newsfirstkannada.com

ಚಿಲ್ಲರೆ ಅಣ್ಣ-ತಮ್ಮ ನನ್ನನ್ನ ಕೆಣಕಿದ್ದಾರೆ, ಅಷ್ಟು‌ ಸುಲಭಕ್ಕೆ ಬಿಡಲ್ಲ; ಹಾಸನ ಅಶ್ಲೀಲ ವಿಡಿಯೋ ಕೇಸ್​ ವಿಚಾರವಾಗಿ HDK ಗರಂ

Share :

Published May 2, 2024 at 6:56am

    ದಳಕೋಟೆಯನ್ನ ಕಂಪಿಸುವಂತೆ ಮಾಡಿದ ‘ಡರ್ಟಿ ಪಿಕ್ಚರ್​​​’

    ಕೇಸ್​​​ನಲ್ಲಿ ಅಪ್​ಸೆಟ್​​​ ಆದ್ರಾ ಹೆಚ್​​.ಡಿ.ಕುಮಾರಸ್ವಾಮಿ?

    ವಿಡಿಯೋ ವಿಚಾರವಾಗಿ ಡ್ಯಾಮೇಜ್ ಕಂಟ್ರೋಲ್

ಚಿಲ್ಲರೆ ಅಣ್ಣ-ತಮ್ಮ ನನ್ನನ್ನ ಕೆಣಕಿದ್ದಾರೆ. ಅಷ್ಟು‌ ಸುಲಭಕ್ಕೆ ಬಿಡಲ್ಲ. ಏನು ಮಾಡಬೇಕು ಅಂತ ಗೊತ್ತು. ಇದು ಮಾಜಿ ಸಿಎಂ ಹೆಚ್​ಡಿಕೆ ಗುಡುಗಿದ ಪರಿ. ಸೇಡಿಗೆ ಸೇಡು, ಮುಯ್ಯಿಗೆ ಮುಯ್ಯಿ ಅನ್ನೋ ರೀತಿ ಬ್ರದರ್ಸ್​​ ಜೊತೆ ಮತ್ತೊಂದು ಸುತ್ತಿನ ಸಮರಕ್ಕೆ ಗೌಡರ ಫ್ಯಾಮಿಲಿ ಸಜ್ಜಾಗಿದೆ.. ಡರ್ಟಿ ಪಿಕ್ಚರ್​​ ಡಿಸ್ಟ್ರಿಬ್ಯೂಟರ್​​ ಯಾರು ಅನ್ನೋ ಸ್ಮೆಲ್​​ ಬಲ್ಲ ಗೌಡರು, ತಮ್ಮ ಪದ್ಮನಾಭನಗರ ನಿವಾಸದಲ್ಲಿ ಮಧ್ಯ ರಾತ್ರಿವರೆಗೆ ಸಭೆ ನಡೆಸಿದ್ದಾರೆ.

ಗೌಡರ ಕುಟುಂಬಕ್ಕೀಗ ಸಂಕಷ್ಟದ ಕಾಲ. ಹೊತ್ತು ಹರಸಿದ ಹಾಸನದಲ್ಲಿ ತಲೆತಗ್ಗಿಸುವ ಈ ಘಟನೆ, ಆಘಾತ ತಂದಿದೆ. ಆರು ದಶಕಗಳ ಕಾಲ ಮೌಲ್ಯಯುತ ರಾಜಕಾರಣಕ್ಕೆ ಭಾಷ್ಯ ಬರೆದ ಜಿದ್ದಿನ ರಾಜಕಾರಣಿ ಗೌಡರಿಗೆ ಈ ಬೆಳವಣಿಗೆ ಹೊಸ ಸವಾಲು. ಮುದ್ದಿನ ಮೊಮ್ಮಗನ ರಾದ್ಧಾಂತಕ್ಕೆ ಮಧ್ಯ ರಾತ್ರಿವರೆಗೆ ಕುಟುಂಬಸ್ಥರ ಜೊತೆ ಸಭೆ ನಡೆಸುವಂತಾಗಿದೆ.

