೆ.

-ಅಮಿತ್ ಶಾ, ಕೇಂದ್ರ ಗೃಹ ಸಚಿವ

ಇದನ್ನೂ ಓದಿ: ಚಿಲ್ಲರೆ ಅಣ್ಣ-ತಮ್ಮ ನನ್ನನ್ನ ಕೆಣಕಿದ್ದಾರೆ, ಅಷ್ಟು‌ ಸುಲಭಕ್ಕೆ ಬಿಡಲ್ಲ; ಹಾಸನ ಅಶ್ಲೀಲ ವಿಡಿಯೋ ಕೇಸ್​ ವಿಚಾರವಾಗಿ HDK ಗರಂ

ರಾಜ್ಯದಲ್ಲಿ ಅಶ್ಲೀಲ ವಿಡಿಯೋ ಸಂಚಲನ ಮೂಡಿಸಿರೋ ಹೊತ್ತಲ್ಲೇ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಸಹ ಇವತ್ತೇ ರಾಜ್ಯಕ್ಕೆ ಲಗ್ಗೆ ಹಾಕ್ತಿದ್ದಾರೆ. ಈಗಾಗಲೇ ಪ್ರಜ್ವಲ್ ಅಶ್ಲೀಲ ವಿಡಿಯೋ ಪ್ರಕರಣದ ಕುರಿತು ಟ್ವೀಟ್​ ಮೂಲಕ ಮೋದಿ ವಿರುದ್ಧ ಕಿಡಿಕಾರಿರೋ ರಾಹುಲ್​ ಇಂದಿನ ಪ್ರಚಾರ ಸಭೆಗಳಲ್ಲೂ ಈ ವಿಚಾರ ಪ್ರಸ್ತಾಪಿಸುವ ಸಾಧ್ಯತೆ ಇದೆ.

ಶಿವ ರಾಜ್​ಕುಮಾರ್ ಮತ್ತು ಗೀತಾ ಶಿವ ರಾಜ್​ಕುಮಾರ್​

ಶಿವಮೊಗ್ಗದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಗೀತಾ ಶಿವರಾಜ್​ ಕುಮಾರ್​ ಪರ ಸಂಜೆ 4 ಗಂಟೆಗೆ ರಾಹುಲ್ ಗಾಂಧಿ ಪ್ರಚಾರ ನಡೆಸಲಿದ್ದು ಇದಕ್ಕೂ ಮುನ್ನ ಮಧ್ಯಾಹ್ನ 12 ಗಂಟೆಗೆ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಜಿ.ಕುಮಾರ್ ನಾಯ್ಕ್ ಪರ ಮತಬೇಟೆ ಆಡಲಿದ್ದಾರೆ.

ಒಟ್ನಲ್ಲಿ ರಾಜ್ಯದ 2ನೇ ಹಂತದ ಲೋಕಸಭಾ ಚುನಾವಣೆಗೆ ಅಶ್ಲೀಲ ವಿಡಿಯೋವನ್ನೇ ಅಸ್ತ್ರವಾಗಿಸಿಕೊಂಡಿರೋ ಕೈಪಡೆ ಹಳ್ಳಿಯಿಂದ ದಿಲ್ಲಿಯವರೆಗೂ ಮೈತ್ರಿ ನಾಯಕರ ವಿರುದ್ಧ ಮುಗಿಬೀಳ್ತಿದೆ. ಕಾಂಗ್ರೆಸ್​ ನಾಯಕರ ಕೌಂಟರ್​ಗೆ ಟಕ್ಕರ್ ನೀಡಲಾಗದೇ ಸೈಲೆಂಟ್ ಆಗಿರೋ ಕೇಸರಿ ಪಾಳಯ ಮತ್ತಿನ್ಯಾವ ಅಸ್ತ್ರ ಪ್ರಯೋಗಿಸಲಿದೆ ಅಂತ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು ಮಲೆನಾಡ ಹೆಬ್ಬಾಗಿಲಿನಲ್ಲಿ ರಾಹುಲ್ ಮತಬೇಟೆ.. ಅಶ್ಲೀಲ ವಿಡಿಯೋ ಪ್ರಕರಣವನ್ನೇ ಅಸ್ತ್ರವಾಗಿಸೋ ಸಾಧ್ಯತೆ

https://newsfirstlive.com/wp-content/uploads/2024/05/rahul-gandhi-and-Geetha.jpg

Load More