ದೇವೇಗೌಡ್ರ ಕುಟುಂಬದಲ್ಲಿ ಮುಂದಿನ ಹೋರಾಟಕ್ಕೆ ಸಿದ್ದತೆ

ಪ್ರಜ್ವಲ್ ವಿಡಿಯೋ ಕೇಸ್ ದಳಪತಿಗಳಿಗೆ ಸಂಕಷ್ಟ ತಂದಿದೆ. ನಿನ್ನೆ ಮಾಜಿ ಪ್ರಧಾನಿ ಗೌಡರ ಕಿವಿಗೆ ಕೇಸ್​​​ ತಲುಪಿದೆ. ಕೂಡಲೇ ಪದ್ಮನಾಭನಗರ ನಿವಾಸಕ್ಕೆ ಪುತ್ರರಾದ ಕುಮಾರಸ್ವಾಮಿ, ರೇವಣ್ಣ, ಬಾಲಕೃಷ್ಣೇಗೌಡ, ಅಳಿಯ ಮಂಜುನಾಥ್​​ ಜೊತೆ ಮಧ್ಯರಾತ್ರಿವರೆಗೂ ಚರ್ಚೆ ನಡೆಸಿದ್ದಾರೆ.

ಇದನ್ನೂ ಓದಿ: ರಾಜ್ಯದ ಜನರೇ ಎಚ್ಚರ! ದಿನಕ್ಕೆ 2-3 ಲೀಟರ್​ ನೀರು ಕುಡಿಯದಿದ್ರೆ ಜೀವಕ್ಕೆ ಅಪಾಯ ಗ್ಯಾರಂಟಿ!

ಮಹಾನಾಯಕನ ಬಣ್ಣ ಬಯಲು ಮಾಡುವ ಸಂಕಲ್ಪ

ವಿಡಿಯೋ ವಿಚಾರವಾಗಿ ಡ್ಯಾಮೇಜ್ ಕಂಟ್ರೋಲ್​ಗೆ ಗೌಡರ ಸಲಹೆ ನೀಡಿದ್ದಾರೆ. ಸಭೆಯಲ್ಲಿ ಎಚ್ಚರಿಕೆಯಿಂದ ಇರುವಂತೆ ರೇವಣ್ಣಗೆ ಸೂಚನೆ ಕೊಟ್ಟಿದ್ದಾರೆ ಅಂತ ಗೊತ್ತಾಗಿದೆ. ಪ್ರಜ್ವಲ್ ವಿದೇಶದಿಂದ ಭಾರತಕ್ಕೆ ವಾಪಸ್ ಆಗುವ ಬಗ್ಗೆ ಮಾಹಿತಿ ಸಹ ಪಡೆದಿದ್ದಾರೆ. ಇನ್ನು, ಮೋದಿಯವರನ್ನ ಕಾಂಗ್ರೆಸ್ ಟಾರ್ಗೆಟ್ ಮಾಡ್ತಿರುವುಕ್ಕೆ ನಾವೇ ಸೂಕ್ತ ಉತ್ತರ ನೀಡೋಣ ಅಂತ ಹೇಳಿದ್ದಾರೆ. ಕಾಂಗ್ರೆಸ್ ನಾಯಕರ ಆರೋಪಗಳಿಗೆ ಸುಮ್ಮನೆ ಇರೋದು ಬೇಡ ಅಂತ ತಿಳಿಸಿದ ಗೌಡ್ರು, ವಿಡಿಯೋ ವೈರಲ್ ಹಿಂದಿನ ಮಹಾ ನಾಯಕನ ಬಣ್ಣ ಬಯಲು ಮಾಡುವ ಸಂಕಲ್ಪ ತೊಟ್ಟಿದ್ದಾರೆ ಅಂತ ಹೇಳಲಾಗಿದೆ.

ಇದನ್ನೂ ಓದಿ: ಬೆಚ್ಚಿ ಬೀಳಿಸೋ ಸ್ಟೋರಿ! ಗರ್ಲ್​ಫ್ರೆಂಡ್​ ಜತೆ ಚಾಟ್​ ಮಾಡಿದ್ದ ಯುವಕನಿಗೆ ಪ್ರಿಯಕರ ಮಾಡಿದ್ದೇನು?

ಚಿಲ್ಲರೆ ಅಣ್ಣ ತಮ್ಮ ಎಂದು ಬ್ರದರ್ಸ್​​ ವಿರುದ್ಧ ವಾಗ್ದಾಳಿ!

ಪ್ರಕರಣ ಬಗ್ಗೆ ಮಾತ್ನಾಡಿದ ಮಾಜಿ ಸಿಎಂ ಹೆಚ್​​ಡಿಕೆ, ನೇರವಾಗಿ ಚಿಲ್ಲರೆ ಅಣ್ಣತಮ್ಮ ಅಂತ ಕಿಡಿ ಕಾರಿದ್ದಾರೆ. ನಿನ್ನೆ ಡ್ರೈವರ್ ವಿಡಿಯೋ ಮಾಡಿ ಹೇಳಿದ್ನಲ್ವಾ. ಯಾರ್ ವಿಡಿಯೋ ಮಾಡಿದ್ದು? ಅಂತ ಪ್ರಶ್ನಿಸಿದ ಹೆಚ್​​ಡಿಕೆ, ಆ ಕಾರ್ತಿಕ್ ಎಲ್ಲಿದ್ದಾನೆ ಅಂತ ಕೇಳಿದ್ರು. ಕಾರ್ತಿಕ್​ನ ಮಲೇಷ್ಯಾಗೆ ಕಳಿಸಿದ್ಯಾರು ಅಂತ ಸ್ಫೋಟಕ ಮಾಹಿತಿಯನ್ನ ಬಿಚ್ಚಿಟ್ಟಿದ್ದಾರೆ. ಇಷ್ಟಕ್ಕೆ ಸುಮ್ಮನಿರದ ಹೆಚ್​​ಡಿಕೆ, ಸುಲಭವಾಗಿ ನಮ್ಮನು ಕೆಣಕಿದ್ದಾರೆ ಬಿಡಲ್ಲ. ಸುಮ್ಮನೆ ಬಿಡಲ್ಲ ಅಂತ ಗುಡುಗಿದ್ದಾರೆ.

ಒಟ್ಟಾರೆ, ಹಾಸನದ ಡರ್ಟಿ ಪಿಕ್ಚರ್​​​ ದಳಕ್ಕೆ ತಳಮಳ ಹೆಚ್ಚಿಸಿದೆ.. ಪ್ರಜ್ವಲ್​​​ ಪ್ರಕರಣ ನಿಭಾವಣೆ ಮೊದಲ ಆದ್ಯತೆ ಆಗಿದೆ. ಆ ಬಳಿಕ ಭವಿಷ್ಯದಲ್ಲಿ ಪಕ್ಷದ ಮರುಏಳ್ಗೆ ಮತ್ತು ವರ್ಚಸ್ಸು ವೃದ್ಧಿಗೆ ಏನೆಲ್ಲಾ ಮಾಡಬೇಕು ಅನ್ನೋ ಪ್ಲಾನ್​​​ ಮುಂದಿನ ದಿನಗಳಲ್ಲಿ ಸಿದ್ಧವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಿಲ್ಲರೆ ಅಣ್ಣ-ತಮ್ಮ ನನ್ನನ್ನ ಕೆಣಕಿದ್ದಾರೆ, ಅಷ್ಟು‌ ಸುಲಭಕ್ಕೆ ಬಿಡಲ್ಲ; ಹಾಸನ ಅಶ್ಲೀಲ ವಿಡಿಯೋ ಕೇಸ್​ ವಿಚಾರವಾಗಿ HDK ಗರಂ

https://newsfirstlive.com/wp-content/uploads/2024/05/HDK-4.jpg

Load More